»   » ಮಣಿರತ್ನಂ 'ಕಡಲ್' ಚಿತ್ರದ ನಾಯಕಿಯ ಫಸ್ಟ್ ಲುಕ್

ಮಣಿರತ್ನಂ 'ಕಡಲ್' ಚಿತ್ರದ ನಾಯಕಿಯ ಫಸ್ಟ್ ಲುಕ್

By: ಶಂಕರ್, ಚೆನ್ನೈ
Subscribe to Filmibeat Kannada

ಮಣಿರತ್ನಂ ಚಿತ್ರಗಳೆಂದರೆ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಕುತೂಹಲ ಇದ್ದೇ ಇರುತ್ತದೆ. ಈ ಬಾರಿ ಅವರು ಯಾವ ಸಬ್ಜೆಕ್ಟ್ ಗೆ ಕೈಹಾಕಿದ್ದಾರೆ. ಸಂಗೀತ ಹೇಗಿರುತ್ತದೆ. ಛಾಯಾಗ್ರಹಣ. ಇನ್ನೇನೇನು ಇರುತ್ತದೋ ಎಂಬ ಬಗ್ಗೆ ಮನಸ್ಸು ಹಾತೊರೆಯುತ್ತಿರುತ್ತದೆ.

ಈ ಬಾರಿ ಮಣಿರತ್ನಂ 'ಕಡಲ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಹೀರೋಯಿನ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮಾಜಿ ಹೀರೋಯಿನ್ ರಾಧಾ ಅವರ ಎರಡನೇ ಮಗಳು ತುಳಸಿ ನಾಯರ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

Kadal heroine first look

ರಾಧಾ ಅವರ ಹಿರಿ ಮಗಳು ಈಗಾಗಲೆ ಬೆಳ್ಳಿತೆರೆಗೆ ಅಡಿಯಿಟ್ಟಿದ್ದಾರೆ. ಈಗ ತಮ್ಮ ಕಿರಿ ಮಗಳನ್ನು ಮಣಿರತ್ನಂ ಚಿತ್ರದ ಮೂಲಕ ಪರಿಚಯಿಸಿ ಭದ್ರ ಬುನಾದಿಯನ್ನೇ ಹಾಕಿಕೊಟಿದ್ದಾರೆ. ರಾಧಾ ಅವರು ಕನ್ನಡದ 'ಸೌಭಾಗ್ಯ ಲಕ್ಷ್ಮಿ' ಹಾಗೂ 'ರಣಚಂಡಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿನ ತುಳಸಿಗೆ ಸಂಬಂಧಿಸಿದ ಫಸ್ಟ್ ಲುಕ್ ಪೋಸ್ಟರನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದು ಇದೇ ತಿಂಗಳ 17ರಂದು ಆಡಿಯೋ ಬಿಡುಗಡೆಯಾಗುತ್ತಿದೆ.

ಫಸ್ಟ್ ಲುಕ್ ಬಿಡುಗಡೆ ಸಂದರ್ಭದಲ್ಲಿ ತುಳಸಿ ಮಾತನಾಡುತ್ತಾ, "ನನ್ನ ಫೋಟೋಗಳನ್ನು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನೋಡಿಕೊಳ್ಳಬೇಕು ಎಂದು ಅದೆಷ್ಟೋ ದಿನಗಳಿಂದ ಕನಸು ಕಾಣುತ್ತಿದ್ದೆ. ಈಗದು ನನಸಾಗಿದೆ" ಎಂದರು.

"ನಟನೆ ಎಂದರೆ ತುಂಬಾ ಇಷ್ಟ. ನನ್ನ ಸಂಭಾಷಣೆಯನ್ನು ನಾನೇ ಹೇಳಿಕೊಳ್ಳಬೇಕು. ಮನೆಪಾಠಕ್ಕೆ ಹೋಗಿ ತಮಿಳು, ತೆಲುಗು ಭಾಷೆಗಳನ್ನು ಕಲಿತೆ (ಒಂದು ವೇಳೆ ಡಬ್ಬಿಂಗ್ ಇದ್ದಿದ್ದರೆ ಕನ್ನಡವನ್ನೂ ಕಲಿಯುತ್ತಿದ್ದರೇನೋ). ಮಣಿರತ್ನಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವುದು ನಿಜಕ್ಕೂ ನನ್ನ ಪಾಲಿನ ಅತಿದೊಡ್ಡ ಅದೃಷ್ಟ." ಎಂದಿದ್ದಾರೆ.

English summary
This is the first look of gorgeous Thulasi Nair, the girl who is making her film debut with versatile director Mani Ratnam's most prestigious flick 'Kadal'. She is none other than younger daughter of yesteryear heroine Radha. 
Please Wait while comments are loading...