»   » 'ಅಪೂರ್ವ' ಚಿತ್ರದ ನಿರ್ದೇಶಕ ವಿ.ರವಿಚಂದ್ರನ್ ಅಲ್ಲ!

'ಅಪೂರ್ವ' ಚಿತ್ರದ ನಿರ್ದೇಶಕ ವಿ.ರವಿಚಂದ್ರನ್ ಅಲ್ಲ!

Posted By:
Subscribe to Filmibeat Kannada

ಪ್ರಯೋಗಕ್ಕೆ ಸಾವಿದೆ. ಪ್ರಯತ್ನಕ್ಕಲ್ಲ..! ಈ ಮಾತನ್ನ ಅಕ್ಷರಶಃ ನಂಬಿರುವವರು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪ್ರಯೋಗ ಮಾಡುವ ಪ್ರೇಮಲೋಕ ಸೃಷ್ಟಿಸಿದ ಈ ದೇವರು, ಇದೀಗ 'ಅಪೂರ್ವ' ಸಿನಿಮಾ ತೆರೆಗೆ ತರುತ್ತಿರುವ ವಿಷಯ ಎಲ್ಲಾ ಕನ್ನಡಾಭಿಮಾನಿಗಳಿಗೆ ಗೊತ್ತಿದೆ.

ಕಥೆ-ಚಿತ್ರಕಥೆ-ಸಂಭಾಷಣೆ-ಸಂಗೀತ-ನಿರ್ದೇಶನ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಏಕಪಾತ್ರಾಭಿನಯ ಮಾಡುವ ರವಿಮಾಮ 'ಅಪೂರ್ವ' ಚಿತ್ರದ ನಿರ್ದೇಶಕನಲ್ಲ.! ಬೇಕಾದ್ರೆ, ಇಲ್ಲಿಯವರೆಗೂ ರಿಲೀಸ್ ಆಗಿರುವ 'ಅಪೂರ್ವ' ಚಿತ್ರದ ಪೋಸ್ಟರ್ ಮತ್ತು ವಿಡಿಯೋಗಳನ್ನೊಮ್ಮೆ ನೋಡಿ...


Kannada Movie Apoorva

ಎಲ್ಲಾದರಲೂ 'A FILM 'D'SIGNED BY' ವಿ.ರವಿಚಂದ್ರನ್ ಅಂತ ಇದೆ ಹೊರತು, ಯಾವುದರಲ್ಲೂ ಇದು 'ಕನಸುಗಾರನ ಮತ್ತೊಂದು ಕನಸು' ಅಥವಾ 'ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ಸಂಗೀತ-ನಿರ್ದೇಶನ : ವಿ.ರವಿಚಂದ್ರನ್' ಅಂತ ಇಲ್ಲ.


ಹಾಗಂದ ಮಾತ್ರಕ್ಕೆ, ಇದು ರವಿಚಂದ್ರನ್ ಆಕ್ಷನ್ ಕಟ್ ಹೇಳಿರುವ ಸಿನಿಮಾ ಅಲ್ಲ ಅನ್ನುವ ನಿರ್ಧಾರಕ್ಕೆ ಬರುವ ಮುನ್ನ, ಇದರ ಹಿಂದಿನ ಕಥೆಯನ್ನ ಕೇಳಿ. 'ಅಪೂರ್ವ' ನಿಮಗೆಲ್ಲರಿಗೂ ಗೊತ್ತಿರುವ ಹಾಗೆ, 61 ರ ಆಸುಪಾಸಿನ ಮುದುಕ ಮತ್ತು 19 ರ ಯುವತಿಯ ನಡುವಿನ ಪ್ರೇಮಕಥೆ. ['ಪ್ರೇಮಿಗಳ ದಿನ'ದಂದು ರವಿಚಂದ್ರನ್ ಬಂಪರ್ ಉಡುಗೊರೆ]


Kannada Movie Apoorva

ಚಿತ್ರದ ಬಹುತೇಕ ಭಾಗ ಒಂದೇ ಲಿಫ್ಟ್ ನಲ್ಲಿ ಚಿತ್ರೀಕರಿಸಲಾಗಿದೆ. ಇಡೀ ಸಿನಿಮಾದಲ್ಲಿ ಇರುವುದು ನಾಯಕ ಮತ್ತು ನಾಯಕಿ ಇಬ್ಬರೇ. ಲಿಫ್ಟ್ ನಲ್ಲಿ ಇಬ್ಬರ ನಡುವೆ ನಡೆಯುವ ಸಂಭಾಷಣೆಯೇ 'ಅಪೂರ್ವ'. ಹೀಗಾಗಿ, 'ಅಪೂರ್ವ' ಚಿತ್ರದಲ್ಲಿ ಸಹ ನಿರ್ದೇಶಕರ ಅವಶ್ಯಕತೆ ಇರ್ಲಿಲ್ಲ.


ತಾಂತ್ರಿಕ ವರ್ಗದಲ್ಲಿ ಇದ್ದವರು ಬೆರಳೆಣಿಕೆಯ ಮಂದಿ ಮಾತ್ರ. ಸಹ-ನಿರ್ದೇಶಕರಿಲ್ಲದೇ, ಶೂಟಿಂಗ್ ಗಿಂತ ತಾಂತ್ರಿಕ ಕಾರ್ಯಗಳಲ್ಲಿ ರವಿಮಾಮನ ಕೈಚಳಕ ಹೆಚ್ಚಾಗಿದ್ದರಿಂದ ಚಿತ್ರದ ಡಿಸೈನ್ನಿಂಗ್ ಗೆ ಮಾತ್ರ ವಿ.ರವಿಚಂದ್ರನ್ ಕ್ರೆಡಿಟ್ ತೆಗೆದುಕೊಂಡಿದ್ದಾರೆ. 'ಅಪೂರ್ವ' ಚಿತ್ರದ ಟೈಟಲ್ ಕಾರ್ಡ್ ನಲ್ಲೂ ಹೀಗೆ ಬಳಸಲಾಗಿದ್ದು, 'ನಿರ್ದೇಶಕ' ಅಂತ ರವಿಮಾಮ ಹಾಕಿಕೊಂಡಿಲ್ಲ. [ಕ್ರೇಜಿಸ್ಟಾರ್ ಗೆ 'ಲಹರಿ' ಸಂಸ್ಥೆ ಕೊಟ್ಟಿದ್ದು ಬ್ಲ್ಯಾಂಕ್ ಚೆಕ್!]


Kannada Movie Apoorva

'ಪ್ರೇಮಿಗಳ ದಿನ'ದಂದು 'ಅಪೂರ್ವ' ಹಾಡುಗಳು ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಏಕಾಂಗಿ' ನಂತ್ರ 'ಅಪೂರ್ವ' ಮೂಲಕ ಹೊಸ ಪ್ರಯೋಗಕ್ಕಿಳಿದಿರುವ ರವಿಚಂದ್ರನ್ ಗೆ ಈ ಮೂಲಕ ಯಶಸ್ವಿಯಾದರೆ, ಕ್ರೇಜಿ ಅಭಿಮಾನಿಗಳಿಗೆ ಅದಕ್ಕಿಂತ 'ಅಪೂರ್ವ' ಕ್ಷಣ ಮತ್ತೊಂದಿಲ್ಲ.

English summary
Most Awaited Kannada Movie Apoorva is 'D'signed but NOT directed by V.Ravichandran. All the posters and videos of the movie presents V.Ravichandran as Designer and Not Director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada