»   » ಪ್ರಿಯಾಂಕಾ ಉಪೇಂದ್ರ ಲವ್ ಮಾಡ್ತಿರೋದ್ಯಾರನ್ನ?

ಪ್ರಿಯಾಂಕಾ ಉಪೇಂದ್ರ ಲವ್ ಮಾಡ್ತಿರೋದ್ಯಾರನ್ನ?

Posted By: ಜೀವನರಸಿಕ
Subscribe to Filmibeat Kannada

ಪ್ರಿಯಾಂಕಾ ಲವ್ನಲ್ಲಿದ್ದಾರೆ. ಹೌದು ಪ್ರಿಯಾಂಕಾ ಈಗ ಫ್ಯಾಮಿಲಿ ಬಿಟ್ಟು ಬೇರೊಂದು ಲವ್ನಲ್ಲಿದ್ದಾರೆ. ಈ ಲವ್ಗೆ ಕಾರಣ ಮತ್ತಾರೂ ಅಲ್ಲ ದಿನೇಶ್ ಬಾಬು!

ಇದು ರಿಯಲ್ ಕಥೆಯಲ್ಲ ಸ್ವಾಮೀ, ರೀಲ್ ಕಥೆ. ದಿನೇಶ್ ಬಾಬು ಹೆಣೆದಿರುವ ತ್ರಿಕೋನ ಪ್ರೇಮಕಥೆ. ಗಂಡ ಇದ್ರೂ ಮತ್ತೊಬ್ಬ ಹುಡುಗನ ಅತಿಯಾದ ಪ್ರೀತಿಗೆ ಮರುಳಾಗೋ ಪ್ರಿಯಾಂಕಾ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡಿರೋ ಕಥೆ ಇದು. ಇದು ಪ್ರೇಮಕಥೆ ಮಾತ್ರವಲ್ಲ ಥ್ರಿಲ್ಲರ್ ಅಂತ ದಿನೇಶ್ ಬಾಬು ಅವರೇ ಹೇಳಿಕೊಂಡಿದ್ದಾರೆ.

ನಾವು ಹೇಳ್ತಿರೋದು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ ಹೊಸ ಚಿತ್ರ ಪ್ರಿಯಾಂಕಾ ಬಗ್ಗೆ. 'ಪ್ರಿಯಾಂಕಾ' ಚಿತ್ರದಲ್ಲಿ ಶಿವಧ್ವಜ್ಗೆ ಪತ್ನಿಯಾಗಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದಾರೆ. ತೆಲುಗು ನಟ ತೇಜಸ್ ಇಲ್ಲಿ ಲವರ್ಬಾಯ್. [ಪ್ರಿಯಾಂಕಾಗೆ ಬಯಸದೆ ಬಂದ ಭಾಗ್ಯ]

Married Priyanka Upendra in love with a bachelor

ಸುಪ್ರಭಾತ, ಹೆಂಡಿಗ್ಹೇಳ್ಬೇಡಿ, ಅಮೃತವರ್ಷಿಣಿ, ಲಾಲಿ ಮುಂತಾದ ಸದಭಿರುಚಿಯ ಚಿತ್ರಗಳನ್ನು ಕನ್ನಡದಲ್ಲಿ ತಯಾರಿಸಿ, ನಂತರ ಕೆಲ ಆರ್ಡಿನರಿ ಚಿತ್ರಗಳನ್ನು ನಿರ್ದೇಶಿಸಿ ಕೆಲಕಾಲ ಮರೆಯಾಗಿದ್ದ ದಿನೇಶ್ ಬಾಬು ತ್ರಿಕೋನ ಪ್ರೇಮಕಥೆಯೊಂದಿಗೆ ಮತ್ತೆ ಬಂದಿದ್ದಾರೆ.

ಇದು ಮದುವೆಯಾಗಿರೋ ಹೆಣ್ಣೊಬ್ಬಳು ಬ್ಯಾಚುಲರ್ ಬಾಯ್ನೊಂದಿಗೆ ಪ್ರೇಮಕ್ಕೆ ಬಿದ್ದು ತೊಳಲಾಡೋ ಕಥೆ. ಇವತ್ತಿನ ಸಮಾಜದಲ್ಲಿ ತೆರೆಮರೆಯಲ್ಲಿ ನಡೀತಾ ಇರೋ ಈ ಕಥೆಯನ್ನ ಸ್ಟ್ರಾಂಗ್ ಪಾತ್ರಗಳ ಮೂಲಕ ತೆರೆಗೆ ತರ್ತಿದ್ದಾರೆ ದಿನೇಶ್ ಬಾಬು. ಚಿತ್ರದಲ್ಲಿ ಪ್ರಕಾಶ್ ರಾಜ್ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. [ಪ್ರಿಯಾಂಕಾ ಈಗ 7 ತಿಂಗಳ ಗರ್ಭಿಣಿ!]

English summary
Priyanka Upendra is in love with a bachelor, though she is already married! Yes, but don't jump to any conclusion. Yes Priyanka is in love, but in reel life. Dinesh Baboo, who had directed movies like Suprabhata, Laali, Amritavarshini, has come out with triangular love story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada