»   » ವಿಶ್ವದಾಖಲೆ ನಿರ್ದೇಶಕ ರಾಮ ನಾರಾಯಣನ್

ವಿಶ್ವದಾಖಲೆ ನಿರ್ದೇಶಕ ರಾಮ ನಾರಾಯಣನ್

Posted By:
Subscribe to Filmibeat Kannada

ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳ ನಿರ್ದೇಶಕ ರಾಮ ನಾರಾಯಣನ್ (65) ವಿಧಿವಶರಾಗಿದ್ದಾರೆ. ಅವರು ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದರು. ಸಿಂಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ (ಜೂ.22) ರಾತ್ರಿ ಮೃತಪಟ್ಟಿದ್ದಾರೆ.

ಮೂವತ್ತಾರು ವರ್ಷಗಳಲ್ಲೇ ಅತ್ಯಧಿಕ ಎಂದರೆ 125 ಚಿತ್ರಗಳನ್ನು ನಿರ್ದೇಶಿಸುವ ಮೂಲಕ ವಿಶ್ವದಾಖಲೆಗೆ ಪಾತ್ರರಾಗಿದ್ದರು. ತಮ್ಮ ಕಮರ್ಷಿಯಲ್ ಚಿತ್ರಗಳಲ್ಲಿ ಪ್ರಾಣಿಗಳಿಗೂ ವಿಶಿಷ್ಟ ಸ್ಥಾನವನ್ನು ಕಲ್ಪಿಸಿ ಕೊಟ್ಟಂತಹ ಖ್ಯಾತಿ ರಾಮ ನಾರಾಯಣನ್ ಅವರಿಗೆ ಸಲ್ಲುತ್ತದೆ. [ಕಲ್ಪನ ಚಿತ್ರ ವಿಮರ್ಶೆ]

Rama Narayanan

ತೊಂಬತ್ತರ ದಶಕದಲ್ಲಿ ಅವರ ನಿರ್ದೇಶನದ ಭಕ್ತಿಪ್ರಧಾನ ಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಒಂಭತ್ತು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ದೇಶಿಸಿ ಮತ್ತೊಂದು ದಾಖಲೆಗೂ ನಾರಾಯಣನ್ ಅವರು ಪಾತ್ರರಾಗಿದ್ದಾರೆ. ಕನ್ನಡ, ತಮಿಳು, ತೆಲುಗು, ಮರಾಠಿ, ಗುಜರಾತಿ, ಭೋಜ್ ಪುರಿ, ಬಂಗಾಳಿ, ಒರಿಯಾ ಮತ್ತು ಮಲಯ್ ಭಾಷೆಗಳಲ್ಲಿ ನಿರ್ದೇಶಿಸಿದ್ದಾರೆ.

ಗೀತರಚನೆಕಾರನಾಗಬೇಕು ಎಂದು ಕನಸು ಹೊತ್ತು ಬಂದ ರಾಮ ನಾರಾಯಣನ್ ಬಳಿಕ ಸಂಭಾಷಣೆಕಾರರಾಗಿ, ನಿರ್ದೇಶಕರಾಗಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದರು. ಕನ್ನಡದಲ್ಲಿ ಹೆಚ್ಚಾಗಿ ಬೇಬಿ ಶ್ಯಾಮಿಲಿ ಅವರ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಭೈರವಿ, ಶಾಂಭವಿ, ದಾಕ್ಷಾಯಣಿ ಚಿತ್ರಗಳನ್ನು ಅವರು ತೇನಂಡಲ್ ಫಿಲಂಸ್ ಲಾಂಛನದಲ್ಲಿ ನಿರ್ದೇಶಿಸಿದ್ದಾರೆ.

ರಾಮ ನಾರಾಯಣನ್ ನಿರ್ದೇಶನದ ಕಟ್ಟಕಡೆಯ ಕನ್ನಡ ಚಿತ್ರ 'ಕಲ್ಪನ'. ತಮಿಳಿನ 'ಕಾಂಚನ' ಚಿತ್ರದ ರೀಮೇಕ್ ಆದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ನಾರಾಯಣನ್ ಅವರ ಚಿತ್ರಗಳಲ್ಲಿ ಶ್ರುತಿ ಅವರಿಗೂ ಖಾಯಂ ಪಾತ್ರ ಇರುತ್ತಿತ್ತು. ಹೊಸಬರೊಂದಿಗಿನ ಅವರ 'ವಿಲ್ಲಾ ರಂಗ' ಚಿತ್ರ ಇನ್ನೂ ತೆರೆಕಂಡಿಲ್ಲ. (ಏಜೆನ್ಸೀಸ್)

English summary
Renowned filmmaker Rama Narayanan passed away on June 22, 2014 at a Singapore Hospital due to kidney related ailments. He holds a world record for directing the maximum number of films, helming 125 in 36 years. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada