»   » ಶ್ರೀಮುರಳಿ 'ಮಫ್ತಿ' ಜೊತೆಯಲ್ಲಿ ಬರ್ತಾನೆ 'ಬೃಹಸ್ಪತಿ'

ಶ್ರೀಮುರಳಿ 'ಮಫ್ತಿ' ಜೊತೆಯಲ್ಲಿ ಬರ್ತಾನೆ 'ಬೃಹಸ್ಪತಿ'

Posted By:
Subscribe to Filmibeat Kannada

'ಮಫ್ತಿ' ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಮಲ್ಟಿ ಸ್ಟಾರರ್ ಸಿನಿಮಾ. ಡಿಸೆಂಬರ್ 1 ರಂದು ತೆರೆಗೆ ಬರುವ 'ಮಫ್ತಿ' ಸಿನಿಮಾದ ಜೊತೆಯಲ್ಲಿ 'ಬೃಹಸ್ಪತಿ' ಕೂಡ ಎಂಟ್ರಿಕೊಡ್ತಿದ್ದಾನೆ. ನರ್ತನ್ ನಿರ್ದೇಶನದ 'ಮಫ್ತಿ' ಸಿನಿಮಾವನ್ನ ಜಯಣ್ಣ ನಿರ್ಮಾಣ ಮಾಡಿದ್ದಾರೆ. ಶಾನ್ವಿ ಹಾಗೂ ವಸಿಷ್ಠ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

'ಬೃಹಸ್ಪತಿ'.... ಮನೋರಂಜನ್ ರವಿಚಂದ್ರನ್ ಅಭಿನಯದ ಎರಡನೇ ಸಿನಿಮಾ. ನಂದಕಿಶೋರ್ ನಿರ್ದೇಶನ ಮಾಡಿರುವ 'ಬೃಹಸ್ಪತಿ' ಸಿನಿಮಾವನ್ನ ಜಯಣ್ಣ ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ತೆರೆಗೆ ಬರೋದಕ್ಕೆ ಸಿದ್ದವಾಗಿರುವ 'ಬೃಹಸ್ಪತಿ' ಚಿತ್ರದ ಟೀಸರ್ ಅನ್ನ 'ಮಫ್ತಿ' ಸಿನಿಮಾ ಜೊತೆಯಲ್ಲಿ ರಿಲೀಸ್ ಮಾಡೋಕೆ ಸಿನಿಮಾ ಟೀಂ ನಿರ್ಧಾರ ಮಾಡಿದೆ.

 manoranjan ravichandran bruhaspathi movie teaser releasing on december 1st

'ಮಫ್ತಿ' ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರವಾಗಿದ್ದು, ಸಿನಿಮಾ ಜೊತೆಯಲ್ಲಿ 'ಬೃಹಸ್ಪತಿ' ಟೀಸರ್ ಲಾಂಚ್ ಮಾಡಿದ್ರೆ ಎರಡು ಸಿನಿಮಾಗೆ ಪ್ರಮೋಷನ್ ಆಗುತ್ತೆ ಅನ್ನೋದು ನಿರ್ಮಾಪಕರ ಲೆಕ್ಕಾಚಾರ. 'ಸಾಹೇಬ' ಚಿತ್ರ ಬಿಡುಗಡೆ ನಂತ್ರ ಮನೋರಂಜನ್ ಅವ್ರನ್ನ ತೆರೆ ಮೇಲೆ ನೋಡೋದಕ್ಕೆ ಕಾದಿರುವ ಅಭಿಮಾನಿಗಳು ಡಿಸೆಂಬರ್ ಒಂದರಂದು ರವಿಮಾಮನ ಮಗನ ಮತ್ತೊಂದು ಲುಕ್ ಅನ್ನ ನೋಡಬಹುದು.

English summary
Manoranjan Ravichandran starrer 'Bruhaspati' Movie teaser will be out along with 'Mufti' Film. ಮನೋರಂಜನ್ ರವಿಚಂದ್ರನ್ ಅಭಿನಯದ ಬೃಹಸ್ಪತಿ ಚಿತ್ರದ ಟೀಸರ್ ಮಫ್ತಿ ಸಿನಿಮಾದ ಜೊತೆ ಬಿಡುಗಡೆಯಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada