»   » ಸ್ಕ್ರಿಪ್ಟ್ ರೈಟಿಂಗ್ ಸೀಕ್ರೆಟ್ ಹೇಳಿಕೊಡಲಿದ್ದಾರೆ ಗುರುಪ್ರಸಾದ್

ಸ್ಕ್ರಿಪ್ಟ್ ರೈಟಿಂಗ್ ಸೀಕ್ರೆಟ್ ಹೇಳಿಕೊಡಲಿದ್ದಾರೆ ಗುರುಪ್ರಸಾದ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸಿನೆಮಾ ಲೋಕದ ಆಕರ್ಷಣೆಯೇ ಅಂತಹುದು. ಮೇರು ನಟರು ನಟಿಸುವುದನ್ನು ನೋಡಿದಾಗ ನಮಗೂ ಅಭಿನಯಿಸಬೇಕೆಂಬ ಹುಕಿ ಹತ್ತುತ್ತದೆ. ಅಭಿನಯಿಸಲೆಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಅದು ಸಾಧ್ಯವಾಗದೆ ಇನ್ನೇನೋ ಆಗಿಬಿಡುತ್ತಾರೆ. ಇಂತಹ ಅದೆಷ್ಟೋ ದೃಷ್ಟಾಂತಗಳು ನಮ್ಮ ಕಣ್ಣ ಮುಂದಿವೆ. ಕನಸುಗಳಿಗೆ ಇಲ್ಲಿ ಕೊನೆಯೇ ಇಲ್ಲ.

  ಆದರೆ, ಬರವಣಿಗೆಯಲ್ಲಿನ ತಾಕತ್ತಿದೆಯಲ್ಲ, ಅದು ಎಲ್ಲರಿಗೂ ದಕ್ಕುವಂಥದ್ದಲ್ಲ. ಕನ್ನಡದ ಮೇಲೆ ಪ್ರೀತಿ, ಜೀವನದ ಮೇಲೆ ಅಪಾರ ಆಸಕ್ತಿ, ಸೃಜನಶೀಲ ಕ್ರಿಯಾಶೀಲ ಮನಸ್ಸು ಇದ್ದವರು ಮಾತ್ರ ಉತ್ತಮ ಬರಹಗಾರರು ಆಗಲು ಸಾಧ್ಯ. ಬರೆಯಬೇಕೆಂದವರೆಲ್ಲ ಯಶಸ್ವಿಯಾಗುವುದಿಲ್ಲ, ಆದರೆ, ಪ್ರಭಾವಶಾಲಿಯಾಗಿ ಬರೆಯುವವರು ಸೋಲುವುದು ಮಾತ್ರ ತೀರ ಅಪರೂಪ.


  ಈಗ ಕುಳಿತು ವಿಚಾರ ಮಾಡಿ. ನಟರಾಗಬೇಕೆಂದಿದ್ದೀರಾ, ನಿರ್ದೇಶಕರಾಗಬೇಕೆಂದಿದ್ದೀರಾ, ಕ್ಯಾಮೆರಾಮನ್ ಆಗಬೇಕೆಂದಿದ್ದೀರಾ, ಸ್ಕ್ರಿಪ್ಟ್ ರೈಟರ್ ಆಗಬೇಕೆಂದಿದ್ದೀರಾ? ಸ್ಕ್ರಿಪ್ಟ್ ರೈಟರ್ ಆಗಿ, ಉತ್ತಮ ಚಿತ್ರಕಥೆ, ಸಂಭಾಷಣೆ ಬರೆದು, ನಂತರ ನಿರ್ದೇಶಕನಾಗುವ ಕನಸು ಕಂಡಿದ್ದರೆ ಅದು ನನಸಾಗುವ ಸಮಯ ನಿಮಗೆ ವಿಭಿನ್ನ ಚಿಂತನೆಯುಳ್ಳ ಸ್ಪೆಷಲ್ ಡೈರೆಕ್ಟರೊಬ್ಬರು ಒದಗಿಸಿಕೊಟ್ಟಿದ್ದಾರೆ. [ಡಿಕೋಡಿಂಗ್ ಡೈರೆಕ್ಟರ್ ಗುರು, ಔಟ್ ಆಗಿದ್ದೇಕೆ?]

  Learn art of script writing and direction from director Guruprasad

  ಅವರೇ, 'ಡೈರೆಕ್ಟರ್ಸ್ ಸ್ಪೆಷಲ್' ಖ್ಯಾತಿಯ ನಿರ್ದೇಶಕ ಗುರುಪ್ರಸಾದ್. 'ಮಠ', 'ಎದ್ದೇಳು ಮಂಜುನಾಥ' ಮುಂತಾದ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿ, ಬಿಗ್ ಬಾಸ್ ನಂಥ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಲೈಫ್ ಸೂಪರ್ ಗುರೂ ರಿಯಾಲಿಟಿ ಶೋ ಹೋಸ್ಟ್ ಮಾಡಿ ಕನ್ನಡ ಚಿತ್ರರಸಿಕರಲ್ಲಿ ವಿಶೇಷ ಸ್ಥಾನ ಪಡೆದಿರುವ ಗುರುಪ್ರಸಾದ್ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. Guruprasad's Institute of Script Writing and Film Direction ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

  ಈ ಸಂಸ್ಥೆಯಲ್ಲಿ ಚಲನಚಿತ್ರ, ಧಾರಾವಾಹಿಗಳಿಗೆ ಪರಿಣಾಮಕಾರಿಯಾಗಿ ಸ್ಕ್ರಿಪ್ಟ್ ಬರೆಯುವ ಸೀಕ್ರೆಟ್ ಅನ್ನು ಗುರುಪ್ರಸಾದ್ ಅವರು ಹಂಚಿಕೊಳ್ಳಲಿದ್ದಾರೆ. ಸಿನೆಮಾ ನಿರ್ದೇಶಕನಾಗುವ ಕನಸಿಗೆ ನೀರೆರೆದು ಪೋಷಿಸಲಿದ್ದಾರೆ. ಕೋಚಿಂಗ್ ಸಂಪೂರ್ಣವಾಗಿ ಕನ್ನಡದಲ್ಲಿರಲಿದ್ದು, ಕೆಲವೇ ಪ್ರತಿಭಾವಂತರಿಗೆ ಗುರು ಗರಡಿಯಲ್ಲಿ ಕಲಿಯಲು ಅವಕಾಶ ಸಿಗಲಿದೆ. ಅಭ್ಯರ್ಥಿಗಳಲ್ಲಿನ ಕಲಿಕೆಯ ಆಸಕ್ತಿ, ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಿದ್ದಾರೆ.


  ಚಲನಚಿತ್ರ ನಿರ್ದೇಶನಕ್ಕಿಂತ ರಿಯಾಲಿಟಿ ಶೋಗಳಲ್ಲೇ ಹೆಚ್ಚು ತೊಡಗಿಸಿಕೊಂಡಿರುವ ಗುರು ಅವರ ಈ ಸಂಸ್ಥೆ ಸದ್ಯದಲ್ಲೇ ಆರಂಭವಾಗಲಿದ್ದು, ಆಸಕ್ತರು directorguruprasad@gmail.com ಈಮೇಲೆ ವಿಳಾಸಕ್ಕೆ ತಮ್ಮ ವಿವರಗಳನ್ನು ಕಳಿಸಬಹುದು. ಯಾರಿಗೆ ಗೊತ್ತು, ಸಿನೆಮಾ ಟೈಟಲ್ ಕಾರ್ಡಲ್ಲಿ ಘಟಾನುಘಟಿಗಳ ಜೊತೆ ನಿಮ್ಮ ಹೆಸರೂ ಪ್ರಿಂಟ್ ಆಗಬಹುದು! [ಬಿಗ್ ಬಾಸ್ ಮುಂದೆ ಗಳಗಳ ಕಣ್ಣೀರಿಟ್ಟ ಗುರುಪ್ರಸಾದ್]

  English summary
  Are you interested to learn the art of script writing and direction? Here is fantastic opportunity to learn the secret of writing cinema scripts. Matha fame director Guruprasad will be starting Guruprasad's Institute of Script Writing and Film Direction.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more