»   » ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯಾಗೋ ಸುದ್ದಿ

ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯಾಗೋ ಸುದ್ದಿ

Posted By:
Subscribe to Filmibeat Kannada

ಮಾಸ್ಟರ್ ಕಿಶನ್ ನಿರ್ದೇಶನ ಮಾಡಿದ್ದ 'ಕೇರ್ ಆಫ್ ಪುಟ್ ಪಾತ್ 2' ಚಿತ್ರ ಬಿಡುಗಡೆ ಕಂಡಾಗ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ 'ಕೇರ್ ಆಫ್ ಪುಟ್ ಪಾತ್ 2' ಮತ್ತೆ ಸುದ್ದಿಯಲ್ಲಿದೆ.

ಹೌದು ನೆದರ್ಲ್ಯಾಂಡ್ಸ್ ನ ಆಂಸ್ಟರ್ಡ್ಯಾಮ್ ನಲ್ಲಿ ಮೇ 20 ರಿಂದ 23ರವರೆಗೆ ನಡೆಯುವ 'ಬಾಲಿವುಡ್ ಬೌಲೆವರ್ಡ್' ಭಾರತೀಯ ಚಲನಚಿತ್ರೋತ್ಸವಕ್ಕೆ ಕಿಶನ್ ನಿರ್ದೇಶನದ 'ಕೇರ್ ಆಫ್ ಪುಟ್ ಪಾತ್ 2' ಅಧೀಕೃತ ಪ್ರವೇಶ ಪಡೆದುಕೊಂಡಿದ್ದು, ಅಲ್ಲಿ ಪ್ರದರ್ಶನ ಕಾಣಲಿದೆ.[ವಿಡಿಯೋ: ಪುಟ್ ಪಾತ್ ಹುಡುಗನ ಸಾಹಸಕ್ಕೆ, ಕಿಚ್ಚನ ಮೆಚ್ಚುಗೆ..!]


Kannada movie 'Care of Footpath 2' selected for 'Bollywood Boulevard'

ಈ ಮೊದಲು ಕೂಡ ಈ ಸಿನಿಮಾ ಆಂಸ್ಟರ್ಡ್ಯಾಮ್ ನಲ್ಲಿ ನಡೆದ ಸಿನಿಕೆಡ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು.


ಇದೀಗ ಈ ಚಲನಚಿತ್ರೋತ್ಸವದಲ್ಲಿ ಹಿಂದಿ ಸಿನಿಮಾಗಳಾದ ಸಂಜಯ್ ಲೀಲಾ ಬನ್ಸಾಲಿ ಅವರ 'ಬಾಜೀರಾವ್ ಮಸ್ತಾನಿ', 'ಸನಮ್ ತೇರಿ ಸನಮ್', ಹಾಗೂ ಎವರ್ ಗ್ರೀನ್ ಸಿನಿಮಾಗಳಾದ 'ಶೋಲೆ', 'ದೇವದಾಸ್' ಮತ್ತು 'ಮದರ್ ಇಂಡಿಯಾ' ಪ್ರದರ್ಶನ ಕಾಣುತ್ತಿದ್ದು, ಕನ್ನಡ ಭಾಷೆಯಿಂದ 'ಕೇರ್ ಆಫ್ ಪುಟ್ ಪಾತ್ 2' ಸಿನಿಮಾ ಮಾತ್ರ ಪ್ರದರ್ಶನಕ್ಕೆ ಆಯ್ಕೆ ಆಗಿರುವುದು ನಿಜಕ್ಕೂ ಸ್ಯಾಂಡಲ್ ವುಡ್ ಗೆ ಇದು ಹೆಮ್ಮೆಯ ಸಂಗತಿ.[ಮತ್ತೊಂದು ದಾಖಲೆ ಬರೆದ ಕಿಶನ್ ಅವರ 'ಕೇರ್ ಆಫ್ ಫುಟ್ ಪಾತ್ 2'.!]


Kannada movie 'Care of Footpath 2' selected for 'Bollywood Boulevard'

ಇನ್ನು ಈ ಸಿನಿಮೋತ್ಸವ ಸಮಾರಂಭಕ್ಕೆ ಚಿತ್ರದ ನಿರ್ದೇಶಕ ಕಮ್ ನಟ ಮಾಸ್ಟರ್ ಕಿಶನ್ ಮತ್ತು ಚಿತ್ರದ ನಿರ್ಮಾಪಕ ದೇವರಾಜ್ ಪಾಂಡೆ ಅವರು ಈಗಾಗಲೇ ತೆರಳಿದ್ದು, ಮೇ 24 ರಂದು ಮತ್ತೆ ಭಾರತಕ್ಕೆ ವಾಪಸಾಗಲಿದ್ದಾರೆ.


ಈ ಚಿತ್ರದಲ್ಲಿ ಮಾಸ್ಟರ್ ಕಿಶನ್ ಸೇರಿದಂತೆ ಬಾಲಿವುಡ್ ನಟಿ ಇಶಾ ಡಿಯೋಲ್, ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಂ, ಹಾಗು ಬಹುಭಾಷಾ ನಟಿ ಅವಿಕಾ ಗೋರ್ ಕಾಣಿಸಿಕೊಂಡಿದ್ದರು.

English summary
Kannada movie 'Care of Footpath 2' which is directed by Actor Master Kishan has been selected as an official entry for the 'Bollywood Boulevard', an Indian film festival happening at Amsterdam, Netherlands.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada