»   » 'ಡಬ್ಬಾ ಸಿನಿಮಾ' ಎಂದ ನಟಿ ಸಂಜನಾ ವಿರುದ್ಧ ನಿರ್ಮಾಪಕರ ಆಕ್ರೋಶ

'ಡಬ್ಬಾ ಸಿನಿಮಾ' ಎಂದ ನಟಿ ಸಂಜನಾ ವಿರುದ್ಧ ನಿರ್ಮಾಪಕರ ಆಕ್ರೋಶ

Posted By: ಭರತ್‌ ಕುಮಾರ್‌
Subscribe to Filmibeat Kannada

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಹೆಚ್ಚಾಗುತ್ತಿರುವ ಹಿನ್ನಲೆ ಚಿತ್ರರಂಗದಲ್ಲಿ ಹೊಸ ಹೊಸ ವಿವಾದಗಳು ಹುಟ್ಟಿಕೊಳ್ತಿವೆ. ಕಳೆದ ಕೆಲ ದಿನಗಳಿಂದ ರಿಯಾಲಿಟಿ ಶೋಗಳಿಗೆ ಸಿನಿಮಾ ತಾರೆಯರು ಹೋಗಬಾರದು ಅನ್ನೋದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇದ್ರಿಂದ ನಿರ್ಮಾಪಕರು ಬೀದಿಗಿಳಿದಿದ್ದಾರೆ. ಇಂದು (ಅಕ್ಟೋಬರ್ 8 ) ಇನೋವೇಟಿವ್ ಫಿಲ್ಮ್ ಸೊಸೈಟಿ ಬಳಿ ಪ್ರತಿಭಟನೆ ಕೂಡ ಮಾಡುತ್ತಿದ್ದಾರೆ.

ಈ ವಿವಾದದ ಕಾವು ಹೆಚ್ಚಾಗುತ್ತಿರುವಾಗಲೇ ಈಗ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಈ ಹೊಸ ಕಾಂಟ್ರವರ್ಸಿಯ ರುವಾರಿ ನಟಿ ಸಂಜನಾ.! ['ಇವರು'ಗಳ ಮೇಲೆ ಮಾತ್ರ ಕನ್ನಡ ನಿರ್ಮಾಪಕರ ಸಿಡುಕು-ಮುನಿಸು.!]

ಹೌದು, ಖಾಸಗಿ ಸುದ್ದಿ ವಾಹಿನಿಯ (ಸುವರ್ಣ ನ್ಯೂಸ್‌) ಸಂವಾದ ಕಾರ್ಯಕ್ರಮದಲ್ಲಿ ನಟಿ ಸಂಜನಾ ಹೇಳಿದ 'ಡಬ್ಬಾ ಸಿನಿಮಾ' ಈಗ ವಿವಾದದ ಕೇಂದ್ರಬಿಂದುವಾಗಿದೆ. ಇದೇ ಕಾರಣವನ್ನಿಟ್ಟುಕೊಂಡು ಕನ್ನಡ ಚಿತ್ರ ನಿರ್ಮಾಪಕರು ಸಂಜನಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಮುಂದೆ ಓದಿ.....

ನಟಿ ಸಂಜನಾ ವಿರುಧ್ಧ ನಿರ್ಮಾಪಕರು ಆಕ್ರೋಶ

ಖಾಸಗಿ ವಾಹಿನಿಯ (ಸುವರ್ಣ ನ್ಯೂಸ್‌) ಡಿಸ್ಕಷನ್ ನಲ್ಲಿ ಭಾಗವಹಿಸಿದ್ದ ನಟಿ ಸಂಜನಾ, ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ''ಸಿನಿಮಾ ಮಾಡುವವರು ಡಬ್ಬಾ ಸಿನಿಮಾ ಮಾಡೋದನ್ನ ನಿಲ್ಲಿಸಬೇಕು, ಡಬ್ಬಾ ಸಿನಿಮಾ ಮಾಡಿದ್ರೆ ಡಬ್ಬಾನೇ ಆಗೋದು, ಒಳ್ಳೆ ಸಿನಿಮಾ ಮಾಡಿದ್ರೆ, ರಿಯಾಲಿಟಿ ಶೋ ಬಿಟ್ಟು ಜನ ಬರ್ತಾರೆ'' ಎಂಬ ಅರ್ಥದಲ್ಲಿ ನಟಿ ಸಂಜನಾ ಹೇಳಿದ್ದಾರೆ ಅಂತ ನಿರ್ಮಾಪಕರು ಕಣ್ಣು ಕೆಂಪಗೆ ಮಾಡಿಕೊಂಡು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. [ಭುಗಿಲೆದ್ದ 'ರಿಯಾಲಿಟಿ ಶೋ' ವಿವಾದ: 'ಸ್ಟಾರ್'ಗಳ ವಿರುದ್ಧ ಸಾ.ರಾ.ಗೋವಿಂದು ಗರಂ]

ಸಂಜನಾ ಕೊಟ್ಟ ಪ್ರತಿಕ್ರಿಯೆ

''ಟೆಲಿವಿಷನ್, ಸಿನಿಮಾ ಎಲ್ಲಾ ಒಂದೆ ಪರಿವಾರ. ಟಿವಿ ಶೋ ಮಾಡೊದ್ರಿಂದ ಮತ್ತಷ್ಟು ಕಾರ್ಮಿಕರಿಗೆ ಕೆಲಸ ಸಿಗುತ್ತೆ. ಹೊಟ್ಟೆಗೆ ಅನ್ನ ಸಿಗುತ್ತೆ. ಹೀಗಾಗಿ ಹೊಸ ಶೋ ಬರೋದ್ರಿಂದ ಕಾರ್ಮಿಕರಿಗೆ ಉದ್ಯೋಗ ಸಿಗುತ್ತೆ'' ಎಂಬುದು ''ನನ್ನ ವಾದ ಆಗಿತ್ತು'' ಎನ್ನುತ್ತಾರೆ ನಟಿ ಸಂಜನಾ.

ಡಬ್ಬಾ ಸಿನಿಮಾ ಮಾಡ್ತಾರೆ ಅಂತಾ ಹೇಳಿಲ್ಲ !

''ವಾಹಿನಿಯಲ್ಲಿ ಚರ್ಚೆ ನಡೆಯುವಾಗ, ನಿರ್ಮಾಪಕ ಟೇಶಿ ವೆಂಕಟೇಶ್‌ ಅವರು ಏಕವಚನದಲ್ಲಿ 'ನೀನು ಸುಮ್ಮನಿರಮ್ಮ' ಅಂದ್ರು, ಆಗ ನಾನು ''ನೋಡ್ರಿ ಒಳ್ಳೆ ಸಿನಿಮಾ ಮಾಡಿದ್ರೆ ಯಾವಾಗಲು ಗೆಲ್ಲುತ್ತೆ, ಡಬ್ಬಾ ಸಿನಿಮಾ ಮಾಡಿದ್ರೆ ಗೆಲ್ಲಲ್ಲ ರೀ'' ಅಂದೆ'' ಈಗ ಅದನ್ನೇ ವಿವಾದ ಮಾಡಲಾಗುತ್ತಿದೆ'' ಅಂತ ನಟಿ ಸಂಜನಾ ಸ್ಪಷ್ಟನೆ ನೀಡಿದ್ದಾರೆ.[ಆರಂಭಕ್ಕೂ ಮುನ್ನವೇ 'ಬಿಗ್ ಬಾಸ್ ಕನ್ನಡ-4'ಗೆ ಎದುರಾಗಿದೆ 'ಬಿಗ್' ಸಂಕಷ್ಟ.!]

ಕ್ಷಮೆ ಕೇಳಿದ ಸಂಜನಾ !

''ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದಕ್ಕೆ ಹಾಗೆ ಹೇಳಿದೆ. ಇದು ಯಾವುದೇ ಉದ್ದೇಶಪೂರ್ವಕವಾಗಿ ಆಗಲಿ, ಯಾವ ನಿರ್ದೇಶಕ, ನಿರ್ಮಾಪಕರಿಗಾಗಲಿ ನೇರವಾಗಿ ಹೇಳಿಲ್ಲ. ಇದ್ರಿಂದ ನಿರ್ಮಾಪಕರಿಗೆ ನೋವಾಗಿದ್ರೆ ಖಂಡಿತಾ ಕ್ಷಮೆ ಕೇಳುತ್ತೇನೆ'' ಅಂತ ನಟಿ ಸಂಜನಾ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ವಿಡಿಯೋ ಅಪ್‌ಲೌಡ್ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ

ಟೇಶಿ ವೆಂಕಟೇಶ್ 'ಸಾರಿ' ಕೇಳ್ಬೇಕಂತೆ.!

ಅತ್ತ ನಟಿ ಸಂಜನಾರನ್ನ ವಾಣಿಜ್ಯ ಮಂಡಳಿಗೆ ಕರೆಸಿ, ಒಳ್ಳೆ ಸಿನಿಮಾ ಮಾಡೋದು ಹೇಗೆ ಅಂತ ಪಾಠ ಹೇಳಿಸಿ ಅಂತ ನಿರ್ಮಾಪಕರು ಪಟ್ಟು ಹಿಡಿದಿದ್ದರೆ, ಇತ್ತ ಸಂಜನಾ ಕೂಡ ಮಂಗಳವಾರ ವಾಣಿಜ್ಯ ಮಂಡಳಿಗೆ ಬರ್ತಿನಿ, ಟೇಶಿ ವೆಂಕಟೇಶ್‌ ಅವರು ನನಗೆ ಕ್ಷಮಾಪಣೆ ಕೇಳ್ಬೇಕು ಅಂತ ಬೇಡಿಕೆ ಇಟ್ಟಿದ್ದಾರೆ.

ಮಂಗಳವಾರ ಏನಾಗುತ್ತೆ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ರವರ ಮಧ್ಯಸ್ಥಿಕೆಯಲ್ಲಿ ಈ ವಿವಾದದ ಬಗ್ಗೆ ನಿರ್ಮಾಪಕರು ಹಾಗೂ ಸಂಜನಾ ನಡುವೆ ಸಂಧಾನ ಸಭೆ ನಡೆಯುವ ಸಾಧ್ಯತೆಯಿದೆ.

English summary
Kannada Film Producers are annoyed with Kannada Actress Sanjana Galrani, since the Actress made a controversial statement on them during a live discussion in Suvarna News Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada