For Quick Alerts
  ALLOW NOTIFICATIONS  
  For Daily Alerts

  ನಟಿಯರಿಗೆ ಹೊಸ ಅವಕಾಶ ಬೇಕಾದರೆ ಮಂಚ ಏರಬೇಕು: ಮಂಡ್ಯ ರಮೇಶ್

  By ಬಾಗಲಕೋಟೆ ಪ್ರತಿನಿಧಿ
  |

  ಬಾಗಲಕೋಟೆ: ''ಕನ್ನಡ ಚಿತ್ರರಂಗದಲ್ಲಿ ನಟಿಮಣಿಗಳಿಗೆ ಹೊಸ ಅವಕಾಶ ಸಿಗಬೇಕು ಅಂದ್ರೆ, ಮಂಚ ಏರಬೇಕೆನ್ನುವ ವಾತಾವರಣ ಇದ್ದೇ ಇದೆ. ಅದು ಇಲ್ಲ ಅಂತ ಹೇಳುವ ಧೈರ್ಯ ನನಗಿಲ್ಲ'' ಎಂದು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ, ಹಿರಿಯ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಖೇದ ವ್ಯಕ್ತಪಡಿಸಿದ್ದಾರೆ.

  ಬಾಗಲಕೋಟೆಯಲ್ಲಿ ಇಂದು ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ವೇಳೆ ''ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಕಡೆ ಹೊಸ ಅವಕಾಶಕ್ಕೆ ಮಂಚ ಏರಬೇಕೆನ್ನುವ ವಾತಾವರಣ ಇದ್ದೇ ಇದೆ. ಇಲ್ಲ ಅಂತ ಹೇಳುವ ಧೈರ್ಯ ನನಗಿಲ್ಲ. ಇದು ಎಲ್ಲಾ ಕಾಲದಿಂದಲೂ ಇದೆ. ಇದು ಬಹಳ ನೋವಿನ ಸಂಗತಿ'' ಎಂದರು ಮಂಡ್ಯ ರಮೇಶ್.

  ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ ನಟಿ ಶ್ರುತಿ ಹರಿಹರನ್ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ ನಟಿ ಶ್ರುತಿ ಹರಿಹರನ್

  ''ಇದೆಲ್ಲ ಜನರಿಗೆ ಗೊತ್ತಿದೆ. ಇದನ್ನೆಲ್ಲ ಮೀರಿ ಹೋಗುವಂತಹ ಸಾಹಸವನ್ನು ಹೊಸ ತಲೆಮಾರಿನ ಯುವಕ-ಯುವತಿಯರು ಮಾಡಬೇಕಿದೆ. ಇಂತಹ ಘಟನೆಗಳು ಇಲ್ಲದ ಕಾಲದಲ್ಲಿ ಚಿತ್ರರಂಗ ಇನ್ನಷ್ಟು ಆರೋಗ್ಯಪೂರ್ಣ ಆಗುತ್ತೆ'' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

  ಕಾಲಿಗೆ ಕಚಗುಳಿ ಕೊಟ್ಟ ದಕ್ಷಿಣದ ಖ್ಯಾತ ನಟನ ಕಪಾಳಕ್ಕೆ ಹೊಡೆದ ರಾಧಿಕಾ!ಕಾಲಿಗೆ ಕಚಗುಳಿ ಕೊಟ್ಟ ದಕ್ಷಿಣದ ಖ್ಯಾತ ನಟನ ಕಪಾಳಕ್ಕೆ ಹೊಡೆದ ರಾಧಿಕಾ!

  ರಂಗಭೂಮಿ ಉಳಿವಿಗೆ ಸರ್ಕಾರ ಕಲಾವಿದರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮಂಡ್ಯ ರಮೇಶ್ ಹೇಳಿದರು. ಕಲಾವಿದರ ಬದುಕಿನ ಏರಿಳಿತಗಳ ಬಗ್ಗೆ ಮಾಧ್ಯಮ ಸಂವಾದದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

  English summary
  During an interaction with Press and Media, Kannada Actor Mandya Ramesh spoke about Casting Couch in Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X