For Quick Alerts
  ALLOW NOTIFICATIONS  
  For Daily Alerts

  ನಾಡಹಬ್ಬಕ್ಕೆ ಲಕ್ಷ್ಮಿ...ನೋ ವನ್ ಕ್ಯಾನ್ ಟಚ್ ಮೀ

  By Rajendra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರಿಯಾಮಣಿ ಅಭಿನಯದ ಲಕ್ಷ್ಮಿ ಚಿತ್ರ ಗ್ರಾಫಿಕ್ಸ್ ಕಾರಣದಿಂದ ಲೇಟ್ ಆಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಭಾಸ್ಕರ್ ಹಾಗೂ ಆದಿ ನಾರಾಯಣ ತಿಳಿಸಿದ್ದಾರೆ. ಹೆಸರಾಂತ ಉದ್ಯಮ ಭರಣಿ ಮಿನರಲ್ಸ್ ಅವರ ಮೊದಲ ಪ್ರಯತ್ನ 'ಲಕ್ಷ್ಮಿ'.

  ಈ ಚಿತ್ರ ಭರಣಿ ಮಿನರಲ್ಸ್ ನಿರ್ಮಾಣದ ಚೊಚ್ಚಲ ಚಿತ್ರವಾದರೂ ತೆರೆಕಂಡಿದ್ದು ಮಾತ್ರ ಆರ್ ಚಂದ್ರು ನಿರ್ದೇಶನದ 'ಕೋ..ಕೋ...ಕೋಳಿ ಕೋತಿ' ಚಿತ್ರ. ಈಗ 'ಲಕ್ಷ್ಮಿ' ಚಿತ್ರಕ್ಕೆ ಎರಡು ಹಾಡುಗಳು ಮಾತ್ರ ಬಾಕಿ ಉಳಿದ್ದಿದ್ದು ಮಾತುಗಳ ಲೇಪನ ಕಾರ್ಯ ಮುಗಿದಿದೆ.

  ಉಳಿದ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಸ್ವಿಟ್ಜರ್ಲ್ಯಾಂಡ್ ಗೆ ಹಾರಿದ್ದಾರೆ ಚಿತ್ರದ ನಾಯಕ ನಟ ಶಿವಣ್ಣ ಹಾಗೂ ಪ್ರಿಯಾಮಣಿ. ನಾಡಹಬ್ಬ ದಸರಾ ವೇಳೆಗೆ 'ಲಕ್ಷ್ಮಿ' ಅನ್ನು ತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

  ಅದ್ದೂರಿ ಮುಹೂರ್ತದ ಬಳಿಕ ಬೆಂಗಳೂರು ಹಾಗೂ ಹೊರದೇಶಗಳಲ್ಲೂ ಚಿತ್ರೀಕರಣ ಮಾಡಿ ತಾಂತ್ರಿಕ ಗ್ರಾಫಿಕ್ಸ್ ಕೆಲಸಕ್ಕಾಗಿ ಹಲವಾರು ತಿಂಗಳುಗಳೆ ಹಿಡಿಯಿತು ಎಂದು ತಿಳಿಸುತ್ತಾರೆ ನಿರ್ದೇಶಕ ರಾಘವ ಲೋಕಿ.

  ಗುರುಕಿರಣ್ ಅವರು ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಅವರ ಸಂಕಲನ, ಎಂ ಎಸ್ ರಮೇಶ್ ಅವರ ಸಂಭಾಷಣೆ, ಇಸ್ಮಾಯಿಲ್ ಅವರ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸ್ಟಂಟ್ಸ್, ಪ್ರದೀಪ್ ಆಂಟೋನಿ ನೃತ್ಯ ನಿರ್ದೇಶನ, ಆನಂದಪ್ರಿಯ ಅವರ ಸಹಾಯ ನಿರ್ದೇಶನ, ಬಾಬು ಹಾಗೂ ಸಾನಿಯಾ ಸರ್ದಾರಿಯ ವಸ್ತ್ರ ವಿನ್ಯಾಸ ಚಿತ್ರಕ್ಕಿದೆ.

  ಆಶಿಷ್ ವಿದ್ಯಾರ್ಥಿ, ರವಿಕಾಳೆ, ವಿನ್ಸೆಂಟ್, ಕೋಮಲ್, ರಂಗಾಯಣ ರಘು ಹಾಗೂ ಇತರರು ಪಾತ್ರವರ್ಗದಲ್ಲಿದ್ದಾರೆ. ಲಕ್ಷ್ಮಿ ಚಿತ್ರದ ಅಡಿಬರಹ "ನೋ ವನ್ ಕ್ಯಾನ್ ಟಚ್ ಮೀ". ಆಕ್ಷನ್ ಥ್ರಿಲ್ಲರ್ ಆದ ಚಿತ್ರದ ಕಥಾವಸ್ತುವು ಭಿನ್ನವಾಗಿದೆ. ಸಾಮಾನ್ಯನೊಬ್ಬ ಭಯೋತ್ಪಾದನೆಯೊಂದಿಗೆ ಮುಖಾಮುಖಿಯಾಗುವುದೇ ಚಿತ್ರದ ಕಥಾಹಂದರ. (ಒನ್ಇಂಡಿಯಾ ಕನ್ನಡ)

  English summary
  Hat trick hero Shivrajkumar and Priyamani lead Kannada movie Lakshmi is getting ready to hit the screens on Dasara festival. The action, thriller movie is being directed by Raghava Loki. The story revolves around the common man comes face to face with terrorism.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X