»   » ಸತ್ಯಾನಂದ ಚಿತ್ರಕ್ಕೆ ಸೆನ್ಸಾರ್ ವಯಸ್ಕರ ಪ್ರಮಾಣ ಪತ್ರ

ಸತ್ಯಾನಂದ ಚಿತ್ರಕ್ಕೆ ಸೆನ್ಸಾರ್ ವಯಸ್ಕರ ಪ್ರಮಾಣ ಪತ್ರ

Posted By:
Subscribe to Filmibeat Kannada
Satyananda clears censor
ಅಂತೂ ಇಂತೂ 'ಸತ್ಯಾನಂದ' ಕಡೆಗೂ ಸೆನ್ಸಾರ್ ನಲ್ಲಿ ಪಾಸಾಗಿದ್ದಾನೆ. 'ಸತ್ಯಾನಂದ' ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿಯ ರಿವೈಸಿಂಗ್ ಕಮಿಟಿ ಚಿತ್ರಕ್ಕೆ ಹಲವು ಕಡೆ ಕತ್ತರಿ ಪ್ರಯೋಗಿಸಿ 'ಎ' ಪ್ರಮಾಣ ಪತ್ರವನ್ನು ನೀಡಿದೆ.

ಈ ಚಿತ್ರ ಹಲವು ವಿವಾದಗಳಿಗೆ ಗುರಿಯಾಗಿ ಹೈಕೋರ್ಟ್ ಕಟಕಟೆಗೆ ಬಂದು ನಿಂತಿತ್ತು. ವಿವಾದ ನ್ಯಾಯಾಲಯದಲ್ಲಿರುವ ಕಾರಣ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲು ನಿರಾಕರಿಸಿತ್ತು. ಕಡೆಗೆ ಹೈಕೋರ್ಟ್ ಚಿತ್ರವನ್ನು ವೀಕ್ಷಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವಂತೆ ಸೆನ್ಸಾರ್ ಮಂಡಳಿಗೆ ಆದೇಶಿಸಿತ್ತು.

ಈ ಆದೇಶದ ಹಿನ್ನೆಲೆಯಲ್ಲಿ ರಿವೈಸಿಂಗ್ ಸಮಿತಿ ಚಿತ್ರವನ್ನು ವೀಕ್ಷಿಸಿದೆ. ರಂಗಭೂಮಿ ಕಲಾವಿದೆ ಹಾಗೂ ನಟಿ ಅರುಂಧತಿ ನಾಗ್ ಅವರ ನೇತೃತ್ವದ 10 ಜನರ ತಂಡ ಚಿತ್ರವನ್ನು ವೀಕ್ಷಿಸಿ, ಚರ್ಚಿಸಿ ಹಲವು ಕಡೆ ಕತ್ತರಿ ಪ್ರಯೋಗ ಮಾಡಿ ಎ ಪ್ರಮಾಣ ಪತ್ರ ನೀಡಿದೆ.

ಸದ್ಯಕ್ಕೆ 'ಸತ್ಯಾನಂದ' ಚಿತ್ರ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ಇದ್ದು ಅದು ತೆರೆವುಗೊಂಡ ಬಳಿಕ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ಮಾಪಕ ಮದನ್ ಪಟೇಲ್ ಹೇಳಿದ್ದಾರೆ. ಇದು ನನ್ನ ಹೋರಾಟಕ್ಕೆ ಸಂದ ಜಯ ಎಂದೂ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಚಿತ್ರ ಸ್ವಾಮಿ ನಿತ್ಯಾನಂದ ಜೀವನ ಚರಿತ್ರೆ ಕುರಿತಾದದ್ದಲ್ಲ. ಡೋಂಗಿ ಹಾಗೂ ಕಪಟ ಸ್ವಾಮಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಸ್ವಾಮಿ ನಿತ್ಯಾನಂದನ ಬಗ್ಗೆ ನಮ್ಮ ಬಳಿ ಹೆಚ್ಚಿನ ಮಾಹಿತಿಯೂ ಇಲ್ಲ ಎಂದಿದ್ದಾರೆ ಮದನ್ ಪಟೇಲ್. (ಏಜೆನ್ಸೀಸ್)

English summary
Madan Patel's controversial film Satyananda finally clears censor revising committee and got A certificate. The movie is based on the recent happenings in the life of cheating Swamijis.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada