»   » 'ಆಟಗಾರ' ನ ಆಟಕ್ಕೆ ಬೋಲ್ಡ್ ಆದ ಸೆನ್ಸಾರ್ ಬೋರ್ಡ್

'ಆಟಗಾರ' ನ ಆಟಕ್ಕೆ ಬೋಲ್ಡ್ ಆದ ಸೆನ್ಸಾರ್ ಬೋರ್ಡ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಹಿರಿಯ ನಟ ಕಮ್ ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 49ನೇ ಬಹುನಿರೀಕ್ಷಿತ ಚಿತ್ರ 'ಆಟಗಾರ' ಆಗಸ್ಟ್ 28 ವರಮಹಾಲಕ್ಷ್ಮಿ ಹಬ್ಬದಂದು ತೆರೆ ಮೇಲೆ ಬರುತ್ತಿದೆ ಅಂತ ಇದೇ ಫಿಲ್ಮಿಬೀಟಲ್ಲಿ ನಾವು ನಿಮಗೆ ಹೇಳಿದ್ವಿ ತಾನೇ.

ಇದೀಗ 'ಆಟಗಾರ' ಚಿತ್ರದ ಲೇಟೇಸ್ಟ್ ಮಾಹಿತಿ ಏನೆಂದರೆ 'ಆ ದಿನಗಳು' ಚಿತ್ರದ ನಂತರ ಮತ್ತೆ ಗಾಂಧಿನಗರಕ್ಕೆ ವಾಪಸಾಗಿರುವ ಕೆ.ಎಮ್ ಚೈತನ್ಯ ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ.[ವರಮಹಾಲಕ್ಷ್ಮಿ ಕೃಪೆಗಾಗಿ ಕಾದಿರುವ 'ಆಟಗಾರ' ದ್ವಾರಕೀಶ್! ]

Chiranjeevi sarja

ಹೌದು ಯೋಗೀಶ್ ದ್ವಾರಕೀಶ್ ಬಂಡವಾಳ ಹಾಕುತ್ತಿರುವ 'ಆಟಗಾರ' ಚಿತ್ರವನ್ನು ಸೆನ್ಸಾರ್ ಮಂಡಳಿ ಸುಮಾರು 128 ನಿಮಿಷಗಳ ಕಾಲ ವೀಕ್ಷಿಸಿ ಯು/ಎ ಪ್ರಮಾಣ ಪತ್ರ ನೀಡಿ ಚಿತ್ರದ ಬಿಡುಗಡೆಗೆ ಅಸ್ತು ಎಂದಿದೆ.

ಇನ್ನೇನು ಇದೇ ವರಮಹಾಲಕ್ಷ್ಮಿ ಹಬ್ಬದಂದು 'ಆಟಗಾರ' ತೆರೆಯ ಮೇಲೆ ಗ್ರ್ಯಾಂಡ್ ಎಂಟ್ರಿ ಪಡೆದು ಪ್ರೇಕ್ಷಕರನ್ನು ರಂಜಿಸಲಿದ್ದಾನೆ. ಸದ್ಯದಲ್ಲೇ ತೆರೆ ಕಾಣಬೇಕಿದ್ದ 'ಆಟಗಾರ' ಚಿತ್ರತಂಡದವರ ಕೆಲವು ಸೆಂಟಿಮೆಂಟ್ಸ್ ಗಳಿಂದ ಮುಂದಕ್ಕೆ ಹೋಗುವಂತಾಗಿದೆ.

ಇನ್ನೂ ಸ್ಯಾಂಡಲ್ ವುಡ್ ನ, ಪ್ರಮುಖ 10 ಸ್ಟಾರ್ ಗಳು ಒಂದಾಗಿ ಒಂದೇ ಸ್ಕ್ರೀನ್ ನಲ್ಲಿ ನಟಿಸುತ್ತಿರುವುದು 'ಆಟಗಾರ'ನ ಹೆಗ್ಗಳಿಕೆ.

Aatagara

ಚಿರಂಜೀವಿ ಸರ್ಜಾ, ಮೇಘನಾ ಸುಂದರ್ ರಾಜ್, ಪಾರುಲ್ ಯಾದವ್, ದ್ವಾರಕೀಶ್, ಅನು ಪ್ರಭಾಕರ್, ಅನಂತ್ ನಾಗ್, ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಆರೋಹಿತ ಮುಂತಾದ ನಟ-ನಟಿಯರು ಚಿತ್ರದಲ್ಲಿ ಪ್ರಮುಖವಾಗಿ ಮಿಂಚಿದ್ದಾರೆ.

ಅನೂಪ್ ಸೀಳಿನ್ ಚಿತ್ರದ ಸುಂದರ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಒಟ್ಟಿನಲ್ಲಿ ಈವರೆಗೂ ಚಿತ್ರದ ಬಗ್ಗೆ ಯಾವುದೇ ಸಣ್ಣ ಕ್ಲೂ ಕೂಡ ಬಿಟ್ಟುಕೊಡದ ನಿರ್ದೇಶಕ ಕೆ.ಎಮ್.ಚೈತನ್ಯ 'ಆಟಗಾರ' ಚಿತ್ರದ ಮೂಲಕ ಪ್ರೇಕ್ಷಕರಿಗೆ ಭಾರಿ ಕುತೂಹಲ ಮೂಡಿಸಿದ್ದಾರೆ.

ಮಾತ್ರವಲ್ಲದೇ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರ ನಿರೀಕ್ಷೆಯ ಚಿತ್ರ ಇದಾಗಿದ್ದು, 'ಆಟಗಾರ' ಪ್ರೇಕ್ಷಕರನ್ನು ಇಂಪ್ರೆಸ್ ಮಾಡುವಲ್ಲಿ ಯಶಸ್ವಿಯಾಗುತ್ತಾನಾ.ಅನ್ನೋದನ್ನ ನೋಡಲು ಆಗಸ್ಟ್ 28 ರವರೆಗೂ ಕಾಯಲೇಬೇಕು.

English summary
Kannada movie 'Aatagara' gets U/A Certificate from the Censor Board.'Aatagara' features Kannada actor Chiranjeevi Sarja,Kannada Actress Meghana Raj, Parul Yadav in the lead role. The movie is directed by KM Chaitanya of 'Aa Dinagalu' fame.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X