»   » ನಟಿ ಆರತಿ ಬಂಗಲೆ ರು.14 ಕೋಟಿಗೆ ಮಾರಾಟ?

ನಟಿ ಆರತಿ ಬಂಗಲೆ ರು.14 ಕೋಟಿಗೆ ಮಾರಾಟ?

By: ಉದಯರವಿ
Subscribe to Filmibeat Kannada

ಕನ್ನಡ ಚಿತ್ರರಂಗದ ಅಭಿನೇತ್ರಿ ಆರತಿ ಅವರಿಗೆ ಬಿಡಿಎಯಿಂದ ಬಳುವಳಿಯಾಗಿ ಬಂದಿದ್ದ ಜೆ.ಪಿ.ನಗರದ ಬಂಗಲೆ ಮಾರಾಟವಾಗಿದೆಯೇ? ಈ ಬಗ್ಗೆ ಮಾಧ್ಯಮಗಳಲ್ಲಿ ಹಲವಾರು ಸುದ್ದಿಗಳು ಬಿತ್ತರವಾಗುತ್ತಿವೆ. ಮೂಲಗಳ ಪ್ರಕಾರ ಆರತಿ ಅವರ ಬಂಗಲೆಯನ್ನು ಚೆನ್ನೈ ಮೂಲದ ಕಂಪನಿಯೊಂದು ಖರೀದಿಸಿದೆಯಂತೆ.

ಬೆಂಗಳೂರು ಜೆಪಿ ನಗರದ 6ನೇ ಹಂತದಲ್ಲಿರುವ ಆ ಬಂಗಲೆಯ ಇಂದಿನ ಬೆಲೆ ರು.14 ಕೋಟಿ ಎನ್ನಲಾಗಿದೆ. ಸುಮಾರು ಈ ಬಂಗಲೆಯ ವಿಸ್ತೀರ್ಣ 9,600 ಚದರ ಅಡಿಗಳು. ಅಂದರೆ ಚದರ ಅಡಿಗೆ ಸುಮಾರು ರು.12 ರಿಂದ 15 ಸಾವಿರ. ಈ ನಿವೇಶವನ್ನು ಕರ್ನಾಟಕ ಸರ್ಕಾರ ಆರತಿ ಅವರಿಗೆ ನೀಡಿತ್ತು. ಅಲ್ಲಿ ಬಂಗಲೆ ಕಟ್ಟಿಸಿ ಅದಕ್ಕೆ 'ಬೆಳ್ಳಿತೆರೆ' ಎಂದು ಹೆಸರಿಟ್ಟಿದ್ದರು.

Kannada actress Aarati

1970ರಲ್ಲಿ ಆರತಿ ಅವರಿಗೆ ಈ ನಿವೇಶವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿತ್ತು. ಆಗ ಆರತಿ ಅವರು ತಮ್ಮ ವೃತ್ತಿ ಜೀವನದ ಉಚ್ಛ್ರಾಯಸ್ಥಿತಿಯಲ್ಲಿದ್ದರು. 'ಬೆಳ್ಳಿತೆರೆ'ಯನ್ನು ಕಟ್ಟಿದ ಬಳಿಕ ಈ ಬಂಗಲೆಯಲ್ಲಿ ಕೆಲ ವರ್ಷಗಳ ಕಾಲ ವಾಸವಾಗಿಯೂ ಇದ್ದರು.

ಈ ಬಂಗಲೆಯನ್ನು ಕಾರ್ಪೊರೇಟ್ ಕಂಪನಿಯೊಂದಕ್ಕೆ ಬಾಡಿಗೆಗೆ ನೀಡಲಾಗಿತ್ತು. ಕಂಪನಿ ಅದನ್ನು ಗೆಸ್ಟ್ ಹೌಸ್ ಮಾಡಿಕೊಂಡಿತ್ತು. ಬೆಂಗಳೂರಿನ ಜೆಪಿ ನಗರದ ಈಗ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದೆ. ಇಲ್ಲಿ ನಿವೇಶನ ಖರೀದಿಸಿರುವುದಿರಲಿ ಬಾಡಿಗೆ ಮನೆ ಸಿಗುವುದು ಕಷ್ಟ.

ಕೆಲ ವರ್ಷಗಳ ಕಾಲ ಆರತಿ ಅವರು ಯುಎಸ್ ನಲ್ಲಿದ್ದರು. ಈಗವರು ತಮ್ಮ ಬಂಗಲೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಜೆಪಿ ನಗರದ 6ನೇ ಹಂತದಲ್ಲಿ ಹಲವಾರು ಸಾಫ್ಟ್ ವೇರ್ ಕಂಪನಿಗಳು ನೆಲೆನಿಂತಿವೆ. ಈಗ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಇದೆ. ಇದನ್ನು ಮನಗಂಡೇ ಆರತಿ ಅವರು ಬಂಗಲೆಯನ್ನು ಮಾರುತ್ತಿದ್ದಾರೆ ಎನ್ನುತ್ತವೆ ಮೂಲಗಳು.

English summary
Kannada films veteran actess Aarati's bungalow 'Bellitere' at JP Nagar 6th Phase sold for nearly Rs 14 Crore, sources revealed. A Chennai based companey is in the process of purchasing 9,600 sqft property.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada