»   » ಇಲ್ಲೂ ಬಾಯ್ ಫ್ರೆಂಡ್ ಎದುರೇ ಗ್ಯಾಂಗ್ ರೇಪ್...!

ಇಲ್ಲೂ ಬಾಯ್ ಫ್ರೆಂಡ್ ಎದುರೇ ಗ್ಯಾಂಗ್ ರೇಪ್...!

By: ರವಿಕಿಶೋರ್
Subscribe to Filmibeat Kannada

ಆ ಒಂದು ಗ್ಯಾಂಗ್ ರೇಪ್ ಪ್ರಕರಣ ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬೀಳುವಂತೆ ಮಾಡಿತು. ದೇಶದ ರಾಜಧಾನಿ ದೆಹಲಿಯಲ್ಲಿ ಡಿಸೆಂಬರ್ 16, 2012ರಂದು ವೈದ್ಯವಿದ್ಯಾರ್ಥಿನಿಯೊಬ್ಬಳನ್ನು ಚಲಿಸುತ್ತಿದ್ದ ಬಸ್ಸಿನಲ್ಲಿ ಆರು ಮಂದಿ ದುಷ್ಕರ್ಮಿಗಳು ಕಬ್ಬಿಣದ ಸರಳಿನಿದ ಹೊಡೆಯುವ ಮೂಲಕ ದಾರುಣವಾಗಿ ಅತ್ಯಾಚಾರ ಮಾಡಿದ್ದರು.

ಈ ಪೈಶಾಚಿಕ ಘಟನೆಯಿಂದ ಯುವತಿಯ ತಲೆ ಹಾಗೂ ಕರುಳಿಗೆ ತೀವ್ರವಾದ ಗಾಯಗಳುಂಟಾಗಿದ್ದವು. ಹದಿಮೂರು ದಿನಗಳ ಕಾಲ ಸಾವು ಬದುಕಿನೊಂದಿಗೆ ಹೋರಾಡಿದ ಯುವತಿ ಅಂತಿಮವಾಗಿ 29ರಿಂದ, ಡಿಸೆಂಬರ್ 2012ರಂದು ಕೊನೆಯುಸಿರೆಳೆದಳು. ಈಗ ಇದೇ ನೈಜ ಘಟನೆಯನ್ನಾಧರಿಸಿ ಕನ್ನಡದಲ್ಲೊಂದು ಚಿತ್ರ ತಯಾರಾಗುತ್ತಿದೆ.

ಈ ಚಿತ್ರದ ಹೆಸರು 'ಜಾಸ್ಮಿನ್ 5'. ಚಿತ್ರ ಶೀರ್ಷೆಕೆ ಒಂಥರಾ ವಿಚಿತ್ರವಾಗಿದೆ ಅನ್ನಿಸುತ್ತದೆ ಅಲ್ಲವೆ? ಹೌದು ಅಲ್ಲಿ ರಿಯಲ್ ಆಗಿ ಆರು ಮಂದಿ ದುಷ್ಕರ್ಮಿಗಳು ಅತ್ಯಾಚಾರವೆಸಗಿದರು. ಆದರೆ ಚಿತ್ರದಲ್ಲಿ ಐದು ಮಂದಿ ಈ ದುಷ್ಕೃತ್ಯವೆಸಗುತ್ತಾರೆ.

ದಬಾಂಗ್ 2 ಸಿನಿಮಾ ನೋಡಲು ಹೋಗಿದ್ದ ಹುಡುಗಿ

ಡಿಸೆಂಬರ್ 16ರ ಸಂಜೆ ಅತ್ಯಾಚಾರಕ್ಕೊಳಗಾದ ಯುವತಿ ಗೆಳೆಯನೊಂದಿಗೆ ದಬಾಂಗ್ 2 ಸಿನಿಮಾ ನೋಡಲು ಹೋಗಿರುತ್ತಾಳೆ. ಸಿನಿಮಾ ನೋಡಿ ಬಂದ್ ಐದು ಮಂದಿ ಪ್ರಯಾಣಿಸುತ್ತಿದ್ದ ಬಸ್ ಹತ್ತುತ್ತಾರೆ. ಸ್ವಲ್ಪ ಸಮಯದ ನಂತರ ಜೊತೆಗಿದ್ದ ಗೆಳೆಯನಿಗೆ ಕಬ್ಬಿಣದ ಸರಳಿನಿಂದ ಹೊಡೆದು, ಒಂದು ಗಂಟೆಯವರೆಗೂ ಯುವತಿಯ ಮೇಲೆ ಐವರು ಅತ್ಯಾಚಾರ ನಡೆಸುತ್ತಾರೆ.

ಟ್ರೇಲರ್ ನಲ್ಲಿ ಕತ್ತಲು ಬೆಳಕಿನಾಟ

ಇವೆಲ್ಲವೂ ಚಿತ್ರದ ಟ್ರೇಲರ್ ನ ಕತ್ತಲು ಬೆಳಕಿನಲ್ಲಿ ತೋರಿಸಲಾಗಿದೆ. ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಹಿನ್ನೆಲೆಯಲ್ಲಿ ತಯಾರಾಗುತ್ತಿರು 'ಜಾಸ್ಮಿನ್ 5' ಚಿತ್ರದ ಚಿತ್ರೀಕರಣ ವೇಗವಾಗಿ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಚಿತ್ರದ ನಾಯಕಿ ನವ್ಯಾ ಓಡಿಬಂದ ಹುಡುಗಿ

ಚಿತ್ರದ ನಾಯಕಿ ನವ್ಯಾ ತನ್ನ ಮನೆ ಬಿಟ್ಟು ಪ್ರೀತಿಸಿದ ಹುಡುಗ ಮನೆಗೆ ಬಂದಿರುತ್ತಾಳೆ. ಪೊಲೀಸ್ ಅಧಿಕಾರಿಯಾಗಿದ್ದ ನಾಯಕಿಯ ಮಾವ ಅಲ್ಲಿಗೆ ಬಂದಾಗ ನಾಯಕಿ ಹಾಗೂ ಆತನ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಇಬ್ಬರ ಮಧ್ಯೆ ಫೈಟ್ ಕೂಡ ನಡೆಯುವ ದೃಶ್ಯವನ್ನು ವಿಲ್ಸನ್ ಗಾರ್ಡನ್ ಮನೆಯೊಂದರಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ವಿ.ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ

ವಿ.ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಪ್ರಸನ್ನ ಕುಮಾರ್ ಛಾಯಾಗ್ರಹಣ, ಎಂ. ಸಂಜೀವ್ ಸಂಗೀತ, ಕಪಿಲ್, ಚಂದ್ರರೆಡ್ಡಿ ಮನು ನೃತ್ಯ ನಿರ್ದೇಶನ, ಅಲ್ಟಿಮೆಟ್ ಶಿವು ಸಾಹಸ, ಶ್ರೀಕಾಂತ್ ಸಂಕಲನವಿದೆ.

ಪಾತ್ರವರ್ಗದಲ್ಲಿ ಯಾರ್‍ಯಾರು ಇದ್ದಾರೆ?

ಈ ಚಿತ್ರದಲ್ಲಿ ಮೋಹನ್, ನವ್ಯಾ, ಸುಧಾಬೆಳವಾಡಿ, ದೊಡ್ಡಣ್ಣ, ಗೌತಮ್, ಹೇಮಂತ್, ಲಕ್ಷ್ಮೀದೇವಮ್ಮ, ಪದ್ಮಜಾರಾವ್, ಸರೋಜಮ್ಮ, ಮುರುಳಿ, ಪ್ರಕಾಶ್, ರಮೇಶ್, ಗಿರಿಜಾ ಲೋಕೇಶ್, ಹೊನ್ನವಳ್ಳಿ ಕೃಷ್ಣ ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ.

ದೆಹಲಿ ದೇವತೆಯ ದುರಂತ ಕಥೆ

ಈ ಚಿತ್ರವನ್ನು ಚಿತ್ರತಂಡ ಹೇಳುವಂತೆ "ನಮ್ಮ ಚಿತ್ರವನ್ನು ದೆಹಲಿಯ ಆ ದೇವತೆಗೆ ಅರ್ಪಿಸುತ್ತಿದ್ದೇವೆ". ದೆಹಲಿ ದೇವತೆಯ ದುರಂತ ಕಥೆ ಎಂಬುದು ಈ ಚಿತ್ರದ ಅಡಿಬರಹ. ಭವ್ಯಾಸ್ಮಿ ಮೂವಿ ಕ್ರಿಯೇಟರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರವಿದು.

English summary
Kannada film titled as 'Jasmine 5', based on Delhi gang rape incident directed by V Krishna. This film is dedicated to godess of delhi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada