»   » ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಸ್ಥಾನ ತುಂಬುವರೇ ಎಚ್.ಡಿ.ಕುಮಾರಸ್ವಾಮಿ.?

ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಸ್ಥಾನ ತುಂಬುವರೇ ಎಚ್.ಡಿ.ಕುಮಾರಸ್ವಾಮಿ.?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ. ಯಾವುದೇ ಸಮಸ್ಯೆ ಉಂಟಾದರೂ, ಅದನ್ನ ಪರಿಹಾರ ಮಾಡಲು ಸಮರ್ಥ ನಾಯಕರು ಇಲ್ಲವೇ ಇಲ್ಲ. ಯಾರಾದರೂ ಗಲಾಟೆ ಮಾಡಿಕೊಂಡಾಗ, ಗದರಿಸಿ ಬುದ್ಧಿ ಹೇಳಬಲ್ಲಂಥ ಒಬ್ಬೇ ಒಬ್ಬ ಗಾಡ್ ಫಾದರ್ ಕೂಡ ಗಾಂಧಿನಗರದಲ್ಲಿ ಇಲ್ಲ ಎಂಬುದು ಕಠೋರ ಸತ್ಯ.

ಡಾ.ರಾಜ್ ಕುಮಾರ್ ಇದ್ದಾಗ, ಎಂತಹ ವಿವಾದವೇ ಆಗಿದ್ದರೂ ನೀರು ಕುಡಿದಷ್ಟೇ ಸಲೀಸಾಗಿ ಬಗೆಹರಿಯುತ್ತಿತ್ತು. ಅಣ್ಣಾವ್ರ ಮಾತನ್ನ ಎಲ್ಲರೂ ಗೌರವಿಸುತ್ತಿದ್ದರು.

ಡಾ.ರಾಜ್ ಬಳಿಕ ಕನ್ನಡ ಚಿತ್ರರಂಗದ ಕೆಲ ಸಮಸ್ಯೆಗಳು ಅಂಬರೀಶ್ ಮನೆ ಬಾಗಿಲಿಗೆ ತಲುಪಿದರೂ, ಪರಿಹಾರ ಕಂಡುಕೊಂಡಿದ್ದು ಬೆರಳೆಣಿಕೆಯಷ್ಟು ವಿವಾದಗಳು ಮಾತ್ರ.

ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಸಮಸ್ಯೆಗಳೇನು?

ಈಗ ಡಬ್ಬಿಂಗ್ ಭೂತ, ಪರಭಾಷೆ ಚಿತ್ರಗಳ ಹಾವಳಿ, ಥಿಯೇಟರ್ ಸಮಸ್ಯೆ, ಮಲ್ಟಿಪ್ಲೆಕ್ಸ್ ದಬ್ಬಾಳಿಕೆ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳು ಕನ್ನಡ ಚಿತ್ರರಂಗವನ್ನು ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥ ನಾಯಕರೊಬ್ಬರು 'ಸ್ಯಾಂಡಲ್ ವುಡ್'ಗೆ ಬೇಕಾಗಿದ್ದಾರೆ. [ಪರಭಾಷೆ ಚಿತ್ರಗಳ ದಬ್ಬಾಳಿಕೆ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗುಡುಗು!]

ಎಚ್.ಡಿ.ಕುಮಾರಸ್ವಾಮಿ ನಾಯಕತ್ವ?

ಗಾಂಧಿನಗರದ ಪ್ರಸ್ತುತ ಸಮಸ್ಯೆಯನ್ನ ಕಣ್ಣಾರೆ ಕಂಡಿರುವ ಎಚ್.ಡಿ.ಕುಮಾರಸ್ವಾಮಿ ನಿನ್ನೆಯಷ್ಟೇ (ಅಕ್ಟೋಬರ್ 24) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಟಿ ಕರೆದಿದ್ದರು. ಎಲ್ಲಾ ಸಮಸ್ಯೆಗಳನ್ನ ಪರಿಹಾರ ಮಾಡುವ ನಿಟ್ಟಿನಲ್ಲಿ ಚರ್ಚೆ/ಹೋರಾಟ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. [ರಿಯಾಲಿಟಿ ಶೋಗಳ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಾಮೆಂಟ್.!]

