For Quick Alerts
  ALLOW NOTIFICATIONS  
  For Daily Alerts

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ವಾರ್ಥಿಯಂತೆ.! ಹೌದಾ.?

  By Harshitha
  |

  ವರನಟ ಡಾ.ರಾಜ್ ಕುಮಾರ್ ಸುಪುತ್ರ ಶಿವರಾಜ್ ಕುಮಾರ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟು ಮೂರು ದಶಕಗಳು ಉರುಳಿವೆ. 'ಹ್ಯಾಟ್ರಿಕ್ ಹೀರೋ' ಆಗಿ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಶಿವಣ್ಣ, ಈಗಲೂ ಗಾಂಧಿನಗರದ ಗೆಲ್ಲುವ ಕುದುರೆ.

  ಇಲ್ಲಿಯವರೆಗೂ 110 ಚಿತ್ರಗಳಲ್ಲಿ ಮಿಂಚಿರುವ ಶಿವರಾಜ್ ಕುಮಾರ್ ಏನಿಲ್ಲಾ ಅಂದ್ರೂ ಇನ್ನೂ ಮೂರು ವರ್ಷ ಬಿಜಿ. ವಯಸ್ಸು 50 ದಾಟಿದ್ರೂ, ಶಿವಣ್ಣ ಇನ್ನೂ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವುದಕ್ಕೆ ಅನೇಕರು 'ಸ್ವಾರ್ಥಿ' ಅಂತ ಅಂದುಕೊಂಡಿದ್ದಾರಂತೆ.! [ಚಿತ್ರಗಳು : ಬಸವಣ್ಣಗೆ ನಮಿಸಿದ ಶಿವಣ್ಣಗೆ ಲಂಡನ್ನಿನಲ್ಲಿ ಸನ್ಮಾನ]

  ಹೀಗಂತ ಹೇಳಿದವರು ಖುದ್ದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಲಂಡನ್ ನಲ್ಲಿ 'ವಿಷನೇರ್' ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಷ್ಟಿತ ಬಿಬಿಸಿ ರೇಡಿಯೋಗೆ ಮೊಟ್ಟ ಮೊದಲ ಬಾರಿಗೆ ಸಂದರ್ಶನ ನೀಡಿದ ಶಿವರಾಜ್ ಕುಮಾರ್ ತಮ್ಮ ಸಿನಿ ಜರ್ನಿ ಕುರಿತು ಕೆಲ ಆಸಕ್ತಿಕರ ವಿಷಯಗಳನ್ನ ಹೊರಹಾಕಿದರು. ಮುಂದೆ ಓದಿ.....

  ಲಂಡನ್ ನಲ್ಲಿ ಶಿವಣ್ಣನಿಗೆ ಸನ್ಮಾನ

  ಲಂಡನ್ ನಲ್ಲಿ ಶಿವಣ್ಣನಿಗೆ ಸನ್ಮಾನ

  ಮಾರ್ಚ್ 19 ರಂದು ಲಂಡನ್ ನ ಲ್ಯಾಂಬೆತ್ ನಲ್ಲಿ, ಬಸವಣ್ಣ ಪುತ್ಥಳಿಯ ಮುಂಭಾಗದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ 'ವಿಷನೇರ್' ಪ್ರಶಸ್ತಿ ಸ್ವೀಕರಿಸಿದರು.

  ಮೋದಿ ಬಳಿಕ ಶಿವಣ್ಣ

  ಮೋದಿ ಬಳಿಕ ಶಿವಣ್ಣ

  ಲಂಡನ್ ನಲ್ಲಿ ಬಸವಣ್ಣನ ಪುತ್ಥಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ ಬಳಿಕ ಅದೇ ಜಾಗದಲ್ಲಿ ಕನ್ನಡ ನಟ ಶಿವರಾಜ್ ಕುಮಾರ್ ಸನ್ಮಾನ ಸ್ವೀಕರಿಸಿರುವುದು ಕನ್ನಡಿಗರ ಹೆಮ್ಮೆ.

  ಸನ್ಮಾನದ ಬಳಿಕ ಸಂದರ್ಶನ

  ಸನ್ಮಾನದ ಬಳಿಕ ಸಂದರ್ಶನ

  ಬಸವೇಶ್ವರ ಫೌಂಡೇಶನ್ ನ ಅಧ್ಯಕ್ಷ ಡಾ.ನೀರಜ್ ಪಾಟೀಲ್ ರವರಿಂದ ಸನ್ಮಾನ ಸ್ವೀಕರಿಸಿದ ನಂತರ ಶಿವರಾಜ್ ಕುಮಾರ್ ಲಂಡನ್ ನ ಬಿಬಿಸಿ ರೇಡಿಯೋಗೆ ಸಂದರ್ಶನ ನೀಡಿದರು.

  ನಾನು ಲೆಜೆಂಡ್ ಅಲ್ಲ!

  ನಾನು ಲೆಜೆಂಡ್ ಅಲ್ಲ!

