For Quick Alerts
  ALLOW NOTIFICATIONS  
  For Daily Alerts

  ಕವಿ, ಕಾದಂಬರಿಕಾರ ಎಂಎನ್ ವ್ಯಾಸರಾವ್ ಅಸ್ತಂಗತ

  By Mahesh
  |

  ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ (1974) ಪುಟ್ಟಣ್ಣ ಕಣಗಾಲ್‌ರವರು 'ಲೆಕ್ಕದ ಮೇಲೆ' ಹಾಡು ಬರೆಯಲು ಕೇಳಿದರು. ಸನ್ನಿವೇಶ - ಇಷ್ಟವಿಲ್ಲದೆಯೂ ಇರಬೇಕಾದ ಮನೆಯಲ್ಲಿ ಎಲ್ಲಕ್ಕೂ ಲೆಕ್ಕವಿಟ್ಟು ಹಣ ಕೊಡುವೆನೆಂಬ ಮಹಿಳೆಗೆ ಆ ಮನೆಯಾತ ದ್ವಂದ್ವ ನಿವಾರಿಸುವುದು. ಪುಟ್ಟಣ್ಣ, ರವಿಯವರ ಜತೆ ಪ್ರಯಾಣದಲ್ಲಿ ಎಳನೀರು ಕುಡಿವಾಗ ನಡೆದ ಸಂಭಾಷಣೆ, ಪ್ರಕೃತಿ ಏನ್ ಲೆಕ್ಕ ಇಡತ್ತೆ ಸಾರ್? ಎಂದ ನನಗೆ 'ಬಿಡಿ ಬಂತು ಹಾಡು' ಎಂದರು ಪುಟ್ಟಣ್ಣ. ಆಗ ಮೂಡಿದ ಹಾಡೇ 'ನಾಕೊಂದ್ಲ ನಾಕು... ಇಷ್ಟೇ ಲೆಕ್ಕದ ನಂಟು'. ತಾಳ್ಮೆಯಿಂದ ಪ್ರೋತ್ಸಾಹಿಸಿ ರಾಗದ ಲೆಕ್ಕಾಚಾರ ತಿಳಿಸಿ ಮುನ್ನಡೆಸಿದರು. ಎಂದು ವಿಕ್ರಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕವಿ ಎಂಎನ್ ವ್ಯಾಸರಾವ್ ಅವರು ಹಾಡು ಹುಟ್ಟಿದ ಕಥೆ ಹೇಳಿಕೊಂಡಿದ್ದರು.

  'ಶುಭಮಂಗಳ' ಚಿತ್ರದಲ್ಲಿ ನಾಕ್ಲೊಂದ ನಾಕು, ನಾಕೆರಡ್ಲ ಎಂಟು ಹಾಡು ಬರೆದ ವ್ಯಾಸರಾವ್ ಅವರ ನೀ ಇಲ್ಲದೆ, ನನಗೇನಿದೆ.. ಭಾವಗೀತೆ ಜನಪ್ರಿಯ. ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಕವಿಗೆ ಅಭಿಮಾನಿಗಳು ಅಶ್ರುತರ್ಪಣ ಸಲ್ಲಿಸಿದ್ದಾರೆ.

  ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಕೆಂಪೇಗೌಡ, ಸ್ವರಮಂದಾರ, ಆರ್ಯಭಟ ಪ್ರಶಸ್ತಿ ವಿಜೇತ ಸೃಜನಶೀಲ ಕವಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ..

  English summary
  Kannada poet Lyricist MN Vyasarao passes away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X