»   » 'ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ

'ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ

Posted By:
Subscribe to Filmibeat Kannada

'ಕೆಂಡಸಂಪಿಗೆ' ಚಿತ್ರಕ್ಕಾಗಿ ಅತ್ಯುತ್ತಮ ಉದಯೋನ್ಮುಖ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿರುವ ಮುದ್ದುಮುಖದ ನಟಿ ಮಾನ್ವಿತಾ ಹರೀಶ್ ಅದೃಷ್ಟದ ಮೇಲೇರುತ್ತಾ ಸಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ನಟಿಸುವ ಅವಕಾಶ ಅವರ ಬಾಗಿಲಿಗೆ ಬಂದಿದೆ.

ಬಂದಿರುವ ಖಚಿತ ವರ್ತಮಾನದ ಪ್ರಕಾರ, ಶಿವರಾಜ್ ಕುಮಾರ್ ಅವರ ನಟನೆಯ 'ಟಗರು - ಮೈಯೆಲ್ಲ ಪೊಗರು' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಮಾನ್ವಿತಾ ಹರೀಶ್ ಅವರು ಆಯ್ಕೆಯಾಗಿದ್ದಾರೆ. ಅದೃಷ್ಟ ಅಂದ್ರೆ ಇದೇ ತಾನೆ. ತನ್ನ ಎರಡನೇ ಸಿನೆಮಾದಲ್ಲಿ ಶಿವಣ್ಣನಂತಹ ನಟನ ಜೊತೆ ನಟಿಸುವ ಅವಕಾಶ ಮಾನ್ವಿತಾ ಹರೀಶ್ ಗಿಟ್ಟಿಸಿದ್ದಾರೆ. ['ಸೈಮಾ' ಪ್ರಶಸ್ತಿಗೆ ತೆರೆ: ಪುನೀತ್ ಬೆಸ್ಟ್ ನಟ, ಉಪ್ಪಿ ಬೆಸ್ಟ್ ನಿರ್ದೇಶಕ]

Manvitha Harish to pair up with Shiva Rajkumar in Tagaru

ಕಾಕತಾಳೀಯವೆಂದರೆ, 'ಕೆಂಡಸಂಪಿಗೆ'ಯ ಮೂಲಕ ಅತ್ಯುತ್ತಮ ಪ್ರತಿಭೆಯನ್ನು ಕನ್ನಡ ಜನತೆಗೆ ಪರಿಚಯಿಸಿದ್ದ ನಿರ್ದೇಶಕ ದುನಿಯಾ ಸೂರಿ ಅವರೇ 'ಟಗರು - ಮೈಯೆಲ್ಲ ಪೊಗರು' ಚಿತ್ರವನ್ನು ನಿರ್ದೇಶಿಸುತ್ತಿರುವುದು. ಮಾನ್ವಿತಾ ಹರೀಶ್ ಅವರಿಗೆ ಈ ಚಿತ್ರದ ಮೂಲಕ ತಮ್ಮ ಅಭಿನಯ ಪ್ರತಿಭೆಯನ್ನು ಮತ್ತೆ ಒರೆಗೆ ಹಚ್ಚುವ ಅವಕಾಶ. ಯಾರಿಗುಂಟು ಯಾರಿಗಿಲ್ಲ?

ಆಗಸ್ಟ್ 21ರಂದು ವಿಧ್ಯುಕ್ತವಾಗಿ ಲಾಂಚ್ ಆಗುತ್ತಿರುವ ಈ ಚಿತ್ರವನ್ನು, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೆ.ಪಿ. ಶ್ರೀಕಾಂತ್ ಅವರು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಸೂರಿ ಅವರೇ ಬರೆದಿದ್ದಾರೆ. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

Manvitha Harish to pair up with Shiva Rajkumar in Tagaru

'ಎದ್ದೇಳು ಮಂಜುನಾಥ' ಖ್ಯಾತಿಯ ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಕ್ಕೆ ಸಿನೆಮಾಟೋಗ್ರಫರ್ ಆಗಿದ್ದ ಮಹೇಂದ್ರ ಸಿಂಹ ಅವರು ಟಗರು ಚಿತ್ರಕ್ಕೂ ಕ್ಯೆಮಾರಾ ಹಿಡಿಯಲಿದ್ದಾರೆ. ಮತ್ತು, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ಅವರು ಟಗರು ಚಿತ್ರಕ್ಕೂ ಮ್ಯೂಸಿಕ್ ಕಾಂಪೋಸ್ ಮಾಡಲಿದ್ದಾರೆ. ['ದೊಡ್ಮನೆ ಹುಡುಗ' ಬಂದ ತಕ್ಷಣ 'ಟಗರು' ಪಳಗಿಸ್ತಾರಾ ಸೂರಿ?]

English summary
Kannada actress Manvitha Harish, of Kendasampige fame, is almost certain to pair up with Shiva Rajkumar in Tagaru - Maiyyalla Pogaru Kannada movie to be directed by Duniya Soori. The movie is produced by KP Srikanth, president of Shiva Rajkumar Fan Association.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada