For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟಿ ತಾರಾ ತಾಯಿ ಇನ್ನಿಲ್ಲ, ಅನಾರೋಗ್ಯದಿಂದ ನಿಧನ!

  |

  ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅವರ ಕುಟುಂಬ ಸದ್ಯ ನೋವಿನಲ್ಲಿದೆ. ಕಾರಣ ತಾರ ಅವರ ತಾಯಿ ಇಂದು(ಏ.27) ನಿಧನ ಹೊಂದಿದ್ದಾರೆ. ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರು ಯಾವುದೇ ಪ್ರಯೋಜನ ಆಗಿಲ್ಲ.

  ತಾರಾ ತಾಯಿ ಪುಷ್ಪ ಅವರಿಗೆ 76 ವರ್ಷ ವಯಸ್ಸಾಗಿತ್ತು. ಆರೋಗ್ಯದಲ್ಲಿ ಏರುಪೇರಾದ ಕಾರಣ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧರಾಗಿದ್ದಾರೆ.

  ಟ್ರೆಂಡಿಂಗ್‌ನಲ್ಲಿ ಯುವ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳ ಸಂಭ್ರಮ!ಟ್ರೆಂಡಿಂಗ್‌ನಲ್ಲಿ ಯುವ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳ ಸಂಭ್ರಮ!

  ನಟಿ ತಾರಾ ಅವರ ಜೊತೆ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್‌ನಲ್ಲಿ ಪುಷ್ಪಾ ಅವರು ಪಾಲ್ಗೊಂಡಿದ್ದರು. ಈ ವೇಳೆ ತೀವ್ರ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಪುಷ್ಪಾ ಟಿ ನಿಧನರಾಗಿದ್ದಾರೆ.

  ತಾರಾ ಅವರ ಮೂಲ ಹೆಸರು ಅನುರಾಧ. ಆದರೆ ತಾರಾ ಎಂದೇ ಕರ್ನಾಟಕದ ಮನೆ ಮಾತಾಗಿದ್ದಾರೆ. 1986ರಲ್ಲಿ 'ತುಳಸಿದಳ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ತಾರಾ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ನಾಯಕಿಯಾಗಿ, ಹಿರಿಯ ಪಾತ್ರಧಾರಿಯಾಗಿ, ವಿಭಿನ್ನ ಪಾತ್ರಗಳ ಮೂಲಕ ತಾರಾ ಮನಗೆದ್ದಿದ್ದಾರೆ. ತಾರಾ ಸಾಧನೆಗೆ ಅವರ ತಾಯಿ ಪುಷ್ಪಾ ಟಿ ಸದಾ ಬೆನ್ನೆಲುಬಾಗಿದ್ದರು. ತಾರಾ ಪ್ರತಿ ಶೂಟಿಂಗ್ ವೇಳೆ ಖುದ್ದು ಹಾಜರಿದ್ದು ಅವರಿಗೆ ಧೈರ್ಯ ನೀಡುತ್ತಿದ್ದರು.

  ತಾರಾ ಅವರ ಸಿನಿಮಾ ಪಯಣಯದಲ್ಲಿ ಅವರ ತಾಯಿ ಪುಷ್ಪಾ ಅವರದ್ದು ದೊಡ್ಡ ಪಾತ್ರ. ಮಗಳಿಗೆ ಸದಾ ಬೆನ್ನುಲುಬಾಗಿ ಧೈರ್ಯ ತುಂಬುತಿದ್ದ ಗಟ್ಟಿಗಿತ್ತಿ ಆಕೆ. ಆದರೆ ಈಗ ಅನಾರೋಗ್ಯದಿಂದ ವಿಧಿವಶವಾಗಿದ್ದರೆ. ಆ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ.

  English summary
  Kannada Actress Tara Mother Dies At 76 In Mysore, Know More,
  Thursday, April 28, 2022, 9:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X