»   » ಮಾಲಾಶ್ರೀ ಘರ್ಷಣೆಗೆ ಸೆನ್ಸಾರ್ ನಲ್ಲಿ ಮಿಶ್ರಪ್ರತಿಕ್ರಿಯೆ

ಮಾಲಾಶ್ರೀ ಘರ್ಷಣೆಗೆ ಸೆನ್ಸಾರ್ ನಲ್ಲಿ ಮಿಶ್ರಪ್ರತಿಕ್ರಿಯೆ

Posted By:
Subscribe to Filmibeat Kannada

ಮಾಲಾಶ್ರೀ ಅಭಿನಯದ ಘರ್ಷಣೆ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಚಿತ್ರವನ್ನು ಡಿಸೆಂಬರ್ 27ಕ್ಕೆ ತೆರೆಗೆ ತರಲಾಗುತ್ತಿದೆ. ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ರಿಮಿಕ್ಸ್ ಹಾಡು ಒಂದು.

'ನಂಜುಂಡಿ ಕಲ್ಯಾಣ' ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಇಲ್ಲಿ ಮತ್ತೆ ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ ಮಾಲಾಶ್ರೀ ಅವರದು ಕ್ರಿಮಿನಲ್ ಗಳ ಬೆನ್ನುಹತ್ತುವ ತನಿಖಾಧಿಕಾರಿಣಿ ಪಾತ್ರ. ಸೀರಿಯಲ್ ಕಿಲ್ಲರ್ ಒಬ್ಬನ ಬೆನ್ನುಹತ್ತುವ ಮಾಲಾಶ್ರೀ ಕಡೆಗೆ ಅವವನ್ನು ಹೇಗೆ ಹಿಡಿದು ಮಟ್ಟಹಾಕುತ್ತಾರೆ ಎಂಬುದೇ ಚಿತ್ರದ ಕಥೆ. [ಗುಂಡಿನ ಗಮ್ಮತ್ತಿನಲ್ಲಿ ಕನಸಿನರಾಣಿ ಮಾಲಾಶ್ರೀ]


ಈಗಾಗಲೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಸಣ್ಣಗೆ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಅವರು ಎಲ್ಲೂ ಖಾಕಿ ಸಮವಸ್ತ್ರದಲ್ಲಿ ಕಾಣಿಸುವುದಿಲ್ಲ. ಒಳಗೆ ಸೇರಿದರೆ ಗುಂಡು ರಿಮಿಕ್ಸ್ ಹಾಡನ್ನು ಮಂಜುಳಾ ಗುರುರಾಜ್ ಹಾಡಿದ್ದಾರೆ.

ಈ ಹಾಡಿನಲ್ಲಿ ಮಾಲಾಶ್ರೀ ಜೊತೆಗೆ ರೂಪಿಕಾ ಸಹ ಅಭಿನಯಿಸಿದ್ದಾರೆ. ಆಕ್ಷನ್ ಕ್ರೈಮ್ ಥ್ರಿಲ್ಲರ್ ಆದ ಈ ಚಿತ್ರದಲ್ಲಿ ಮಾಲಾಶ್ರೀ ಮತ್ತೊಮ್ಮೆ ಖಾಕಿ ಖದರ್ ತೋರಲಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ರಾಜೇಶ್ ಕಟ ಛಾಯಾಗ್ರಹಣವಿದೆ.

ಚಿತ್ರದ ಪಾತ್ರವರ್ಗದಲ್ಲಿ ಆಶಿಶ್ ವಿದ್ಯಾರ್ಥಿ, ನೈನಾ ಪುಟ್ಟಸ್ವಾಮಿ, ಸಂದೀಪ್, ಮುನಿ, ಕೀರ್ತಿ, ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಕಾಶಿ, ಅಜಯ್ ರಾಜ್, ಗುರುರಾಜ್ ಹೊಸಕೋಟೆ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Malashree lead Kannada movie Gharshane clears censor formalities. The movie got U/A certificate from regional censor board. The release is now confirmed for December 27. One remix song, Olage Seridare Gundu, adapted from Nanjundi Kalyana will be added to the film in a few days.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada