»   » 'ರಾಧನ್ ಗಂಡ' ಬಿಡುಗಡೆಗೆ ಮುಹೂರ್ತ ಫಿಕ್ಸ್

'ರಾಧನ್ ಗಂಡ' ಬಿಡುಗಡೆಗೆ ಮುಹೂರ್ತ ಫಿಕ್ಸ್

Posted By:
Subscribe to Filmibeat Kannada

ಕೋಮಲ್ ಅಭಿನಯದ ರಾಧನ್ ಗಂಡ ಚಿತ್ರಕ್ಕೆ ಕಡೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಈ ಚಿತ್ರ ಇದೇ ಜೂ.14ರಂದು ತೆರೆಗೆ ಅಪ್ಪಳಿಸುತ್ತಿದೆ. ಈ ಹಿಂದೆ ಚಿತ್ರಕ್ಕೆ ರಾಧಿಕನ್ ಗಂಡ ಎಂದು ಹೆಸರಿಡಲಾಗಿತ್ತು. ರಾಧಿಕಾ ಕುಮಾರಸ್ವಾಮಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ ಶೀರ್ಷಿಕೆ ಬದಲಾಯಿತು.

ಕಿಂಗ್ ರವಿಕುಮಾರ್ ನಿರ್ಮಿಸಿರುವ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ್ದಾರೆ ಮುರುಗನ್. ಈ ಬಾರಿ ಕೋಮಲ್ ಗೆ ಸಾಥ್ ನೀಡುತ್ತಿರುವ ನಾಯಕಿ ಪೂರ್ಣಾ. ಸೆಲ್ವಾ ಅವರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಅವರ ಸಂಗೀತ ಚಿತ್ರಕ್ಕಿದೆ.


ಆಲಸಿ ಗಂಡ ಐನಾತಿ ಹೆಂಡತಿಯೊಬ್ಬಳ ಕಥೆ ಇದು. ಅಚಾನಕ್ ಆಗಿ ಈ ಐನಾತಿ ಹೆಣ್ಣು ಆಲಸಿ ಗಂಡಿಗೆ ಹೆಂಡತಿಯಾಗುತ್ತಾಳೆ. ಅಲ್ಲಿಂದ ಅವನ ಹಣೆಬರಹ ಬದಲಾಗುತ್ತದೆ. ಮುಂದೆ ಆಕೆ ಹೀರೋಯಿನ್ ಆಗುತ್ತಾಳೆ. ಅದಕ್ಕೂ ಮುಂದೇನಾಗುತ್ತದೆ ಎಂಬ ಕುತೂಹಲವೇ ಚಿತ್ರದ ಕಥಾಹಂದರ.

ರವಿಕುಮಾರ್ ನಿರ್ಮಾಣದಲ್ಲಿ ಬರುತ್ತಿರುವ 19ನೇ ಕಾಣಿಕೆ ಇದು. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಕೋಮಲ್. ಚಿತ್ರದ ಪಾತ್ರವರ್ಗದಲ್ಲಿ ಆರ್ಯ, ಪೂರ್ಣಕುಮಾರ್, ಸುದರ್ಶನ್, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Kannada comedy - action film Radhan Ganda slated for release on 14th June. The film written and directed by Murugan. Komal Kumar and Poorna are in the lead roles. Manikanth Kadri has composed the soundtrack and film score.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada