»   » ರೋಜ್ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರಾವ್ಯಾ

ರೋಜ್ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರಾವ್ಯಾ

By: ಉದಯರವಿ
Subscribe to Filmibeat Kannada

'ಲೂಸುಗಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಕ್ಯೂಟ್ ಬೆಡಗಿ ಶ್ರಾವ್ಯಾ ತಮ್ಮ ಮುದ್ದಾದ ಮುಖ ಮತ್ತು ಛಲದಿಂದ ಗುರುತಿಸಿಕೊಂಡವರು. ಈ ಬೆಡಗಿ ಯಾರು ಎಂದು ಬೆರಗಾಗಿ ನೋಡುತ್ತಿದ್ದ ಮಂದಿಗೆ ಆ ಬಳಿಕವಷ್ಟೇ ಗೊತ್ತಾಗಿದ್ದು ಇವರು ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತು ರೇಖಾ ದಾಸ್ ಅವರ ಮಗಳು ಎಂದು.

ಈಗ ಶ್ರಾವ್ಯಾ ಸಾಕಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಜೊತೆಗೆ ತನ್ನ ತಂದೆ ಆಕ್ಷನ್ ಕಟ್ ಹೇಳುತ್ತಿರುವ 'ಕಟ್ಟೆ' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇನ್ನೇನು ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಐದು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ ಶ್ರಾವ್ಯಾ. [ರೋಜ್ ಚಿತ್ರ ವಿಮರ್ಶೆ]


'ರೋಜ್' ಚಿತ್ರದ ಬಳಿಕ ಶ್ರಾವ್ಯಾ ಅವರಿಗೆ ಅವಕಾಶಗಳು ಸಿಗುವುದು ಕಷ್ಟ ಎಂದೇ ಭಾವಿಸಿದ್ದರು ಕೆಲವರು. ಇದೀಗ ಅವರು 'ಬಜಾರ್' ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರಕ್ಕೆ ಕೆಲಸ ಮಾಡಿರುವ ಹರೀಶ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು.

ಇದರ ಜೊತೆಗೆ ಸಂತೋಷ್ ನಿರ್ದೇಶನದ 'ದಾದಾ ಈಸ್ ಬ್ಯಾಕ್' ಸೇರಿದಂತೆ 'ಹುಚ್ಚ 2', 'ದರ್ಬಾರ್' ಚಿತ್ರಗಳಲ್ಲೂ ಬಿಜಿಯಾಗಿದ್ದಾರೆ. ಶ್ರಾವ್ಯಾ ಅವರಿಗೆ ಕಲಾವಿದರ ಕುಟುಂಬದ ಹಿನ್ನೆಲೆಯಿದ್ದರೂ ತಮ್ಮದೇ ಆದ ದಾರಿಯಲ್ಲಿ ಸಾಗಿ ಹೋಗುತ್ತಿದ್ದಾರೆ.

English summary
After Rose movie Kannada actress Shravya back to action. At present the actress is busy in five movies. Recently signed up for 'Bazar'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada