»   » 'ಕೇರ್ ಆಫ್ ಪುಟ್ ಪಾತ್ 2' ಹಾಡುಗಳು, ನವೆಂಬರ್ 3ಕ್ಕೆ, ಮಾರುಕಟ್ಟೆಯಲ್ಲಿ

'ಕೇರ್ ಆಫ್ ಪುಟ್ ಪಾತ್ 2' ಹಾಡುಗಳು, ನವೆಂಬರ್ 3ಕ್ಕೆ, ಮಾರುಕಟ್ಟೆಯಲ್ಲಿ

Posted By:
Subscribe to Filmibeat Kannada

ಮಾಸ್ಟರ್ ಕಿಶನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕೇರ್ ಆಫ್ ಪುಟ್ ಪಾತ್-2' ಚಿತ್ರ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ನವೆಂಬರ್ 3 ರಂದು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡಲು ಮಾಸ್ಟರ್ ಕಿಶನ್ ನಿರ್ಧರಿಸಿದ್ದಾರೆ.

ಜೊತೆಗೆ ಇದೇ ಚಿತ್ರ ತೆಲುಗಿಗೂ ಡಬ್ ಆಗುತ್ತಿದ್ದು, ತೆಲುಗು ವರ್ಷನ್ 'ಮಂಜ' ಚಿತ್ರದ ಆಡಿಯೋ ಬಿಡುಗಡೆಯನ್ನು ನವೆಂಬರ್ 2 ಅಥವಾ 4 ರಂದು ಬಿಡುಗಡೆ ಮಾಡಲು ಚಿತ್ರದ ನಿರ್ದೇಶಕ ಮಾಸ್ಟರ್ ಕಿಶನ್ ಅವರು ಪ್ಲಾನ್ ಮಾಡಿದ್ದಾರೆ.

Kannada movie 'Care of Footpath 2' Audio on November 3rd

ಚಿತ್ರ ಬಿಡುಗಡೆಗೆ ಮುಂಚೆಯೇ 'ಆಸ್ಕರ್ ಆವಾರ್ಡ್' ಗೆ ನಾಮಿನೇಟ್ ಆಗಿ ಸುದ್ದಿ ಮಾಡಿರುವ 'ಕೇರ್ ಆಫ್ ಪುಟ್ ಪಾತ್-2' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನು ಈ ವರ್ಷದ ಕೊನೆಗೆ ಚಿತ್ರವನ್ನು ಬಿಡುಗಡೆಗೊಳಿಸಲು ಮಾಸ್ಟರ್ ಕಿಶನ್ ಅವರು ಪ್ಲಾನ್ ಮಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಹಿಂದಿ ನಟಿ ಇಶಾ ಡಿಯೋಲ್ ಅವರು ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲರ ಮನಗೆದ್ದಿದ್ದಾರೆ.

Kannada movie 'Care of Footpath 2' Audio on November 3rd

ಇನ್ನುಳಿದಂತೆ 'ಅಶ್ವಿನಿ ನಕ್ಷತ್ರ' ಖ್ಯಾತಿಯ ಜೆ.ಕೆ, ಅವಿಕಾ ಘೋರ್, ಜಾಕಿಶ್ರಾಫ್, ಡಾ.ಮೋಹನ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಮೊದಲು ಮಾಸ್ಟರ್ ಕಿಶನ್ ನಿರ್ದೇಶನದಲ್ಲಿ ಮೂಡಿಬಂದಿದ್ದ, 'ಕೇರ್ ಆಫ್ ಪುಟ್ ಪಾತ್', ಹಿಟ್ ಆಗಿದ್ದು, ಜನಮನ್ನಣೆ ಗಳಿಸಿ ಎಲ್ಲರಿಂದ ಶಭಾಶ್ ಗಿರಿ ಗಿಟ್ಟಿಸಿಕೊಂಡಿತ್ತು. ಅದೇನೇ ಇರಲಿ ಇದೀಗ ಸದ್ಯದಲ್ಲೇ 'ಕೇರ್ ಆಫ್ ಪುಟ್ ಪಾತ್-2' ಚಿತ್ರದ ಕನ್ನಡ ಹಾಗೂ ತೆಲುಗು ವರ್ಷನ್ ನ ಹಾಡುಗಳು ಮಾರುಕಟ್ಟೆಯಲ್ಲಿ ನಿಮಗೆ ಲಭ್ಯ ಆಗಲಿದೆ.

English summary
The audio release of 'Care of Footpath 2' being directed by Kishan is all set to be released on the 03rd of November. Kishan is also planning to release the audio of the Telugu version 'Maanja' on 2nd or 4th of November.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada