»   » ಕೋಲಾರದಲ್ಲಿ ಲೂಸ್ ಮಾದ ಯೋಗಿ ರೌಡೀಯಿಸಂ!

ಕೋಲಾರದಲ್ಲಿ ಲೂಸ್ ಮಾದ ಯೋಗಿ ರೌಡೀಯಿಸಂ!

By: ಜೀವನರಸಿಕ
Subscribe to Filmibeat Kannada

ಬಹುಶಃ ಇತ್ತೀಚೆಗೆ 'ಕಾಲಭೈರವ' ಸಿನಿಮಾದ ಶೂಟಿಂಗ್ ಗೆ ಕೋಲಾರ ಹಾಗೂ ಕೆಜಿಎಫ್ ಕಡೆ ಹೋಗಿದ್ದರು ನಮ್ಮ ಲೂಸ್ ಮಾದ ಯೋಗೇಶ್. ಅಲ್ಲೇನಾದ್ರೂ ಎಡವಟ್ಟು ಮಾಡ್ಕೊಂಡ್ರಾ? ಯಾಕೆ ಏನಾಯ್ತು? ಅಂತ ನೀವೂ ಯೋಚಿಸ್ತಿರ್ತೀರಾ.

ಆದರೆ ಇದು ಸಿನಿಮಾದೊಳಗಿನ ಕಿರಿಕ್ಕಲ್ಲ. ಕಿರಿಕ್ಕಿನದ್ದೇ ಸಿನಿಮಾ. ಅಂದಹಾಗೆ ಸಿನಿಮಾದ ಹೆಸರು 'ಕೋಲಾರ'. ಇಲ್ಲದಿದ್ರೆ 'ತಂಗಂ'. ಈಗ ಸ್ವಲ್ಪ ಐಡಿಯಾ ಸಿಕ್ಕಿರ್ಬೇಕು. ಇದು 'ತಂಗಂ' ಅನ್ನೋ ರೌಡಿಯ ರಘಡ್ ಕಥೆ. [ರಾಗಿಣಿ ಬೆರಳಿಗೆ ಉಂಗುರ; ಯೋಗೇಶ್ ಮೇಲೆ ಕಣ್ಣು!]


ಲೂಸ್ ಮಾದ ಯೋಗಿ ಮೊದಲ ಬಾರಿ ಕಂಪ್ಲೀಟ್ ಸಿನಿಮಾದಲ್ಲಿ ಲಾಂಗ್ ಹಿಡೀತಿದ್ದಾರೆ. ಈ ಹಿಂದೆ ಸ್ಲಂ ಸಿನಿಮಾ ನಿರ್ದೇಶನ ಮಾಡಿದ್ದ ಮಹೇಶ್ ಕುಮಾರ್ ಆಕ್ಷನ್ ಕಟ್ ನ ಈ ಸಿನಿಮಾ ಔಟ್ ಅಂಡ್ ಔಟ್ ಆಕ್ಷನ್ ಧಮಾಕಾ.

ರಿಯಲ್ ಸ್ಟೋರಿ ಬೇಸ್ಡ್ ಚಿತ್ರವಾಗಿರೋದರಿಂದ ಚಿತ್ರದ ಕಥೆಗಾಗಿ ಮಹೇಶ್ ಮೂರಕ್ಕೂ ಹೆಚ್ಚು ವರ್ಷ ರೀಸರ್ಚ್ ಮಾಡಿದ್ದಾರೆ. ಈ ಅಚ್ಚುಕಟ್ಟಾದ ಮಾಸ್ ಸಿನಿಮಾಗೆ ಸೌತ್ ಇಂಡಿಯಾದ ಹಿರಿಯ ನಟರ ದಂಡೇ ಇರಲಿದೆಯಂತೆ.

ಚಿತ್ರವನ್ನ ಲಕ್ಷ್ಮಿನಾರಾಯಣ್ ಅನ್ನೋರು ನಿರ್ಮಿಸುತ್ತಾ ಇದ್ದು, ಮೊದಲಬಾರಿಗೆ ಸಿನಿಮಾ ನಿರ್ಮಾಣ ಮಾಡಿದರೂ ಭರ್ಜರಿ ಸಿನಿಮಾ ಮಾಡೋ ಯೋಜನೆಯಲ್ಲಿದ್ದಾರೆ. ಹೊಸ ವರ್ಷದ ದಿನ ಅನಾಥ ಮಕ್ಕಳ ಜೊತೆ ಬರ್ತಡೇ ಆಚರಿಸಿಕೊಂಡ ನಿರ್ಮಾಪಕರು ಸಿನಿಮಾಗೆ ವಿಭಿನ್ನ ಓಪನಿಂಗ್ ಕೊಟ್ಟಿದ್ದಾರೆ. ಚಿತ್ರದ ಕಥೆ ಮತ್ತು ಮತ್ತಷ್ಟು ವಿಶೇಷತೆಗಳು ಸದ್ಯದಲ್ಲೇ ಹೊರಬೀಳಲಿದೆ.

English summary
Loose Mada Yogesh plays a role of notorious rowdy Thangam, who was allegedly involved in 37 cases of murder, dacoity, rape, robbery and theft cases in and around KGF, Tamil Nadu and Andhra Pradesh. A notorious rowdy from KGF in Kolar district was killed in an “encounter” with the police at Ramamurthynagar in Bangalore years ago. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada