»   » ಬಾಲ್ಯ ಸ್ನೇಹಿತನ ಜೊತೆ ಲಕ್ಷ್ಮಿ ಬಾರಮ್ಮ' ಗೊಂಬೆ'ಯ ನಿಶ್ಚಿತಾರ್ಥ

ಬಾಲ್ಯ ಸ್ನೇಹಿತನ ಜೊತೆ ಲಕ್ಷ್ಮಿ ಬಾರಮ್ಮ' ಗೊಂಬೆ'ಯ ನಿಶ್ಚಿತಾರ್ಥ

Posted By:
Subscribe to Filmibeat Kannada
Lakshmi Baramma Gombe Aka Neha Gowda Got Engaged With Chandan | Filmibeat Kannada

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡುವ ಪ್ರೇಕ್ಷಕರಿಗೆ 'ಗೊಂಬೆ' ಪಾತ್ರಧಾರಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈಗ ಈ ಗೊಂಬೆಗೆ ನಿಶ್ಚಿತಾರ್ಥ ಆಗಿದೆ. 'ಗೊಂಬೆ'ಗೆ ನಿಶ್ಚಿತಾರ್ಥ ಅಂದಾಕ್ಷಣ ಇದು ಧಾರವಾಹಿಯಲ್ಲಿ ಎಂದುಕೊಳ್ಳಬೇಡಿ. ಇದು ನಿಜಜೀವನದಲ್ಲಿ.

ಹೌದು, ತಮ್ಮ ಬಾಲ್ಯ ಸ್ನೇಹಿತನ ಜೊತೆ ನೂತನ ಜೀವನಕ್ಕೆ ಕಾಲಿಡುತ್ತಿರುವ ನಟಿ ನೇಹಾ ಗೌಡ ಇತ್ತೀಚೆಗಷ್ಟೇ ಸರಳವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

ಹಾಗಿದ್ರೆ, 'ಗೊಂಬೆ' ಮದುವೆ ಆಗಲಿರುವ ಆ ಹುಡುಗ ಯಾರು? ಯಾವಾಗ ಮದುವೆ ಎಂದು ತಿಳಿಯಲು ಮುಂದೆ ಓದಿ....

ಸೆಪ್ಟೆಂಬರ್ 30 ನಿಶ್ಚಿತಾರ್ಥ

ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ನೇಹಾ ಗೌಡ ಮತ್ತು ಚಂದನ್ ಅವರ ನಿಶ್ಚಿತಾರ್ಥ ನೆರವೇರಿತು. ಸರಳವಾಗಿ ಮನೆಯಲ್ಲಿಯೇ ನಡೆದ ಈ ಸಮಾರಂಭಕ್ಕೆ ಎರಡು ಕುಟುಂಬದ ಸದಸ್ಯರು ಮತ್ತು ಕಿರುತೆರೆಯ ಕೆಲವು ಕಲಾವಿದರು ಪಾಲ್ಗೊಂಡಿದ್ದರು.

ಯಾರು ಈ ಚಂದನ್

ನಟಿ ನೇಹಾ ಗೌಡ ಮಮದುವೆ ಆಗಲಿರುವ ಚಂದನ್, ನೇಹಾ ಅವರ ಬಾಲ್ಯ ಸ್ನೇಹಿತ. ಒಂದೇ ಶಾಲೆಯಲ್ಲಿ ಓದಿದವರು. ಸುಮಾರು 16 ವರ್ಷಗಳ ಪ್ರೀತಿ ಇದು.

ವಿದೇಶದಲ್ಲಿ ಕೆಲಸ

ನೇಹಾ ಅವರ ಭಾವಿ ಪತಿ ಚಂದನ್ ಈಗ ಹಾಂಕಾಂಗ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಲವ್ ಕಮ್ ಅರೆಂಜ್

ಚಿಕ್ಕಂದಿನಿಂದ ಜೊತೆಯಲ್ಲಿ ಓದುತ್ತಿದ್ದ ಇಬ್ಬರು, ಸ್ನೇಹಿತರಾಗಿ, ನಂತರ ಅದು ಪ್ರೀತಿಯಾಗಿ, ಈಗ ಮನೆಯವರನ್ನ ಒಪ್ಪಿಸಿ ಸಪ್ತಪದಿ ತುಳಿಯಲು ಸಿದ್ದರಾಗಿದ್ದಾರೆ.

ಮದುವೆ ಯಾವಾಗ?

ಸದ್ಯಕ್ಕೆ ಎಂಗೇಜ್ ಮೆಂಟ್ ಆಗಿರುವ ನೇಹಾ ಮತ್ತು ಚಂದನ್, ಮದುವೆ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

English summary
Kannada Serial Actress Neha Gowda got engaged with her Childhood Friend Chandan on September 30 at Banglore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada