»   » ಚಿರಂಜೀವಿ ಸರ್ಜಾ 'ಆಟಗಾರ'ನಿಗೆ ಹಾಡೊಂದು ಬಾಕಿ

ಚಿರಂಜೀವಿ ಸರ್ಜಾ 'ಆಟಗಾರ'ನಿಗೆ ಹಾಡೊಂದು ಬಾಕಿ

Posted By:
Subscribe to Filmibeat Kannada

ಪ್ರಚಂಡ ಕುಳ್ಳ ದ್ವಾರಕೀಶ್ ನಿರ್ಮಾಣದ 49ನೇ ಚಿತ್ರ 'ಆಟಗಾರ' ಶೂಟಿಂಗ್ ಮುಗಿದಿದ್ದು ಇನ್ನೊಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. 'ಆ ದಿನಗಳು' ಖ್ಯಾತಿಯ ಕೆ.ಎಂ. ಚೈತನ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು.

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಒಂದೇ ಒಂದು ಹಾಡು ಮಾತ್ರ ಬಾಕಿ ಇದ್ದು ಏಪ್ರಿಲ್ ಕೊನೆಯಲ್ಲಿ ಮುಗಿಸಿಕೊಂಡು ಚಿತ್ರ ತೆರೆಗೆ ಬರಲು ರೆಡಿಯಾಗುತ್ತಿದೆ. ಈ ಚಿತ್ರದ ಶೂಟಿಂಗ್ ಗೋವಾ, ಕಾರವಾರದಲ್ಲಿ ನಡೆದಿದೆ.

'ಆಟಗಾರ' ಶೀರ್ಷಿಕೆ ಕೇಳಿಯೇ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಪ್ರೇಕ್ಷಕರಿಗೆ ಭಿನ್ನ ಥ್ರಿಲ್ಲಿಂಗ್ ಅನುಭವ ಚಿತ್ರ ನೀಡಲಿದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ. ಇದೇ ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರ ಇದು. [ನನ್ನ ಪಾಲಿನ ಅಲ್ಲಾಹ್ ಜಾಫರ್ ಷರೀಫ್: ದ್ವಾರಕೀಶ್]

Aatagara movie poster

ಪ್ಯಾರ್ ಗೆ ಆಗ್ಬಿಟ್ಟೈತೆ ಬೆಡಗಿ ಪರುಲ್ ಯಾದವ್, ನಟ ರವಿಶಂಕರ್, ದ್ವಾರಕೀಶ್, ಅನಂತನಾಗ್ ಸಹ ಚಿತ್ರದ ತಾರಾಬಳಗದಲ್ಲಿರುತ್ತಾರೆ. ಅನೂಪ್ ಸೀಳಿನ್ ಅವರ ಸಂಗೀತ, ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು ಬಹುತೇಕ ಶೂಟಿಂಗ್ ಗೋವಾದಲ್ಲಿ ನಡೆದಿದೆ. ಚಿತ್ರದಲ್ಲಿ ಮೇಘನಾ ಅವರು ಸೂಪರ್ ಮಾಡೆಲ್ ಆಗಿ ಕಾಣಿಸಲಿದ್ದಾರೆ. ಹಠಮಾರಿ ಸ್ವಭಾವದ ಹುಡುಗಿ, ಎಲ್ಲವನ್ನೂ ಗೆಲ್ಲಬೇಕೆಂಬ ಛಲವಿರುವ ಪಾತ್ರ ಅವರದು.

'ಚಾರುಲತಾ' (2012) ಚಿತ್ರದ ನಿರ್ಮಾಣದ ಬಳಿಕ ದ್ವಾರಕೀಶ್ ಅವರು ಬರೋಬ್ಬರಿ ಎರಡು ವರ್ಷ ಗ್ಯಾಪ್ ತೆಗೆದುಕೊಂಡು ಕೈಗೆತ್ತಿಕೊಂಡಿರುವ ಚಿತ್ರ ಇದಾಗಿದೆ. ದ್ವಾರಕೀಶ್ ನಿರ್ಮಾಣದ ಚಿತ್ರ ಎಂದ ಮೇಲೆ ಸ್ಯಾಂಡಲ್ ವುಡ್ ಚಿತ್ರರಸಿಕರ ಕುತೂಹಲದ ನಿರೀಕ್ಷೆ ಇದ್ದೇ ಇರುತ್ತದೆ. (ಫಿಲ್ಮಿಬೀಟ್ ಕನ್ನಡ)

English summary
Chiranjeevi Sarja and Meghana Raj lead Kannada movie Aatagara slated for release in May. The movie has completed shooting except for a song sequence. The movie is directed by KM Chaitanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada