»   » 'ಪ್ರಿಯಾಂಕ' ಇದೇ ತಿಂಗಳು ನಿಮ್ಮ ಮುಂದೆ ಬರ್ತಿದ್ದಾಳೆ!

'ಪ್ರಿಯಾಂಕ' ಇದೇ ತಿಂಗಳು ನಿಮ್ಮ ಮುಂದೆ ಬರ್ತಿದ್ದಾಳೆ!

Posted By:
Subscribe to Filmibeat Kannada

ಪ್ರಿಯಾಂಕ ಹೆಸರಲ್ಲೇ 'ಪ್ರಿಯಾಂಕ' ಅನ್ನುವ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ನಟಿಸಿರುವ ಸುದ್ದಿ ನಿಮಗೆಲ್ಲಾ ಗೊತ್ತೇಯಿದೆ.

ಸದಭಿರುಚಿ ಚಿತ್ರಗಳ ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ ಹೇಳಿರುವ 'ಪ್ರಿಯಾಂಕ' ಸಿನಿಮಾಗೆ ಬಿಡುಗಡೆ ಭಾಗ್ಯ ದೊರಕಿದೆ. ಇದೇ ತಿಂಗಳ 15 ನೇ ತಾರೀಖು 'ಪ್ರಿಯಾಂಕ' ರಿಲೀಸ್ ಆಗಲಿದೆ.['ಪ್ರಿಯಾಂಕ' ಚಿತ್ರಕಥೆಗೆ ಸ್ಪೂರ್ಥಿಯಾಗಿರುವ ನೈಜ ಘಟನೆ ಯಾವುದು?]

Kannada Movie 'Priyanka' to release on January 15th

ಮಹಿಳಾ ಪ್ರಧಾನ ಚಿತ್ರವಾಗಿರುವ 'ಪ್ರಿಯಾಂಕ' ನೈಜ ಘಟನೆಯನ್ನಾಧರಿಸಿರುವ ಚಿತ್ರ. 27 ವರ್ಷದ ಯುವಕ ಮತ್ತು 34 ವರ್ಷದ ವಿವಾಹಿತ ಮಹಿಳೆ ನಡುವಿನ ಪ್ರೇಮ ಕಥೆ 'ಪ್ರಿಯಾಂಕ'.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

ವಿವಾಹಿತ ಮಹಿಳೆ ಪ್ರಿಯಾಂಕ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಿದ್ದರೆ, ಲವ್ವರ್ ಬಾಯ್ ಆಗಿ ತೆಲುಗು ನಟ ತೇಜಸ್ ಅಭಿನಯಿಸಿದ್ದಾರೆ. ಹಲವು ಕುತೂಹಲಗಳಿಗೆ ಕಾರಣವಾಗಿರುವ 'ಪ್ರಿಯಾಂಕ' ಸಿನಿಮಾ ಜನವರಿ 15 ರಂದು ನಿಮ್ಮ ಮುಂದೆ.

English summary
According to the reports, Kannada Actress Priyanka Upendra starrer Kannada Movie 'Priyanka', directed by Dinesh Baboo is all set to release on January 15th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada