»   » 'ಡಿ.ಕೆ' ಅಡ್ಡಾದಲ್ಲಿ ಜಯಾ, ಕರುಣಾನಿಧಿ ಟಪಾಂಗುಚಿ

'ಡಿ.ಕೆ' ಅಡ್ಡಾದಲ್ಲಿ ಜಯಾ, ಕರುಣಾನಿಧಿ ಟಪಾಂಗುಚಿ

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಗಿಮಿಕ್ ಮಾಡುವುದರಲ್ಲಿ ಜೋಗಿ ಪ್ರೇಮ್ ಎಕ್ಸ್ ಪರ್ಟ್. ಯಾನಾ ಗುಪ್ತಾ, ಮಲ್ಲಿಕಾ ಶೆರಾವತ್ ರಂತ ಬ್ಯೂಟಿಗಳನ್ನ ಕರೆತಂದು ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಪ್ರೇಮ್, ಇದೀಗ ತಾವೇ ಹೀರೋ ಆಗಿರುವ 'ಡಿ.ಕೆ.' ಚಿತ್ರದ ಮೂಲಕ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಸೊಂಟ ಬಳುಕಿಸಿದ್ದಾಯ್ತು, ರಕ್ಷಿತಾ-ಪ್ರೇಮ್ ಪುತ್ರ ಸೂರ್ಯ ಹಾಡೊಂಡಕ್ಕೆ ಹೆಜ್ಜೆ ಹಾಕಿದ್ದೂ ಆಯ್ತು. ಇವರಿಬ್ಬರೂ ಸಾಲದು ಅಂತ ಡಿ.ಕೆ ಅಡ್ಡಕ್ಕೆ ಕರುಣಾನಿಧಿ, ಜಯಲಲಿತಾರನ್ನ ಪ್ರೇಮ್ ಕರೆತಂದಿದ್ದಾರೆ! [ಡಿಕೆ 'ರಾ' ಲವ್ ಸ್ಟೋರಿಯ ಅಚ್ಚರಿ ಸೀಕ್ರೆಟ್ ಗಳು]

ಇಷ್ಟಕ್ಕೆ ಶಾಕ್ ಆಗ್ಬೇಡಿ, ಇವರಿಬ್ಬರ ಜೊತೆ ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಮೇಡಮ್ಮೂ ಸಾಥ್ ನೀಡಿದ್ದಾರೆ. ಹಾಗಂದ ಮಾತ್ರಕ್ಕೆ ಇವ್ರೆಲ್ಲಾ ಚಿತ್ರದಲ್ಲಿ ಆಕ್ಟ್ ಮಾಡ್ತಿದ್ದಾರೆ ಅಂತಲ್ಲ. ಡಿ.ಕೆ ಚಿತ್ರದ ಹಾಡೊಂಡದರಲ್ಲಿ ಕರುಣಾನಿಧಿ, ಜಯಲಲಿತಾ, ನರೇಂದ್ರ ಮೋದಿ, ಸೋನಿಯಾ ಗಾಂಧಿಯಂತ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರುಗಳನ್ನ ಬಳಸಿಕೊಳ್ಳಲಾಗಿದೆ.

ಬರೀ ರಾಜಕಾರಣಿಗಳ ಹೆಸರುಗಳು ಮಾತ್ರ ಹೀಗೆ ಬಂದು ಹಾಗೆ ಹೋಗೋದಿಲ್ಲ. ಎಷ್ಟೇ ಆಗ್ಲಿ ಈ ಡಿ.ಕೆ. ಪ್ರೇಮ್ ಸಿನಿಮಾ..! ಅಂದ್ಮೇಲೆ ಇಲ್ಲಿ ಮಸಾಲೆ, ಒಗ್ಗರಣೆ ಇರಲೇಬೇಕು. ಅದಕ್ಕೆ ನೋಡಿ ಸೋನಿಯಾ-ಮೋದಿಗೂ ಲಿಂಕ್ ಮಾಡಿ, ಜಯಲಲಿತಾಗೆ ಕರುಣಾನಿಧಿ ಕೈಲಿ ಕಣ್ ಹೊಡೆಸಿದ್ದಾರೆ.

''ಇಂಡಿಯಾ ಪಾಕಿಸ್ತಾನ ಒಂದಾಗೋಯ್ತಲ್ಲಪ್ಪೋ...ಸೋನಿಯಾ-ಮೋದಿ ಒಂದಾದ್ರಲ್ಲಪ್ಪೋ....ಕರುಣಾನಿಧಿ ಕಣ್ ಹೊಡೆದ್ರು...ಜಯಲಲಿತಕ್ಕ ಒಳಗ್ ಹೋದ್ರು'' ಅಂತ ಲಿರಿಕ್ಸ್ ಬರೆಸಿದ್ದಾರೆ. ಅಸಲಿಗೆ ಈ ಐಡಿಯಾನ ಪ್ರೇಮ್ ಗೆ ಕೊಟ್ಟು, ಖುದ್ದು ಲಿರಿಕ್ಸ್ ಬರೆದಿರೋದು ಡಿ.ಕೆ. ಚಿತ್ರದ ನಿರ್ದೇಶಕ ವಿಜಯ್ ಹಂಪಾಳಿ.

Karunanidhi and Jayalalithaa in Prem's D.K2

''ರಾಜಕಾರಣಿಗಳ ಹೆಸರುಗಳನ್ನ ಬರೀ ಪಬ್ಲಿಸಿಟಿ ಗಿಮಿಕ್ ಗೆ ಅಂತ ಬಳಸಿಲ್ಲ. ಅದು ಸಿಚ್ಯುಯೇಷನಲ್ ಸಾಂಗ್, ಹೀಗಾಗಿ ಹೆಸರುಗಳನ್ನ ಬಳಸಿಕೊಳ್ಳುವುದು ಅನಿವಾರ್ಯವಾಗಿತ್ತು'' ಅಂತಾರೆ ನಿರ್ದೇಶಕ ವಿಜಯ್ ಹಂಪಾಳಿ.

ಅಂತ ಅನಿವಾರ್ಯ ಏನಿತ್ತು ಅಂದ್ರೆ, ''ಹೀರೋ ಮತ್ತು ಹೀರೋಯಿನ್ ತದ್ವಿರುದ್ಧ ಕ್ಯಾರೆಕ್ಟರ್ ಗಳು. ಇಬ್ಬರನ್ನೂ ಒಂದು ಮಾಡೋದು ಕಷ್ಟ. ಹೀಗಾಗಿ ಇಂಡಿಯಾ-ಪಾಕಿಸ್ತಾನ್, ಮೋದಿ-ಸೋನಿಯಾ, ಜಯಲಲಿತಾ-ಕರುಣಾನಿಧಿ ಹೆಸರುಗಳನ್ನ ಪ್ರಸ್ತಾಪಿಸಿದ್ದೀವಿ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ವಿಜಯ್ ಹಂಪಾಳಿ ತಿಳಿಸಿದರು.

ಹಾಡಿನ ಸಾಹಿತ್ಯ ಎಷ್ಟು ಕ್ಯಾಚಿಯಾಗಿದ್ಯೋ, ಅಷ್ಟೇ ಕ್ಯಾಚಿ ಮ್ಯೂಸಿಕ್ ನೀಡಿದ್ದಾರಂತೆ ಅರ್ಜುನ್ ಜನ್ಯ. ಸದ್ಯಕ್ಕೆ ಸಾಂಗ್ ರೆಡಿಯಾಗಿದ್ದು ಇದೇ ವಾರ ಅದರ ಶೂಟಿಂಗ್ ಕೂಡ ನಡೆಯಲಿದೆ. ಇದಿಷ್ಟೇ ಅಲ್ಲ, ''ಆಪ್ ಕಿ ಬಾರ್ ಮೇರಾ ಸರ್ಕಾರ್'' ಟ್ಯಾಗ್ ಲೈನ್ ಇಟ್ಕೊಂಡಿರೋ ಡಿ.ಕೆ ಅಡ್ಡದಿಂದ ಬರೋ ಖಾಸ್ ಖಬರ್ ಇನ್ನೂ ಬೇಜಾನ್ ಇದೆ. ಕಾದುನೋಡುತ್ತಿರಿ. (ಫಿಲ್ಮಿಬೀಟ್ ಕನ್ನಡ)

English summary
Director Prem acted D.K movie is in news for various reasons. Sunny leone, Prem's son Surya has already made speial appearence in the film. Now its Karunanidhi and Jayalalitha's turn. It doesn't mean that Karunanidhi and Jayalalitha are acting in the movie. It's just that their names, including Narendra Modhi and Sonia Gandhi are used in one of the songs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada