»   » ಮೈಸೂರಿನಲ್ಲಿ ನಡೆದ ಕ್ರೈಂ ಸ್ಟೋರಿಯೇ 'ಪ್ರಿಯಾಂಕ' ಸಿನಿಮಾ!

ಮೈಸೂರಿನಲ್ಲಿ ನಡೆದ ಕ್ರೈಂ ಸ್ಟೋರಿಯೇ 'ಪ್ರಿಯಾಂಕ' ಸಿನಿಮಾ!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ನಟಿಸಿರುವ 'ಪ್ರಿಯಾಂಕ' ಸಿನಿಮಾ ನೈಜ ಘಟನೆ ಆಧರಿಸಿರುವ ಚಿತ್ರ ಅನ್ನೋದು ನಿಮಗೆಲ್ಲಾ ಗೊತ್ತಿದೆ. ಆದ್ರೆ, ಆ ರಿಯಲ್ ಸ್ಟೋರಿ ಯಾವುದು ಅನ್ನೋದು ಮಾತ್ರ ಬಹಿರಂಗವಾಗಿರಲಿಲ್ಲ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಕ್ರೈಂ ಸ್ಟೋರಿಯೇ 'ಪ್ರಿಯಾಂಕ' ಚಿತ್ರಕ್ಕೆ ಸ್ಪೂರ್ಥಿ ಅಂತ ನಟಿ ಪ್ರಿಯಾಂಕ ಉಪೇಂದ್ರ ಬಾಯ್ಬಿಟ್ಟಿದ್ದಾರೆ.


30 ರ ಆಸುಪಾಸಿನ ವಿವಾಹಿತ ಮಹಿಳೆ ಹಿಂದೆ ಬೀಳುವ ಸಾಫ್ಟ್ ವೇರ್ ಎಂಜಿನಿಯರ್, ತನ್ನ ಪ್ರೀತಿ ಪಡೆಯುವುದಕ್ಕಾಗಿ ವಿವಾಹಿತ ಮಹಿಳೆಯ ಪತಿಯನ್ನೇ ಕೊಲೆಗೈಯುವ ರಕ್ತ ಚರಿತ್ರೆ ಈ ಸಿನಿಮಾ.['ಪ್ರಿಯಾಂಕ' ಚಿತ್ರಕಥೆಗೆ ಸ್ಪೂರ್ಥಿಯಾಗಿರುವ ನೈಜ ಘಟನೆ ಯಾವುದು?]


Kannada Movie 'Priyanka' based on crime incident

ವರ್ಷಗಳ ಹಿಂದೆ ಮೈಸೂರಿನಲ್ಲಿ ಈ ಘಟನೆ ನಡೆದಿತ್ತು. ಕೊಲೆ ಮಾಡಿದ್ದ ಆ ಯುವಕ ಇಂದು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಮಾಧ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಈ ವಿಕೃತ ಪ್ರೇಮಿಯ ಕಥೆ ನೋಡಿ ದಿನೇಶ್ ಬಾಬು 'ಪ್ರಿಯಾಂಕ' ಸಿನಿಮಾ ಮಾಡಲು ಮುಂದಾದ್ರಂತೆ.


ನಿಜ ಘಟನೆ ಆಧರಿಸಿರುವ ಚಿತ್ರವಾದರೂ ಅದರಲ್ಲಿರುವ ಸಮಾಜಮುಖಿ ಸಂದೇಶಕ್ಕೆ ಮನಸೋತು ನಟಿ ಪ್ರಿಯಾಂಕ ಉಪೇಂದ್ರ 'ಪ್ರಿಯಾಂಕ' ಸಿನಿಮಾದಲ್ಲಿ ನಟಿಸಲು ಒಪ್ಪಿದರಂತೆ. 'ಪ್ರಿಯಾಂಕ' ಚಿತ್ರವನ್ನ ವೀಕ್ಷಿಸಿ ಉಪೇಂದ್ರ ಕೂಡ ಭೇಷ್ ಅಂದಿದ್ದಾರಂತೆ.


ಹದಿಹರೆಯದ ವಿಕೃತ ಪ್ರೇಮಿಯ ಪಾತ್ರದಲ್ಲಿ ತೆಲುಗು ನಟ ತೇಜಸ್ ನಟಿಸಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ 'ಪ್ರಿಯಾಂಕ' ಬಿಡುಗಡೆ ಆಗಲಿದೆ.

English summary
Kannada Actress Priyanka Upendra revealed that Kannada Movie 'Priyanka' is based on a crime incident which happened in Mysuru. The movie is directed by Dinesh Baboo.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada