For Quick Alerts
  ALLOW NOTIFICATIONS  
  For Daily Alerts

  ಪುಂಗಿದಾಸನಾಗಿ ಹಾಸ್ಯನಟ ಕೋಮಲ್ ಹೊಸ ಅಂಗಿ

  By Rajendra
  |
  ಹಾಸ್ಯನಟ ಕೋಮಲ್ ಕುಮಾರ್ ಈಗ ಸಖತ್ ಬಿಜಿಯಾಗಿದ್ದಾರೆ. ಒಟ್ಟೊಟ್ಟಿಗೆ ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದಾರೆ. ಹೆಸರು 'ಪುಂಗಿದಾಸ'.

  ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ರ್‍ಯಾಂಬೋ' ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಾಥ್. ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನೂ ನಿರ್ದೇಶಕರೇ ಹೊತ್ತಿದ್ದಾರೆ. ಚಿತ್ರದ ಹೆಸರು ನೋಡಿದರೆ ಇದೊಂದು ಪಕ್ಕಾ ಡೈಲಾಗ್ ಓರಿಯಂಟೆಡ್ ಸಿನಿಮಾ ಅನ್ನಿಸದೇ ಇರದು.

  ರಾಮ್ ಗೋಪಾಲ್ ವರ್ಮಾ ಅವರ 'ಸತ್ಯ 2' ಚಿತ್ರದಲ್ಲಿ ಅಭಿನಯಿಸಿರುವ ಅನೈಕಾ ಸೋಟಿ ಅವರನ್ನು ಕರೆತರುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೆ ವಿತರಕಾಗಿ ಗುರುತಿಸಿಕೊಂಡಿರುವ ಸದಾಶಿವ ಚಿತ್ರದ ನಿರ್ಮಾಪಕರು.

  'ಕಳ್ ಮಂಜ' ಚಿತ್ರಕ್ಕೆ ಸಂಗೀತ ನೀಡಿದ್ದ ಎಮಿಲ್ ಈ ಚಿತ್ರದ ಮೂಲಕ ಮತ್ತೆ ಸಂಗೀತ ಸಿಂಚನ ನೀಡಲಿದ್ದಾರೆ. ಈಗ ಅವರು ತಮ್ಮ ಹೆಸರನ್ನು ಫ‌ರ್ಹಾನ್‌ ರೋಶನ್‌ ಎಂದು ಬದಲಾಯಿಸಿಕೊಂಡಿದ್ದಾರಂತೆ. ಏತನ್ಮಧ್ಯೆ ಕೋಮಲ್ ಅವರು ಇನ್ನೆರಡು ಚಿತ್ರಗಳಲ್ಲೂ ಬಿಜಿಯಾಗಿದ್ದಾರೆ ಒಂದು 'ಗೋವಾ' ಹಾಗೂ ಇನ್ನೊಂದು 'ಪ್ಯಾರ್ ಗೆ ಆಗ್ಬಿಟ್ಟೈತೆ'.

  ಈಗ 'ಪುಂಗಿದಾಸ'ನಾಗಿ ಹೊಸ ಅಂಗಿ ತೊಟ್ಟಿದ್ದಾರೆ. ಜೂನ್ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ. ಏತನ್ಮಧ್ಯೆ ಕೋಮಲ್ ಅಭಿನಯ್ದ 'ಗೋವಿಂದಾಯ ನಮಃ' ಚಿತ್ರ ಪರಭಾಷೆಗಳಿಗೆ ರಿಮೇಕ್ ಆಗುತ್ತಿರುವುದು ಗೊತ್ತೇ ಇದೆ. (ಏಜೆನ್ಸೀಸ್)

  English summary
  Comedy actor Komal Kumar signed onemore film titled as 'Pungidasa'. At present he has busy in two films called Goa and pyarge aagbittaite. Now Pungidasa starts rolling from June, 2013. Rambo fame director Srinath says action cut to the film. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X