  ''ಎಲ್ಲರೂ ನನ್ನ ಲೆಜೆಂಡ್ ಅಂತ ಕರೆಯುತ್ತಾರೆ. ಆದರೆ ನಾನು ಲೆಜೆಂಡ್ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಇರುವ ಏಕೈಕ ಲೆಜೆಂಡ್ ಅಂದ್ರೆ ನನ್ನ ತಂದೆ ಡಾ.ರಾಜ್ ಕುಮಾರ್'' ಅಂತ ಸಂದರ್ಶನದಲ್ಲಿ ಹೇಳಿದ್ದಾರೆ ಶಿವರಾಜ್ ಕುಮಾರ್.

  ಹಳೇ ನೆನಪುಗಳಿಗೆ ಜಾರಿದ ಶಿವಣ್ಣ

  ಹಳೇ ನೆನಪುಗಳಿಗೆ ಜಾರಿದ ಶಿವಣ್ಣ

  ''ಮಲಯಾಳಂ ನಿರ್ದೇಶಕ ಭರದನ್ ರವರು ಮೊದಲು ನಟಿಸು ಅಂತ ನನಗೆ ಹೇಳಿದ್ದು. ಆಗ ನಾನಿನ್ನೂ ಚೆನ್ನೈನಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದೆ. ನಂತರ ಕೆ.ಬಾಲಚಂದರ್ ರವರೂ ಅದನ್ನೇ ಹೇಳಿದರು. ನಂತರ ಅಪ್ಪಾಜಿ ನಟನೆ ಬಗ್ಗೆ ನನ್ನ ಬಳಿ ಮಾತನಾಡಿದಾಗ ನಾನು ಒಪ್ಪಿಕೊಂಡೆ. ಹೀಗಾಗಿ 'ಆನಂದ್' ಶುರು ಆಗಿದ್ದು'' - ಶಿವರಾಜ್ ಕುಮಾರ್

  ಪ್ರತಿ ಸಿನಿಮಾವೂ ಮೊದಲ ಚಿತ್ರ

  ಪ್ರತಿ ಸಿನಿಮಾವೂ ಮೊದಲ ಚಿತ್ರ

  ''ಈಗ ನಾನು ನಟಿಸುತ್ತಿರುವ ಪ್ರತಿ ಚಿತ್ರವೂ ನನ್ನ ಮೊದಲ ಚಿತ್ರ ಇದ್ದ ಹಾಗೆ. ಹೀಗಾಗಿ ನನಗೆ ಈಗಲೇ ಲೆಜೆಂಡ್ ಪಟ್ಟ ಬೇಡ'' ಎಂದಿದ್ದಾರೆ ಶಿವರಾಜ್ ಕುಮಾರ್.

  ಸ್ವಾರ್ಥಿ ಅಂತೆ ನಾನು!

  ಸ್ವಾರ್ಥಿ ಅಂತೆ ನಾನು!

  ''ಎಷ್ಟೋ ಜನ ನಾನು ಸ್ವಾರ್ಥಿ ಅಂತ ಭಾವಿಸಿದ್ದಾರೆ. ಆದ್ರೆ, ಹೆಚ್ಚು ಕೆಲಸ ಮಾಡಲು ಇಷ್ಟ. ಇನ್ನೂ 10-15 ವರ್ಷಗಳು ನಾನು ನಟಿಸಬೇಕು ಅಂತ ಇಚ್ಛೆ ಇದೆ'' ಅಂತಾರೆ ಶಿವಣ್ಣ.

  ಬಸವಣ್ಣನ ಬಗ್ಗೆ ಶಿವಣ್ಣ

  ಬಸವಣ್ಣನ ಬಗ್ಗೆ ಶಿವಣ್ಣ

  ಇದೇ ಸಂದರ್ಭದಲ್ಲಿ ಬಸವಣ್ಣನ ಬಗ್ಗೆ ಕೂಡ ಗುಣಗಾನ ಮಾಡಿದ್ದಾರೆ ನಟ ಶಿವರಾಜ್ ಕುಮಾರ್.

  ಶಿವಣ್ಣ ನೀಡಿದ ಸಂದರ್ಶನ ಕೇಳಿ....

  ಶಿವಣ್ಣ ನೀಡಿದ ಸಂದರ್ಶನ ಕೇಳಿ....

  ಲಂಡನ್ ನ ಬಿಬಿಸಿ ರೇಡಿಯೋಗೆ ಶಿವಣ್ಣ ನೀಡಿದ ಸಂಪೂರ್ಣ ಸಂದರ್ಶನದ ಲಿಂಕ್ ಇಲ್ಲಿದೆ.... ಕ್ಲಿಕ್ ಮಾಡಿ

  ವಿಡಿಯೋ ನೋಡಿ....

  ಪ್ರತಿಷ್ಟಿತ ಬಿಬಿಸಿ ರೇಡಿಯೋಗೆ ಶಿವಣ್ಣ ನೀಡಿರುವ ಸಂದರ್ಶನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ವಿಡಿಯೋ ನೋಡಿ...

  English summary
  Kannada Actor Shiva Rajkumar has given interview for BBC Radio, Asian Network, London. Listen to the interview here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X