»   » ''ನಮಗೆಲ್ಲಾ ನಾಚಿಕೆ ಆಗ್ಬೇಕು'' ಎಂದ ಹ್ಯಾಟ್ರಿಕ್ ಹೀರೋ ಶಿವಣ್ಣ

''ನಮಗೆಲ್ಲಾ ನಾಚಿಕೆ ಆಗ್ಬೇಕು'' ಎಂದ ಹ್ಯಾಟ್ರಿಕ್ ಹೀರೋ ಶಿವಣ್ಣ

Posted By:
Subscribe to Filmibeat Kannada

ದಕ್ಷ ಅಧಿಕಾರಿ ಡಿ.ಕೆ.ರವಿ ಸಾವಿಗೆ ಇಡೀ ಕರ್ನಾಟಕ ಜನತೆ ಕಂಬನಿ ಮಿಡಿದಿದೆ. ಭ್ರಷ್ಟ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದೆ. ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ರಾಜ್ಯದೆಲ್ಲೆಡೆ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ.

ಇದು ರಾಜ್ಯದ ಪರಿಸ್ಥಿತಿಯಾದರೆ, ಸ್ಯಾಂಡಲ್ ವುಡ್ ನಲ್ಲಿ 'ಡಿ.ಕೆ.ರವಿ' ಟೈಟಲ್ ಗಾಗಿ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು ಮುಗಿ ಬೀಳುತ್ತಿರುವುದು ನಿಮಗೆ ಗೊತ್ತಿದೆ. ಸನ್ನಿವೇಶವನ್ನ ಲಾಭ ಮಾಡಿಕೊಳ್ಳುವ ನಿರ್ಮಾಪಕರ ಮಧ್ಯೆ ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಡಿ.ಕೆ.ರವಿ ಪರ ದನಿಯೆತ್ತಿದ್ದಾರೆ. [ಸ್ಯಾಂಡಲ್ ವುಡ್ ನಲ್ಲಿ 'ಡಿ.ಕೆ.ರವಿ' ಟೈಟಲ್ ಗೆ ನೂಕುನುಗ್ಗಲು]

ಪ್ರಾಮಾಣಿಕ ಅಧಿಕಾರಿಯ ಸಾವಿನ ಸುದ್ದಿ ಕೇಳಿ ಗದ್ಗದಿತರಾಗಿದ್ದ ಶಿವಣ್ಣ, ಮೌನ ಮುರಿದು ಮಾತನಾಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಡಿ.ಕೆ.ರವಿ ಸಾವಿನ ಪ್ರಕರಣದ ಬಗ್ಗೆ ಪ್ರತಿಕ್ರಿಯೆಸಿರುವ ಶಿವಣ್ಣ, ''ನಾನು ಶಿವಲಿಂಗ ಶೂಟಿಂಗ್ ನಲ್ಲಿ ಬಿಜಿಯಿದ್ದೆ. ಶೂಟಿಂಗ್ ಮುಗಿಸಿ ಮನೆಗೆ ಬಂದು ನ್ಯೂಸ್ ನೋಡಿದಾಗಲೇ, ವಿಷಯ ಗೊತ್ತಾಗಿದ್ದು.''

shivarajkumar

''ಭಾರತದಲ್ಲಿ ಒಳ್ಳೆ ಅಧಿಕಾರಿಯನ್ನ ಜೀವಂತವಾಗಿ ಇರೋಕೆ ಬಿಡಲ್ಲ. ಅದ್ಯಾವ ರೀತಿ ಒತ್ತಡ ತರ್ತಾರೋ ಗೊತ್ತಿಲ್ಲ. ಅಪ್ಪಾಜಿ ಯಾವಾಗ್ಲೂ ಹೇಳ್ತಿದ್ರು-'ಒಳ್ಳೆಯವರಿಗೆ ಇಲ್ಲಿ ಜಾಗ ಇಲ್ಲ ಕಂದ' ಅಂತ. ಅದೀಗ ನಿಜವಾಗುತ್ತಿದೆ.'' [ಡಿ ಕೆ ರವಿ ಅಕಾಲಿಕ ಮರಣಕ್ಕೆ ಚಿತ್ರೋದ್ಯಮದ ಪ್ರತಿಕ್ರಿಯೆ]

''ಪ್ರಾಮಾಣಿಕ ಅಧಿಕಾರಿಗಳು ಸಿಗುವುದು ಕಮ್ಮಿ ಅಂಥದ್ರಲ್ಲಿ ಡಿ.ಕೆ.ರವಿ ಅವರಿಗೆ ಯಾವ ರೀತಿ ಒತ್ತಡ ಹಾಕಿದ್ರು ಗೊತ್ತಿಲ್ಲ. ಆತ್ಮಹತ್ಯೆ ಅಂತ ಎಲ್ಲಾ ಕಡೆ ಬರುತ್ತಿದೆ. ಆದ್ರೆ, ಅದಕ್ಕೂ ಕಾರಣ ಇರಬೇಕಲ್ವಾ. ನನ್ನ ಕಣ್ಣಲ್ಲಿ ನೀರು ಬಂತು. ಹೀರೋಗಳಿಗೂ ಅಷ್ಟೊಂದು ಜನ ಬರಲ್ಲ'' [ಡಿಕೆ ರವಿಗೆ ರಿಕಿ ಕೇಜ್ ಗೀತ ನಮನ]

''ನಮಗೆ ನಾಚಿಕೆ, ಅವಮಾನ ಆಗುತ್ತೆ. ಇದನ್ನ ಖಂಡಿಸಬೇಕು. ಬರೀ ಕೋಲಾರ ಜನತೆ ಮಾತ್ರ ಅಲ್ಲ. ಇಡೀ ಕರ್ನಾಟಕ ಜನ ಖಂಡಿಸಬೇಕು. ಒಳ್ಳೆತನಕ್ಕೆ ಇಡೀ ಭಾರತ ಒಂದಾಗಬೇಕು'' ಅಂತ ಶಿವಣ್ಣ ಹೇಳಿದ್ದಾರೆ. [ಡಿ.ಕೆ.ರವಿ ರಿಯಲ್ ಲೈಫ್ ಸ್ಟೋರಿ ಇದೇನಾ?]

ತೆರೆ ಮೇಲೆ ಮಾತ್ರ ಸಮಾಜದ ಪರ ನಿಲ್ಲೋದಲ್ಲ, ನಿಜ ಜೀವನದಲ್ಲೂ ನಾಯಕರು ಸಮಾಜಮುಖಿ ಆಗಿರಬೇಕು ಅನ್ನುವ ಸಂದೇಶವನ್ನ ಡಾ.ರಾಜ್ ಕುಮಾರ್ ಸುಪುತ್ರ ಶಿವರಾಜ್ ಕುಮಾರ್ ಈ ಮೂಲಕ ಸಾರಿದ್ದಾರೆ. (ವಿಡಿಯೋ ಕೃಪೆ - NEWS 9)

    English summary
    Kannada Actor Shivarajkumar has reacted upon IAS Officer D.K.Ravi death. Listen to what Shivarajkumar had to say about the issue.
    Please Wait while comments are loading...

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada