»   » ಮಲ್ಯ ಆಸ್ಪತ್ರೆಯಿಂದ 'ಮನಮೋಹಕ' ಶಿವಣ್ಣ ಮನೆಗೆ

ಮಲ್ಯ ಆಸ್ಪತ್ರೆಯಿಂದ 'ಮನಮೋಹಕ' ಶಿವಣ್ಣ ಮನೆಗೆ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಂಗಳವಾರದಂದು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಇದೀಗ ನಟ ಶಿವಣ್ಣ ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದೆ.

ಇಂದು (ಅಕ್ಟೋಬರ್ 8) ಬೆಳಿಗ್ಗೆ 11.30 ಕ್ಕೆ ನಟ ಶಿವಣ್ಣ ಅವರು ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬಂದ ಸಂದರ್ಭದಲ್ಲಿ ಅಭಿಮಾನಿಗಳು ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದರು.['ವಜ್ರಕಾಯ' ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ]

Kannada Actor Shiva Rajkumar discharged from Mallya Hospital

ನಟ ಶಿವಣ್ಣ ಅವರ ಸ್ವಾಗತಕ್ಕೆ ಅಭಿಮಾನಿಗಳು ಸುಮಾರು 20 ಕೆ.ಜಿ ಗೂ ಅಧಿಕ ವಿವಿಧ ಬಗೆಯ ಹೂವುಗಳನ್ನು ತಂದಿದ್ದು, ಶಿವಣ್ಣ ಅವರ ಮೇಲೆ ಹೂವಿನ ಮಳೆಗರೆವ ಮೂಲಕ ಶಿಳ್ಳೆ ಕೇಕೆ ಹಾಕಿ ತಮ್ಮ ಪ್ರೀತಿಯ ಹೀರೋನನ್ನು ಸ್ವಾಗತಿಸಿದರು.

ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ, ಅಭಿಮಾನಿಗಳತ್ತ ಕೈ ಬೀಸಿದ ಶಿವಣ್ಣ, ಏನು ಅಂತಹ ದೊಡ್ಡ ಪ್ರಾಬ್ಲಂ ಇಲ್ಲ. ಸಿನಿಮಾ ಇಂಡಸ್ಟ್ರಿಗೆ ಬಂದು ಸುಮಾರು 30 ವರ್ಷ ಆಯ್ತು, ಕಳೆದ ಒಂದು ವರ್ಷದಿಂದ ಸ್ವಲ್ಚ ಹೆಚ್ಚಿನ ಕೆಲಸ, ಶೂಟಿಂಗ್, ಮದುವೆ ಹೀಗೆ ಸ್ವಲ್ಪ ಒತ್ತಡ ಜಾಸ್ತಿ ಇತ್ತು.[ಸೆಂಚುರಿ ಸ್ಟಾರ್ ಶಿವಣ್ಣನ ಅನಾರೋಗ್ಯಕ್ಕೆ ನಿಜವಾದ ಕಾರಣವೇನು?]

ಮೊನ್ನೆ ಮಂಗಳವಾರ (ಅಕ್ಟೋಬರ್ 6) ರಂದು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ವಲ್ಪ ಎದೆನೋವು ಕಾಣಿಸಿಕೊಂಡಿತ್ತು, ತಕ್ಷಣ ನನ್ನ ಪತ್ನಿ ಗೀತಾ ಅವರಿಗೆ ಹೇಳಿದೆ ಅವರು ನನ್ನನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದರು. ಮತ್ತೆ ನಾವು ಮಲ್ಯ ಆಸ್ಪತ್ರೆಗೆ ಶಿಫ್ಟ್ ಆದ್ವಿ. ನನಗೆ ಡಾಕ್ಟರ್ ಎಲ್ಲಾ ತರದ ಟ್ರೀಟ್ ಮೆಂಟ್ ಮಾಡಿದ್ದಾರೆ ಇದೀಗ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

Kannada Actor Shiva Rajkumar discharged from Mallya Hospital

ಇನ್ನು ಅಭಿಮಾನಿಗಳ ಬಗ್ಗೆ ಶಿವಣ್ಣ ಅವರು, ಅಭಿಮಾನಿಗಳ ಪ್ರೀತಿ, ವಿಶ್ವಾಸ, ಪ್ರಾರ್ಥನೆಯಿಂದ ನಾನು ಸಂಪೂರ್ಣ ಫಿಟ್ ಅಂಡ್ ಫೈನ್ ಆಗಿದ್ದೇನೆ. ಜೊತೆಗೆ ಅಭಿಮಾನಿಗಳ ಈ ಪ್ರೀತಿಗೆ ನಾನು ಅರ್ಹನೋ ಇಲ್ವೋ ಗೊತ್ತಿಲ್ಲ. ಅಭಿಮಾನಿಗಳ ಪ್ರೀತಿ ವಿಶ್ವಾಸ ಸದಾ ಹೀಗೆ ನನ್ನ ಜೊತೆ ಇರಲಿ ಎಂದು ಮಲ್ಯ ಆಸ್ಪತ್ರೆ ಬಳಿ ಹೇಳಿಕೆ ನೀಡಿದ್ದಾರೆ.[ತುಳಸೀದಾಸರು ರಚಿಸಿದ ಶ್ರೀ ಹನುಮಾನ್ ಚಾಲೀಸಾ]

ಮಾತ್ರವಲ್ಲದೇ ಕೊಲಂಬಿಯಾ ಹಾಗೂ ಮಲ್ಯ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ, ಎಲ್ಲಾ ಡಾಕ್ಟರ್ಸ್, ಎಲ್ಲಾ ಬ್ರದರ್ಸ್, ಸಿಸ್ಟರ್ಸ್, ಹಾಗೂ ನನ್ನ ಕನ್ನಡ ಚಿತ್ರರಂಗದ ಎಲ್ಲಾ ಗೆಳೆಯರಿಗೆ ಹಾಗೂ ಸ್ಪೆಷಲ್ ಆಗಿ ನನ್ನ ಹೆಂಡತಿ ಗೀತಾ ಹಾಗೂ ನನ್ನ ಎಲ್ಲಾ ಕುಟುಂಬ ವರ್ಗದವರಿಗೂ ನನ್ನ ಧನ್ಯವಾದ ಎಂದಿದ್ದಾರೆ

ಇನ್ನು ಅಭಿಮಾನಿಗಳನ್ನುದ್ದೇಶಿಸಿ ಶಿವಣ್ಣ ಅವರು ನಿಮ್ಮ ಶಿವಣ್ಣನಿಗೆ ಮೊದಲು ಇದ್ದ ಎನರ್ಜಿನೇ ಇನ್ನು ಇರುತ್ತೇ, ಯಾವಾಗ್ಲೂ ಶಿವಣ್ಣ ಇನ್ ಆಕ್ಷನ್, ಅಭಿಮಾನಿಗಳೇ ದಯವಿಟ್ಟು ಇಲ್ಲಿ ನಿಲ್ಲಬೇಡಿ ಆತಂಕ ಪಡಬೇಡಿ ಮನೆಗೆ ಹೋಗಿ ಎಂದು ಶಿವಣ್ಣ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ.

Kannada Actor Shiva Rajkumar discharged from Mallya Hospital

ಮಲ್ಯ ಆಸ್ಪತ್ರೆಯ ವೈದ್ಯರಾದ ಡಾ.ಶ್ರೀನಿವಾಸ್ ಪ್ರಸಾದ ಅವರು ಶಿವಣ್ಣ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಕಂಪ್ಲೀಟ್ ಫಿಟ್ ಮತ್ತು ಫೈನ್ ಆಗಿದ್ದಾರೆ. ಎದೆ ನೋವು ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತದೆ, ಅದೇ ತರ ಶಿವಣ್ಣ ಅವರಿಗೂ ಕಾಣಿಸಿಕೊಂಡಿದೆ.

ಶಿವರಾಜ್ ಕುಮಾರ್ ಅವರು ಚಿತ್ರೀಕರಣದಲ್ಲಿ ಭಾಗವಹಿಸಬಹುದು. ವ್ಯಾಯಾಮ, ಡಯಟ್ ಬಗ್ಗೆ ಈಗಾಗಲೇ ಟಿಪ್ಸ್ ನೀಡಿದ್ದೇನೆ, ಶಿವಣ್ಣ ಅವರು ಈಗಲೇ ಶೂಟಿಂಗ್ ಹೋಗುವಷ್ಟು ಫಿಟ್ ಆಗಿದ್ದಾರೆ, ಅವರು ರೆಡಿ ಇದ್ದಾರೆ. ಆದರೆ ಒಂದು ವಾರಗಳ ಕಾಲ ಸಂಪೂರ್ಣ ರೆಸ್ಟ್ ತೆಗೆದುಕೊಳ್ಳಬೇಕು ಎಂದು ನಾನೇ ತಿಳಿಸಿದ್ದೇನೆ ಎಂದಿದ್ದಾರೆ.

ಇದೀಗ ನಾಗವಾರದ ತಮ್ಮ ಮನೆ ಕಡೆ ತೆರಳಿರುವ ಶಿವಣ್ಣ ಅವರು ಸಂಪೂರ್ಣ ವಿಶ್ರಾಂತಿಯ ಬಳಿಕ ಮತ್ತೆ ಒಂದು ತಿಂಗಳ ನಂತರ ಶೂಟಿಂಗ್ ಗೆ ಹಿಂತಿರುಗುವ ಮೂಲಕ ಶಿವಣ್ಣ ಬ್ಯಾಕ್ ಇನ್ ಆಕ್ಷನ್.

    English summary
    Kannada Actor Shivarajkumar discharged from Mallya Hospital at 11.30 Am on Thursday (October 8). Shivarajkumar has suffered a mild heart attack and has been admitted to Mallya Hospital, Bengaluru On Tuesday (October 6th).

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada