»   » 'ಟೈಗರ್'ಗೆ ಖಡಕ್ ಧ್ವನಿ ನೀಡಿದ 'ಬಬ್ಬರ್ ಶೇರ್' ಕಿಚ್ಚ ಸುದೀಪ್

'ಟೈಗರ್'ಗೆ ಖಡಕ್ ಧ್ವನಿ ನೀಡಿದ 'ಬಬ್ಬರ್ ಶೇರ್' ಕಿಚ್ಚ ಸುದೀಪ್

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬರೀ ತಮ್ಮ ನಟನೆ ಮೂಲಕ ಮಾತ್ರವಲ್ಲದೇ, ಹಾಡಿನ ಮೂಲಕ ಕೂಡ ಅಭಿಮಾನಿಗಳಿಗೆ ಕಮಾಲ್ ಮಾಡಿದ್ದಾರೆ. 'ವಾಲಿ', 'ಚಂದು', 'ನಲ್ಲ', 'ವೀರ ಮದಕರಿ', 'ಮಂಡ್ಯ ಟು ಮುಂಬೈ', 'ರಾಟೆ' ಹೀಗೆ ಹಲವು ಚಿತ್ರದ ಹಾಡುಗಳಿಗೆ ತಮ್ಮ ಸುಮಧುರ ಧ್ವನಿ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಇತ್ತೀಚೆಗಷ್ಟೇ ತಮ್ಮ 'ಕೋಟಿಗೊಬ್ಬ 2' ಚಿತ್ರದ ಹಾಡಿಗೂ ಸುದೀಪ್ ವಾಯ್ಸ್ ನೀಡಿದ್ದರು. ಇದೀಗ ತಮ್ಮ ಆತ್ಮೀಯ ಗೆಳೆಯ, ನಿರ್ದೇಶಕ ನಂದ ಕಿಶೋರ್ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ, ನಟ ಪ್ರದೀಪ್ ನಟನೆಯ 'ಟೈಗರ್' ಚಿತ್ರದ ವಿಶೇಷ ಹಾಡೊಂದಕ್ಕೆ ಸುದೀಪ್ ಧ್ವನಿ ನೀಡಿದ್ದಾರೆ.[ಕೆ ಶಿವರಾಮು ಪುತ್ರಿ ಕೈಹಿಡಿಯುತ್ತಿರುವ ನಟ ಪ್ರದೀಪ್]


Kannada Actor Sudeep sung the song for Kannada Movie 'Tiger'

ಇಂದು (ಆಗಸ್ಟ್ 24) ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಪ್ರದೀಪ್ ಬೊಗಾಡಿ ಅವರಿಗೆ 'ಟೈಗರ್' ಚಿತ್ರತಂಡದವರು ಸ್ಪೆಷಲ್ ಟೀಸರ್, ಬಿಡುಗಡೆ ಮಾಡಿ ಉಡುಗೊರೆಯನ್ನಾಗಿ ನೀಡಲಿದ್ದಾರೆ. ಈ ಸ್ಪೆಷಲ್ ಟೀಸರ್ ಸಾಂಗ್ ಗೆ ಕಿಚ್ಚ ಸುದೀಪ್ ಅವರು ಧ್ವನಿ ನೀಡಿದ್ದಾರೆ.


Kannada Actor Sudeep sung the song for Kannada Movie 'Tiger'

"ಧಮ್ ಇದ್ದವ್ನ್ ಕಿತ್ಕೊಳ್ಳಿ, ಆಗದವ್ರ್ ಉರ್ಕೊಳ್ಳಿ, ಹಾರ್ಸೋದು ನಮ್ ಬಾವುಟಾನೇ" ಅನ್ನೋ ಹಾಡನ್ನು ಬಬ್ಬರ್ ಶೇರ್ ಕಿಚ್ಚ ಸುದೀಪ್ ಅವರು ಜಬರ್ದಸ್ತ್ ಆಗಿ ಹಾಡಿದ್ದಾರೆ. ನಟ ಪ್ರದೀಪ್ ಅವರು ಕಿಚ್ಚ ಸುದೀಪ್ ಅವರಿಗೆ ತುಂಬಾ ಆಪ್ತನಾಗಿದ್ದು, ಸುದೀಪ್ ಅವರ ಜೊತೆನೇ ಅಡ್ವಾನ್ಸ್ ಆಗಿ ನಿನ್ನೆ (ಆಗಸ್ಟ್ 23) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.


Kannada Actor Sudeep sung the song for Kannada Movie 'Tiger'

ಯೋಗಾನಂದ ಮುದ್ದಣ್ಣ ಅವರು ಬರೆದಿರುವ ಸಾಹಿತ್ಯಕ್ಕೆ ಸುದೀಪ್ ಅವರು ಸಖತ್ ಆಗಿ ತಮ್ಮ ಧ್ವನಿ ನೀಡಿದ್ದು, ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರಕ್ಕೆ ಶಿವರಾಮ್ (ನಟ ಮತ್ತು ನಿವೃತ್ತ ಐಎಎಸ್ ಆಫೀಸರ್) ಬಂಡವಾಳ ಹೂಡಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರ ಕೂಡ ವಹಿಸಿದ್ದಾರೆ.

English summary
Kannada Actor Sudeep has sung the title song of the kannada movie 'Tiger' directed by Nanda Kishore. Lead actor Pradeep is celebrating his birthday on Today (August 24th), And a teaser of the song will be released Today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada