Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಡಬ್ಬಿಂಗ್ ಬೇಕು' ಚಳುವಳಿ ಮತ್ತೆ ಶುರು: ಏನೇ ಆಗಲಿ 'ಮೋಗ್ಲಿ' ಕನ್ನಡಕ್ಕೆ ಬರಲಿ!
ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಡಬ್ಬಿಂಗ್ ವಿವಾದ ಇದೀಗ ಮತ್ತೆ ಹೊಗೆಯಾಡುತ್ತಿದೆ. 'ಡಬ್ಬಿಂಗ್ ಬೇಕು' ಎಂಬ ಚಳುವಳಿ ಮಗದೊಮ್ಮೆ ಆರಂಭವಾಗಿದೆ.
ಡಬ್ಬಿಂಗ್ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ನಡೆಸಿದ್ದವು. 'ಡಬ್ಬಿಂಗ್ ಬೇಡ' ಎಂಬ ಅಭಿಪ್ರಾಯ ಕನ್ನಡ ಚಿತ್ರರಂಗದಲ್ಲಿ ವ್ಯಕ್ತವಾಗಿದ್ದರೂ, ಕನ್ನಡಿಗರು ಮಾತ್ರ 'ಡಬ್ಬಿಂಗ್ ಬೇಕೇ ಬೇಕು' ಅಂತ ಪಟ್ಟು ಹಿಡಿದು ಕೂತಿದ್ದಾರೆ.
ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹಾಲಿವುಡ್ ಸಿನಿಮಾ 'ಮೋಗ್ಲಿ' ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. 'ಮೋಗ್ಲಿ' ಚಿತ್ರವನ್ನ ಕನ್ನಡ ಭಾಷೆಯಲ್ಲಿ ನೋಡಬೇಕು ಎಂಬುದು ಕನ್ನಡಿಗರ ಬಯಕೆ.
ಕರ್ನಾಟಕದಲ್ಲಿರುವ ಬಹುಪಾಲು ಜನರಿಗೆ ಇಂಗ್ಲೀಷ್ ಭಾಷೆ ಬರುವುದಿಲ್ಲ. ಹೀಗಾಗಿ, 'ಮೋಗ್ಲಿ' ಕಥೆಯನ್ನ ಕನ್ನಡದಲ್ಲಿಯೇ ನೋಡಬೇಕು ಎಂದು ಕನ್ನಡಿಗರು ಟ್ವಿಟ್ಟರ್ ನಲ್ಲಿ #MowgliInKannada ಅಭಿಯಾನ ಶುರು ಮಾಡಿದ್ದಾರೆ. ಬೇಕಾದ್ರೆ, ನೀವೇ ಕೆಲ ಟ್ವೀಟ್ ಗಳನ್ನು ನೋಡಿ...

ಕರ್ನಾಟಕದಲ್ಲಿ ಡಬ್ಬಿಂಗ್ ಬ್ಯಾನ್ ಇಲ್ಲ.!
''ಕನ್ನಡಕ್ಕೆ ಡಬ್ಬಿಂಗ್ ಅವಶ್ಯಕ. ವಿದೇಶಿ ಸಿನಿಮಾಗಳನ್ನ ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗುತ್ತೆ. ಆದರೂ ಆ ಭಾಷೆಗಳ ಮೇಲೆ ದುಷ್ಪರಿಣಾಮ ಆಗಿಲ್ಲ. ಕರ್ನಾಟಕದಲ್ಲಿ ಡಬ್ಬಿಂಗ್ ಬ್ಯಾನ್ ಆಗಿಲ್ಲ. ನಮಗೆ ಬೇಕಾದ ಭಾಷೆಗಳಲ್ಲಿ ಚಿತ್ರ ವೀಕ್ಷಿಸುವುದು ನಮ್ಮ ಹಕ್ಕು'' ಎಂದು ಕನ್ನಡಿಗರು ಟ್ವೀಟ್ ಮಾಡುತ್ತಿದ್ದಾರೆ.
ಕನ್ನಡಕ್ಕೆ
'ಡಬ್ಬಿಂಗ್'
ಬೇಕು,
ಅವಕಾಶ
ಕೊಡಿ:
ರಾಜಮೌಳಿ
ಬೆಂಬಲ

'ಮೋಗ್ಲಿ' ಕೂಡ ಸೇರಲಿ
''ಈಗಾಗಲೇ 'ಫಾಸ್ಟ್ ಅಂಡ್ ಫ್ಯೂರಿಯಸ್', 'ಎನ್ನೈ ಅರಿಂದಾಲ್', 'ವಿವೇಗಮ್' ಸೇರಿದಂತೆ ಹಲವು ಸಿನಿಮಾಗಳು ಕನ್ನಡ ಭಾಷೆಗೆ ಡಬ್ ಆಗಿದೆ. ಈ ಲಿಸ್ಟ್ ಗೆ 'ಮೋಗ್ಲಿ' ಕೂಡ ಸೇರಲಿ'' ಅನ್ನೋದು ಹಲವರ ಬಯಕೆ.
ಕನ್ನಡ
ಸಂಸ್ಕೃತಿಯನ್ನು
ಡಬ್ಬಿಂಗ್
ಹಾಳು
ಮಾಡುತ್ತದೆ
ಎಂದ
ನಿರ್ದೇಶಕ
ಗಿರೀಶ್
ಕಾಸರವಳ್ಳಿ

ಕನ್ನಡಿಗರ ಕೋರಿಕೆ
''ಹಾಲಿವುಡ್ ಚಿತ್ರಗಳನ್ನ ಕನ್ನಡ ಭಾಷೆಯಲ್ಲಿ ನೋಡಲು ಐವತ್ತು ಮಿಲಿಯನ್ ಕನ್ನಡಿಗರು ಕಾಯುತ್ತಿದ್ದಾರೆ. ಡಬ್ಬಿಂಗ್ ಚಿತ್ರಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರ್ಕೆಟ್ ಇದೆ. ಹೀಗಾಗಿ, 'ಮೋಗ್ಲಿ' ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡಿ'' ಅಂತ 'ವಾರ್ನರ್ ಬ್ರೋಸ್ ಪಿಕ್ಚರ್ಸ್'ಗೆ ಕನ್ನಡಿಗರು ಕೇಳಿಕೊಳ್ಳುತ್ತಿದ್ದಾರೆ.
ಕನ್ನಡ
ಚಿತ್ರರಂಗದ
ವಿರುದ್ಧ
ಕೆರಳಿದ
ಕನ್ನಡ
ಗ್ರಾಹಕರ
ಕೂಟ:
ಟ್ವಿಟ್ಟರ್
ನಲ್ಲಿ
ಕನ್ನಡ
ದ್ರೋಹ
ಅಭಿಯಾನ

ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್
'ಮೋಗ್ಲಿ' ಬಾಯಲ್ಲಿ ಕನ್ನಡ ಬರಬೇಕು ಅಂತ ಪಣ ತೊಟ್ಟಿರುವ ಕನ್ನಡಿಗರು ಟ್ವಿಟ್ಟರ್ ನಲ್ಲಿ #MowgliInKannada ಟ್ರೆಂಡಿಂಗ್ ಮಾಡುತ್ತಿದ್ದಾರೆ.

ಕನ್ನಡಕ್ಕೆ ಯಾಕೆ ಇಲ್ಲ.?
''ಹಾಲಿವುಡ್ ಚಿತ್ರಗಳೆಲ್ಲಾ ಹಿಂದಿ, ತಮಿಳು, ತೆಲುಗಿಗೆ ಡಬ್ ಆಗುವಾಗ ಕನ್ನಡಕ್ಕೆ ಯಾಕೆ ಆಗಲ್ಲ.?'' ಎಂಬ ಪ್ರಶ್ನೆ ಉದ್ಭವವಾಗಿದೆ.

ಮಾತೃ ಭಾಷೆಯಲ್ಲಿ ನೋಡುವ ಹಕ್ಕು ಮಕ್ಕಳಿಗೆ ಇಲ್ವಾ.?
''ತಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ಮಾತೃ ಭಾಷೆಯಲ್ಲಿ ನೋಡುವ ಹಕ್ಕು ಕನ್ನಡದ ಮಕ್ಕಳಿಗೆ ಇಲ್ಲ. ಒತ್ತಾಯ ಪೂರ್ವಕವಾಗಿ ಬೇರೆ ಭಾಷೆಯಲ್ಲಿಯೇ ನೋಡಬೇಕು. ಈ ಡಬ್ಬಿಂಗ್ ಬ್ಯಾನ್ ಎಂಬ ಪಿಡುಗು ತೊಲಗಲಿ'' ಅಂತಿದ್ದಾರೆ ಟ್ವೀಟಿಗರು.

ಈಗಿನ ಮಕ್ಕಳಿಗೆ ಅವಕಾಶ ಸಿಗಲಿ.!
''ನಾನು ಚಿಕ್ಕವನಾಗಿದ್ದಾಗ, ಜಂಗಲ್ ಬುಕ್ ಅಥವಾ ಮೋಗ್ಲಿ ಕಥೆಯನ್ನ ಕನ್ನಡದಲ್ಲಿ ನೋಡಿರಲಿಲ್ಲ. ಈಗ ಆ ಅವಕಾಶ ನನ್ನ ಮಕ್ಕಳಿಗಾದರೂ ಸಿಗಲಿ'' ಅಂತಿದ್ದಾರೆ ನೆಟ್ಟಿಗರು.