ನಿರ್ಮಾಪಕರಿಂದ ತೂರಿಬಂದ ಬೇಡಿಕೆ

ಸ್ಯಾಂಡಲ್ ವುಡ್ ಗೆ ಕಾಡುತ್ತಿರುವ ಸಮಸ್ಯೆಗಳ ಕುರಿತು ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದಾಗ, ''ನಮಗೆ ನಾಯಕತ್ವ ಕೊರತೆ ಇದೆ. ಡಾ.ರಾಜ್ ಕುಮಾರ್ ರವರು ಇಲ್ಲ. ಅವರ ಜಾಗವನ್ನ ನೀವು ತುಂಬಬೇಕು'' ಎಂಬ ಬೇಡಿಕೆ ನಿರ್ಮಾಪಕರಿಂದ ಬಂತು.

ಎಚ್.ಡಿ.ಕುಮಾರಸ್ವಾಮಿ ಏನಂದರು?

''ಡಾ.ರಾಜ್ ಕುಮಾರ್ ರವರ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರ ನೆರಳಿನಲ್ಲಿ, ಮಾರ್ಗದರ್ಶನದಲ್ಲಿ ನಡೆದುಕೊಂಡು ಹೋಗೋಣ'' ಎಂದರು ಎಚ್.ಡಿ.ಕುಮಾರಸ್ವಾಮಿ. [ಡಾ.ರಾಜ್ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಏನಂದ್ರು ಗೊತ್ತಾ?]

ಡಾ.ರಾಜ್ ಕುಮಾರ್ ರವರೇ ಸ್ಫೂರ್ತಿ

''ನನ್ನ ಮೈನಲ್ಲಿ ಇರುವುದು ಕನ್ನಡ ರಕ್ತ. ನಾನು ಮುಖ್ಯಮಂತ್ರಿ ಆಗಿ ಯಶಸ್ಸು ಕಾಣಲು ಕಾರಣ ಡಾ.ರಾಜ್ ಕುಮಾರ್ ರವರು. ಅವರ ಚಿತ್ರ ನೋಡಿ ಬೆಳೆದವನು ನಾನು. ಚಿತ್ರರಂಗದ ಉಳಿವಿಗಾಗಿ ಒಗ್ಗಟ್ಟಿನಿಂದ ಚರ್ಚೆ ಮಾಡೋಣ. ನಿಮ್ಮೆಲ್ಲರ ಸ್ನೇಹಿತನಾಗಿ ನಿಮ್ಮ ಹೋರಾಟಕ್ಕೆ ನಾನು ಬೆಂಬಲಾಗಿ ನಿಲ್ಲುತ್ತೇನೆ. ವಾಣಿಜ್ಯ ಮಂಡಳಿಗೆ ಒಂದು ಬ್ಯಾಕ್ ಬೋನ್ ಬೇಕು. ಅದಕ್ಕೆ ನಾನು ಈಗ ಬಂದಿದ್ದೇನೆ. ಚೇಂಬರ್ ಗೆ ಇರುವ ಅಧಿಕಾರವನ್ನ ಕಠಿಣವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನಾನು ಬೆಂಬಲ ನೀಡುತ್ತೇನೆ'' - ಎಚ್.ಡಿ.ಕುಮಾರಸ್ವಾಮಿ

English summary
Kannada Film Producers expressed their desire to make Former Chief Minister, JDS Leader, Politician, Producer HD Kumaraswamy as 'Leader of Kannada Film Industry' in a Press Meet Held at KFCC, Bengaluru on October 24th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada