Don't Miss!
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Yash Birthday CDP: ದ್ವೇಷಿಸುವವರ ಎದುರು ಅಭಿಮಾನದ ಬಲದಿಂದ ಬೆಳೆದು ನಿಂತ ನಾಯಕ
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಅಭಿಮಾನಿಗಳು ಕಾಮನ್ ಡಿಪಿ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಯಶ್ ಅಭಿಮಾನಿಗಳ ಟ್ವಿಟ್ಟರ್, ಫೇಸ್ಬುಲ್, ಇನ್‌ಸ್ಟಾ ಖಾತೆಗಳಲ್ಲಿ ಈ ಸ್ಪೆಷಲ್ ಸಿಡಿಪಿ ರಾರಾಜಿಸ್ತಿದೆ.
ಜನವರಿ 8ಕ್ಕೆ ಯಶ್ 37ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹಾಸನದಲ್ಲಿ ನವೀನ್‌ಕುಮಾರ್ ಗೌಡ ಆಗಿ ಹುಟ್ಟಿದ ಯಶ್, ಇಂದ ರಾಕಿಂಗ್ ಸ್ಟಾರ್ ಆಗಿ ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. KGF ರೀತಿಯ ಸೆನ್ಸೇಷನ್ ಸಿನಿಮಾದಿಂದ ದೇಶ ವಿದೇಶದಲ್ಲೂ ರಾಕಿ ಭಾಯ್ ಆಗಿ ಚಿರಪರಿಚಿತರಾಗಿದ್ದಾರೆ. ಯಶ್ ಕಾಲ್‌ಶೀಟ್‌ಗಾಗಿ ಪರಭಾಷಾ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಕೇವಲ 18 ಸಿನಿಮಾಗಳಲ್ಲಿ ನಟಿಸಿ, ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಒಂದೇ ಒಂದು ಸಿನಿಮಾದಿಂದ ಇಡೀ ಭಾರತೀಯ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
Yash19:
ಡೈರೆಕ್ಟರ್,
ಪ್ರೊಡ್ಯೂಸರ್
ಸಿಕ್ಕೇಬಿಟ್ರು?
400
ಕೋಟಿ
ಬಜೆಟ್
ಸಿನಿಮಾ
ಬರ್ತ್‌ಡೇಗೆ
ಘೋಷಣೆ!
ಕೊರೊನಾ ಹಾವಳಿ, ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಯಶ್ ಕಳೆದೆರಡು ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅಭಿಮಾನಿಗಳು ಹುಟ್ಟುಹಬ್ಬದ ದಿನ ನೆಚ್ಚಿನ ನಟನನ್ನು ನೋಡಿ ಕೈಕುಲುಕಿ ಶುಭಾಶಯ ಕೋರುವ ಅವಕಾಶ ಸಿಗುವ ಸಾಧ್ಯತೆ ಇದೆ. ಜೊತೆಗೆ ಯಶ್19 ಅಪ್‌ಡೇಟ್ ಸಿಕ್ಕರೂ ಸಿಗಬಹುದು.

ಯಶ್ ಬರ್ತ್‌ಡೇ ಸಿಡಿಪಿ ವೈರಲ್
ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಡಿಪಿ ಕ್ರಿಯೇಟ್ ಮಾಡಿ ವೈರಲ್ ಮಾಡುವುದು ಇತ್ತೀಚೆಗೆ ಕಾಮನ್. ಈ ವರ್ಷ ಕೂಡ ರಾಕಿಂಗ್ ಸ್ಟಾರ್ ಬರ್ತ್‌ಡೇಗೆ ಅಭಿಮಾನಿಗಳು ಬೊಂಬಾಟ್ ಆಗಿರುವ ಡಿಪಿ ಸಿದ್ಧಪಡಿಸಿದ್ದಾರೆ. KGF- 2 ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ರಾಕಿ ಭಾಯ್ ಹಡಗಿನ ಮೇಲೆ ನಿಂತಿರುವ ಫೋಟೊಗೆ ತಮ್ಮದೇ ಕಲ್ಪನೆಯಲ್ಲಿ ಹೊಸ ಅರ್ಥ ನೀಡಿ ಡಿಪಿ ಡಿಸೈನ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದು ಸಖತ್ ಸದ್ದು ಮಾಡ್ತಿದೆ. ಡಿಸೈನ್ ಸೂಪರ್ ಎನ್ನುವ ಮೆಚ್ಚುಗೆ ವ್ಯಕ್ತವಾಗ್ತಿದೆ.

ಡಿಪಿ ಮಾಡಿದ್ಯಾರು, ಅರ್ಥ ಏನು?
ಕನ್ನಡ ಸಿನಿಮಾಗಳ ಪೋಸ್ಟರ್ ಡಿಸೈನ್ ಮಾಡುವುದರಲ್ಲೊ ಕಾನಿ ಸ್ಟುಡಿಯೋ ಸಂಸ್ಥೆ ಹೆಸರು ಈಗ ದೊಡ್ಡದಾಗಿ ಹೇಳಿ ಬರ್ತಿದೆ. ಅದೇ ತಂಡದ ಇರ್ಫಾನ್ ಈ ಬಾರಿ ಯಶ್ ಬರ್ತ್‌ಡೇ ಕಾಮನ್ ಡಿಪಿ ಡಿಸೈನ್ ಮಾಡಿದ್ದಾರೆ. ದ್ವೇಷಿಸುವವರು ಯಶ್ ಅವರನ್ನು ನೆಗೆಟಿವಿಟಿಯಿಂದ ಕೆಳಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಅಭಿಮಾನಿಗಳು ಹರ್ಷೋದ್ಗಾರದ ಮೂಲಕ ತಮ್ಮ ನೆಚ್ಚಿನ ನಟನನ್ನು ಸ್ವಾಗತಿಸುತ್ತಿದ್ದಾರೆ. Rise Of Yash, Rise of kannada Film industry ಎಂದು ಬರೆದು ನೆಚ್ಚಿನ ನಟನಿಗೆ ಹುಟ್ಟುಹಬ್ಬ ಶುಭಾಶಯ ಕೋರಿದ್ದಾರೆ.

ಬರ್ತ್‌ಡೇಗೆ 'ರಾಮಾಚಾರಿ' ರೀ ಎಂಟ್ರಿ
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಸೂಪರ್ ಹಿಟ್ Mr & Mrs ರಾಮಾಚಾರಿ ಸಿನಿಮಾ ರೀ ರಿಲೀಸ್ ಆಗಲಿದೆ. 8 ವರ್ಷಗಳ ಹಿಂದೆ ಈ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆವರೆಗಿನ ಎಲ್ಲಾ ಕನ್ನಡ ಸಿನಿಮಾ ಕಲೆಕ್ಷನ್ ಹಿಂದಿಕ್ಕಿ ಹೊಸ ದಾಖಲೆ ಬರೆದಿತ್ತು. ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದರು. ಅದಾಗಲೇ ಪ್ರೀತಿಯಲ್ಲಿ ಬಿದ್ದಿದ್ದ ಯಶ್- ರಾಧಿಕಾ ಜೋಡಿ ಮುಂದೆ ಹೊಸ ಬಾಳಿಗೆ ಕಾಲಿಟ್ಟರು. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ಸಂಸ್ಥೆ ಭಾನುವಾರ ಮತ್ತೆ ಪ್ರೇಕ್ಷಕರು ಮುಂದೆ ತರ್ತಿದೆ.

ಭಾನುವಾರ ಯಶ್19 ಅನೌನ್ಸ್
KGF- 2 ನಂತರ ಯಶ್ ಯಾವ ಸಿನಿಮಾದಲ್ಲಿ ನಟಿಸ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹುಟ್ಟುಹಬ್ಬದ ಸಂಭ್ರಮದಲ್ಲೇ ಯಶ್ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಯಶ್ ಮುಂದಿನ ಸಿನಿಮಾ ಸೆಟ್ಟೇರುತ್ತೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಚಿತ್ರಕ್ಕೆ ತಮಿಳು ನಿರ್ದೇಶಕರು ಆಕ್ಷನ್ ಕಟ್ ಹೇಳ್ತಾರಂತೆ. 400 ಕೋಟಿ ಬಜೆಟ್ ಸಿನಿಮಾ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ.