»   » ಕನ್ನಡದ 'ಆಕೆ'ಗೂ ತಮಿಳಿನ 'ಮಾಯ'ಗೂ ಸಂಬಂಧ! ಸಾಕ್ಷಿ ಇಲ್ಲಿದೆ

ಕನ್ನಡದ 'ಆಕೆ'ಗೂ ತಮಿಳಿನ 'ಮಾಯ'ಗೂ ಸಂಬಂಧ! ಸಾಕ್ಷಿ ಇಲ್ಲಿದೆ

Posted By:
Subscribe to Filmibeat Kannada

ಕೆ.ಎಂ ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ಆಕೆ'. ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿರುವ 'ಆಕೆ' ಮೇಕಿಂಗ್ ವಿಚಾರಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ 'ಆಕೆ'ಗೆ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿರುವುದು ವಿಶೇಷ. ಹೀಗಾಗಿ, 'ಆಕೆ' ಹಾಲಿವುಡ್ ಮಟ್ಟದಲ್ಲಿ ತಯಾರಾಗಿದೆ ಎಂಬುದು ವಿಶೇಷ.[ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ಖ್ಯಾತ ಸಂಸ್ಥೆ!]

'ಆಕೆ' ಚಿತ್ರಕ್ಕೆ ಭಾರತೀಯ ತಂತ್ರಜ್ಞರಿಗಿಂತ ಹಾಲಿವುಡ್ ತಂತ್ರಜ್ಞರು ಹೆಚ್ಚು ಕೆಲಸ ಮಾಡಿದ್ದಾರೆ. ಕಾರ್ಲ್ ಆಸ್ಟಿನ್ ಎಂಬುವವರು ಚೈತನ್ಯ ಜೊತೆಗೆ ಚಿತ್ರಕಥೆ ಬರೆದಿದ್ದಾರಂತೆ. ಪಾಲ್ ಬನ್ರ್ಸ್ ಎನ್ನುವವರು ಪ್ರೊಡಕ್ಷನ್ ಡಿಸೈನರ್ ಆಗಿದ್ದಾರಂತೆ. ಹ್ಯಾರಿ ಪಾಟರ್' ಚಿತ್ರಕ್ಕೆ ಕ್ಯಾಮರಾಮ್ಯಾನ್ ಆಗಿದ್ದ ಇಯಾನ್ ಹೌಸ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

Kannada Movie Aake is A Remake

ಇಂತಹ 'ಆಕೆ' ಚಿತ್ರದ ಬಗ್ಗೆ ಈಗ ಒಂದು ಅನುಮಾನ ಶುರುವಾಗಿದೆ. ಕನ್ನಡದ 'ಆಕೆ' ರೀಮೇಕ್ ಎಂಬ ಮಾತು ಕೇಳಿಬರುತ್ತಿದೆ. ತಮಿಳಿನ 'ಮಾಯ' ಚಿತ್ರದ ಕನ್ನಡ ಅವತರಣಿಕೆ ಈ 'ಆಕೆ' ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ 'ಆಕೆ' ಟ್ರೈಲರ್ ಕೂಡ ಬಿಡುಗಡೆಯಾಗಿದೆ.

'ಆಕೆ' ಟ್ರೈಲರ್ ಇಲ್ಲಿದೆ ನೋಡಿ....

2015 ರಲ್ಲಿ ತೆರೆಕಂಡಿದ್ದ ತಮಿಳಿನ 'ಮಾಯ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಯನತಾರ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಒಂದು ಮಗುವಿನ ತಾಯಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ನಯನತಾರ, ತಮ್ಮ ಅಭಿನಯದ ಮೂಲಕ ಸಿನಿಮಾವನ್ನ ಗೆಲ್ಲಿಸಿದ್ದರು. ಇದೀಗ, ಇದೇ ಕಥೆಯೇ ಕನ್ನಡದ 'ಆಕೆ' ಎನ್ನುವುದು ಟ್ರೈಲರ್ ನಲ್ಲಿ ಸಾಬೀತಾಗಿದೆ.

'ಮಾಯಾ' ಟ್ರೈಲರ್ ಇಲ್ಲಿದೆ ನೋಡಿ.....

ಹೀಗಾಗಿ, ಕನ್ನಡದ 'ಆಕೆ', ತಮಿಳಿನ 'ಮಾಯ' ಎನ್ನುವುದು ಬಹುತೇಕ ಖಚಿತವಾಗಿದೆ. ಇದನ್ನ ಚಿತ್ರತಂಡ ಕೂಡ ಹಲವು ಕಡೆ ಒಪ್ಪಿಕೊಂಡಿದ್ದು, ಕನ್ನಡ ನೇಟಿವಿಟಿಗೆ ತಕ್ಕಂತೆ ಸಂಪೂರ್ಣವಾಗಿ ಬದಲಾವಣೆ ಮಾಡಿಕೊಂಡಿದ್ದಾರಂತೆ. ಅಂದ್ಹಾಗೆ, ಕಲೈ ಸೂರಿ, ಯೋಗೇಶ್ ದ್ವಾರಕೀಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಅವರ ಸಂಗೀತವಿದೆ. ಸದ್ಯ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಬ್ಯುಸಿಯಿರುವ ಚಿತ್ರತಂಡ, ಮಾರ್ಚ್ ತಿಂಗಳಲ್ಲಿ ತೆರೆಗೆ ಬರುವ ತಯಾರಿಯಲ್ಲಿದೆ.

English summary
The first-look and trailer of the Kannada film Aake has created a sense of curiosity among the audience. However, not long after the release, people began to point out that Aake looked like a lot like the Tamil film Maya, starring Nayanatara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada