»   » ಹೊಸಬರ, ಹೊಸತರಹದ ಚಿತ್ರ 'ಕೋಟೆ ಹೈದ'

ಹೊಸಬರ, ಹೊಸತರಹದ ಚಿತ್ರ 'ಕೋಟೆ ಹೈದ'

Posted By:
Subscribe to Filmibeat Kannada

ಕೋಟೆ ನಾಡು ಎಂದೇ ಪ್ರಸಿದ್ಧವಾದ ಚಿತ್ರದುರ್ಗದಲ್ಲಿ ಬಾಳಿ ಬದುಕಿದ ಅನೇಕ ವೀರ-ಶೂರರ ಕಾಲ್ಪನಿಕ ಹಾಗೂ ನೈಜ ಕಥೆಗಳನ್ನಾಧರಿಸಿ ಈಗಾಗಲೇ ಹಲವಾರು ಚಲನಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಬಂದು ಹೋಗಿವೆ. ಅದೇ ರೀತಿ ಇದೀಗ ಮತ್ತೊಂದು ಸಿನಿಮಾ ಸದ್ದಿಲ್ಲದಂತೆ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತೊಡಗಿಕೊಂಡಿದೆ.

ಹಿರಿಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಕೆ.ಎಸ್.ಸತ್ಯನಾರಾಯಣ, ತಿಪಟೂರು ರಘು, ಎ.ಟಿ.ರಘು ಮೊದಲಾದ ದಿಗ್ಗಜರ ಬಳಿ ಕೆಲಸ ಮಾಡಿದ ಎ.ಎಸ್.ರತ್ನಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು "ಕೋಟೆ ಹೈದ" ಟೈಟಲ್ ಕೇಳಿದರೆ ಇದೊಂದು ಐತಿಹಾಸಿಕ ಚಿತ್ರ ಎನ್ನುವ ಆಲೋಚನೆ ಬರುವುದು ಸಹಜ.

Kote Haida movie still

ಆದರೆ ಇದು ಪಕ್ಕಾ ಈಗಿನ ಕಾಲದ ಹುಡುಗನೊಬ್ಬನ ಸ್ಟೋರಿ, ಕ್ಲಾಸ್ ಮಾಸ್, ಕಾಮಿಡಿ ಲವ್ ಈ ಥರದ ಎಲ್ಲಾ ಮಸಾಲೆ ಅಂಶಗಳನ್ನು ಒಳಗೊಂಡಿರುವ ಕೋಟೆ ಹೈದನಿಗೆ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಉಳ್ಳಳ್ಳಿ ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ 5 ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಸೂರ್ಯ ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ.

ಕೋಟೆ ಮಾರಮ್ಮ ಮೂವೀ ಮೇಕರ್ಸ್ ಲಾಂಛನದಲ್ಲಿ ಎನ್.ಮಂಜುಳಾ ರಾಮಯ್ಯ, ಸುರೇಶ್ ನಿರ್ಮಲ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಧನಶೀಲ ಸಂಗೀತ, ಎಸ್.ಮಂಜು (ಸೋಮು) ಕಥೆ, ಚಿತ್ರಕಥೆ, ಸಂಭಾಷಣೆ ಕೌರವ ವೆಂಕಟೇಶ್ ಸಾಹಸ, ಅಂಜಿರೆಡ್ಡಿ ಸಂಕಲನ, ಬಿ.ಜಿ.ರವಿ ನಿರ್ಮಾಣ ನಿರ್ವಹಣೆ, ಕೃಷ್ಣೋಜಿರಾವ್ ಸಹ ನಿರ್ದೇಶನವಿದೆ. ಸೂರ್ಯ, ಶಿಲ್ಪಾ, ಸಂದ್ಯಾ, ಪುಷ್ಪ, ರಂಜುಶ್ರೀ, ಹೊನ್ನವಳ್ಳಿಕೃಷ್ಣ, ಬೀರಾದಾರ್, ವೆಂಕಟೇಶ್, ಕುರಿರಂಗ, ಸಿತಾರಾ, ರಮ್ಯ, ಸುಜಾತ, ನಾಗವರ್ಧನ್, ಸತೀಶ್, ರಾಮಣ್ಣ ಇನ್ನು ಮೊದಲಾದ ತಾರಾಗಣವಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada movie 'Kote Haida' shooting finished and post production work is in progress. The movie is being directed by A.S Ratnakar, who is worked with great directors Puttanna Kanagal, KS Satyanarayana, Tipaturu Raghu and AT Raghu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada