For Quick Alerts
  ALLOW NOTIFICATIONS  
  For Daily Alerts

  ಆಂಗ್ರಿ ಯಂಗ್ ಮ್ಯಾನ್ ಸುದೀಪ್ 'ಬಚ್ಚನ್' ಲಾಂಚ್

  |

  ಕಿಚ್ಚ ಸುದೀಪ್ ಡೈಲಾಗ್ ಹೊಡೆದ್ರು. ಅದು ಅತಿಂಥ ಡೈಲಾಗ್ ಅಲ್ಲ. ಅವರ ಕಂಚಿನ ಕಂಠದಲ್ಲಿ ಬಂದ ಡೈಲಾಗಿಗೆ ಅಲ್ಲಿದ್ದವರೆಲ್ಲಾ ಗಾಬರಿಯಾದರೋ ಖುಷಿಯಾದರೋ.., ಒಟ್ಟಿನಲ್ಲಿ ಚಪ್ಪಾಳೆ ಸುರಿಮಳೆಯಾಯ್ತು. ಅದ್ಯಾಕೆ, ಎಲ್ಲಿ, ಯಾರಿಗೆ, ಯಾವಾಗ ಸುದೀಪ್ ಡೈಲಾಗ ಹೊಡೆದ್ರು ಎನ್ನುವುದಕ್ಕೆ ಉತ್ತರ ಬಚ್ಚನ್.

  ಬಚ್ಚನ್ ಅಂದ್ರೆ ಅಮಿತಾಬ್ ಬಚ್ಚನ್ ಅಲ್ಲ, ಇದು ಸುದೀಪ್ ಅವರ ಹೊಸ ಚಿತ್ರವೆಂದು ಗೊತ್ತು ತಾನೇ? ಇತ್ತೀಚಿಗೆ, ಮೇ 31 ರಂದು ನಡೆದ ಮುಹೂರ್ತದ ಸಮಾರಂಭದಲ್ಲಿ ಕ್ಯಾಮರಾ ಮುಂದೆ ಸುದೀಪ್ ಚಿತ್ರದ ಶಾಟ್ ಗಾಗಿ ಹೀಗೆ ಸಂಭಾಷಣೆ ಒಪ್ಪಿಸಿದ್ರು. ಸುದೀಪ್ ಸಂಭಾಷಣೆಯ ಕೆಲವು ಝಲಕ್ ಇಲ್ಲಿವೆ ಓದಿ...

  "ಒಳ್ಳೇತನಾನ ವೀಕ್ನೆಸ್ ಅಂದ್ಕೊಳ್ಳೋದು ಮುಠ್ಠಾಳತನ... ಒಳ್ಳೆಯವನಿಗೆ ಕೋಪ ಬರಿಸೋದು ಅದಕ್ಕಿಂತ ದೊಡ್ಡ ಮುಠ್ಠಾಳತನ..."

  "ಖುಷಿಯಾಗಿದ್ದಾಗ ದೇವ್ರು ಮೈಮರೆತು ಎಂಥೆಂಥವರನ್ನೋ ಸೃಷ್ಟಿ ಮಾಡ್ಬಿಡ್ತಾನೆ...!
  ಕೋಪ ಬಂದಾಗ ಮಾತ್ರ ನನ್ನಂಥವರನ್ನ ಸೃಷ್ಟಿ ಮಾಡ್ತಾನೆ...!"

  'ಬಚ್ಚನ್' ಚಿತ್ರದ ಟೀಸರನ್ನು ಬಿಡುಗಡೆ ಮಾಡಿದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಟೀಸರ್ ಸಿದ್ಧಪಡಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ರವಿಮಾಮ, ಕನ್ನಡ ಚಿತ್ರರಂಗಕ್ಕೆ ಸುದೀಪ್ ಏನಾದರೂ ವಿಭಿನ್ನತೆ ಮೆರೆಯುತ್ತಾರೆ ಹಾಗೂ ಒಳ್ಳೆಯದನ್ನು ಮಾಡುತ್ತಾರೆ ಎಂಬ ಭರವಸೆಯಿಂದಲೇ ಇಲ್ಲಿಗೆ ಬಂದೆ.. ಅದೀಗ ನಿಜವಾಗಿದೆ" ಎಂದರು.

  ಬಚ್ಚನ್ ಚಿತ್ರವನ್ನು ನಿರ್ದೇಶಿಸಲಿರುವ ಶಶಾಂಕ್‌ ಅವರನ್ನೂ ಹಾಡಿ ಹೊಗಳಿದ ರವಿಚಂದ್ರನ್, "ಟೀಸರ್ ಇಷ್ಟು ಚೆನ್ನಾಗಿದೆ ಎಂದ ಮೇಲೆ ಚಿತ್ರದ ಕಥೆ ಹಾಗೂ ಮೇಕಿಂಗ್ ಬಗ್ಗೆ ಸಹಜವಾಗಿ ತಮಗೆ ನಿರೀಕ್ಷೆ ಹೆಚ್ಚಾಗಿದೆ" ಎಂದರು. ಬಂದವರೆಲ್ಲರೊಂದಿಗೆ ನಗುನಗುತ್ತಾ ಮಾತನಾಡಿದ ರವಿಚಂದ್ರನ್ ಅಂದಿನ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

  ಬಚ್ಚನ್ ಚಿತ್ರದ ಮೂರು ನಾಯಕಿಯರಾದ ಭಾವನಾ, ದೀಪಾ ಸನ್ನಿಧಿ ಮತ್ತು ಪಾರುಲ್ ಯಾದವ್ ಮುಹೂರ್ತಕ್ಕೆ ಹಾಜರಾಗಿದ್ದರು. "ಅಮಿತಾಬ್ ಬಚ್ಚನ್ ಅವರಿಂದ ಸ್ಫೂರ್ತಿ ಪಡೆದು ಈ ಚಿತ್ರದ ಕಥೆ ಬರೆಯಲಾಗಿದೆ, ಅದೇ ಕಾರಣದಿಂದ 'ಆಂಗ್ರಿ ಯಂಗ್ ಮ್ಯಾನ್' ಎಂಬ ಅಡಿಬರಹವನ್ನು ಬಚ್ಚನ್ ಚಿತ್ರಕ್ಕೆ ಕೊಡಲಾಗಿದೆ" ಎಂದರು ಶಶಾಂಕ.

  ಬಚ್ಚನ್ ಚಿತ್ರದ ಮುಹೂರ್ತಕ್ಕೆ ಬಂದವರೆದುರು ಶಶಾಂಕ್, ತಮ್ಮ 'ಜರಾಸಂಧ' ಚಿತ್ರದ ಸೋಲನ್ನು ಮತ್ತೊಮ್ಮೆ ಒಪ್ಪಿಕೊಂಡರು. ಅದು ಹೇಗೆಂದರೆ, ಅಂದಿನ ಅವರ ಮಾತು "ಈ ಬಾರಿ ನಾನು ಎಡವಿ ಬೀಳುವುದಿಲ್ಲ" ಎಂಬುದು ಅದನ್ನೂ ಧ್ವನಿಸುತ್ತಿದೆ. "ನಾವೂ ನಿಮ್ಮಿಂದ ಅದನ್ನೇ ಬಯಸುತ್ತಿದ್ದೇವೆ" ಎಂಬ ಪ್ರೇಕ್ಷಕರ ಮಾತು ಶಶಾಂಕ್ ಕಿವಿಗೆ ಬಿದ್ದರೆ ಸಾಕು.

  "ಒಳ್ಳೆ ಕಥೆ, ಒಳ್ಳೆ ನಿರ್ದೇಶಕ, ಒಳ್ಳೆ ಹೀರೋ ಎಲ್ಲರೂ ಈ ನನ್ನ ಕಮರ್ಷಿಯಲ್ ಚಿತ್ರದಲ್ಲಿ ಒಂದಾಗಲಿದ್ದಾರೆ. ಚಿತ್ರವು ಖಂಡಿತ ಗೆಲ್ಲಲಿದೆ" ಎಂದವರು ಬಚ್ಚನ್ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ. ಅವರ ಚಿತ್ರ ಗೆಲ್ಲುವಂತಿರಲಿ, ಕನ್ನಡ ಪ್ರೇಕ್ಷಕರಿಗೆ ಮತ್ತೊಂದು ಒಳ್ಳೆಯ ಚಿತ್ರ ಸಿಗಲಿ, ಏನಂತೀರಾ? (ಒನ್ ಇಂಡಿಯಾ ಕನ್ನಡ)

  English summary
  Kichcha Sudeep movie Bachchan Launched on 31st May 2012. This movie Shashank Direction Sudeep Dialogues

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X