»   » ಟೀನೇಜ್ ಈ ವಯಸ್ಸೇ ಒಂಥರಾ ಅಂತಿದ್ದಾರೆ ಕಿಶನ್

ಟೀನೇಜ್ ಈ ವಯಸ್ಸೇ ಒಂಥರಾ ಅಂತಿದ್ದಾರೆ ಕಿಶನ್

Posted By:
Subscribe to Filmibeat Kannada

ಹದಿಹರೆಯದ ವಯಸ್ಸೇ ಹಾಗೇ. ಇತ್ತ ಬಾಲ್ಯವೂ ಅಲ್ಲದ ಅತ್ತ ಯೌವನವೂ ಅಲ್ಲದ ಸ್ಥಿತಿ. ಮನಸ್ಸೇ ಒಂಥರಾ ಗೊಂದಲದ ಗೂಡು. ಟೀನೇಜ್ ಹುಡುಗ, ಹುಡುಗಿಯ ತುಮುಲ, ತೊಳಲಾಟಗಳನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ನಿರ್ದೇಶಕ ಎಚ್ಆರ್ ಶ್ರೀಕಾಂತ್.

ರಾಕ್ ಸ್ಟಾರ್ ಕಿಶನ್ ಟೀನೇಜ್ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇದೇ ಶುಕ್ರವಾರ (ಜು.26) ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಬೆಂಗಳೂರಿನ ತ್ರಿಭುವನ್ ಮುಖ್ಯ ಚಿತ್ರಮಂದಿರ ಸೇರಿದಂತೆ ನವರಂಗ್, ಪಿವಿಆರ್ ಚಿತ್ರಮಂದಿರಗಳಲ್ಲೂ ತೆರೆ ಕಾಣುತ್ತಿದೆ.


ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಚಿತ್ರಮಂದಿರಗಳ ಜೊತೆಗೆ ಅಂತರ್ಜಾಲದಲ್ಲೂ ಬಿಡುಗಡೆಯಾಗುತ್ತಿರುವುದು. ಜು.26ರಂದೇ ಅಂತರ್ಜಾಲದಲ್ಲೂ ತಮ್ಮ ಟೀನೇಜ್ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಶ್ರೀಕಾಂತ್ ತಿಳಿಸಿದ್ದಾರೆ.

ಚಿತ್ರದ ಹಾಡೊಂದನ್ನು ಆಳನೀರಿನಲ್ಲಿ ಚಿತ್ರೀಕರಿಸಿರುವುದು, ಒಂದೇ ಹಾಡಿಗೆ 15,122 ಮಕ್ಕಳು ಹೆಜ್ಜೆ ಹಾಕಿರುವುದು ಇನ್ನೊಂದು ವಿಶೇಷ. ಇಷ್ಟೆಲ್ಲಾ ವಿಶೇಷಗಳ ಕಾರಣ ಚಿತ್ರ ವಿಶ್ವದಾಖಲೆ ನಿರ್ಮಿಸಿದೆ. ಚಿತ್ರದ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ.

ಚಿತ್ರದಲ್ಲಿ ಮೂವರು ನಾಯಕಿಯರು ತನ್ವಿ, ಪ್ರಿಯಾ ಭರತ್ ಮತ್ತು ಅಪೂರ್ವಾ ಅರೋರಾ. ಜಯಶ್ರೀ, ರಾಜುತಾಳಿಕೋಟೆ, ಮಾಸ್ಟರ್ ಲಕ್ಷ್ಮಣ್, ಮಾಸ್ಟರ್ ಸಾಯಿಕೃಷ್ಣ ಚಿತ್ರದ ತಾರಾಬಳಗದಲ್ಲಿರುವ ಇತರೆ ಕಲಾವಿದರು. ಮಹೇಶ್.ಕೆ.ದೇವ್ ಛಾಯಾಗ್ರಹಣವಿರುವ 'ಟೀನೇಜ್'ಗೆ ಸಿದ್ದಾರ್ಥ್ ವಿಪಿನ್ ಸಂಗೀತ ನೀಡಿದ್ದಾರೆ.

ಕಿಶನ್ ಈ ಚಿತ್ರದ ಸಂಕಲಕಾರರಾಗೂ ಕಾರ್ಯ ನಿರ್ವಹಿಸಿದ್ದಾರೆ. ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಮುರಳಿ, ರಾಮು, ಚಂದ್ರಮಯೂರ್, ಶಂಕರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಸ್ತಿಗಾಗಿ ಈ ಸಿನಿಮಾ ಮಾಡಿಲ್ಲ. ಜನ ನೋಡಬೇಕೆಂಬ ಉದ್ದೇಶದಿಂದ ಮಾಡಿದ್ದೇನೆ ಎನ್ನುತ್ತಾರೆ ಸಾಲ್ಟ್ ಅಂಡ್ ಪೆಪ್ಪರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಚಿತ್ರ ನಿರ್ಮಿಸಿರುವ ಶ್ರೀಕಾಂತ್. (ಒನ್ಇಂಡಿಯಾ ಕನ್ನಡ)

English summary
Kannada film Teenage slated for release on 26th July. This is a multi-crore young teen's film starring Guinness Record Holder Kishan along with Tanvi, Apoorva Arora, Priya and Giorgia. It is the film of a teenager, who is a rockstar by birth, an amazing guitarist and a deadly singer.
Please Wait while comments are loading...