For Quick Alerts
  ALLOW NOTIFICATIONS  
  For Daily Alerts

  ಜಯನಗರದಲ್ಲಿ ಮೀಡಿಯಾ ಕ್ಲಬ್ ಆಫ್ ಕರ್ನಾಟಕ

  By Rajendra
  |

  ನಗರದ ಅತ್ಯಂತ ಜನನಿಬಿಡ ಪ್ರದೇಶ ಜಯನಗರ. ಅಲ್ಲಿ 'ಮೀಡಿಯಾ ಕ್ಲಬ್ ಆಫ್ ಕರ್ನಾಟಕ' ತಲೆ ಎತ್ತಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಈ ವಿಶೇಷ ಕ್ಲಬ್ಬನ್ನು ಉದ್ಘಾಟಿಸಿ ಶುಭ ಕೋರಿದರು.

  ನೋಂದಣಿ ಆದ ಸಂಸ್ಥೆ 250 ಸದಸ್ಯರನ್ನು ಈಗಾಗಲೇ ಹೊಂದಿದ್ದು ಜಯನಗರದ 2ನೇ ಬ್ಲಾಕ್ 7ನೇ ಮುಖ್ಯ ರಸ್ತೆಯಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಪ್ರಾರಂಭವಾಗಿದೆ. ಜಿಮ್, ಇಂಡೋರ್ ಆಟಗಳು, ಇಸ್ಪೀಟು ಆಡಲು ವ್ಯವಸ್ಥೆ, ಮನರಂಜನೆಯ ಮಜಲುಗಳ ವ್ಯವಸ್ಥೆ, ಗ್ರಂಥಾಲಯ ಹಾಗೂ ಇನ್ನಿತರ ಸೌಲಭ್ಯಗಳಿವೆ. ಇಲ್ಲಿ ಕುಟುಂಬ ಸಮೇತ ಬಂದು ಹೋಗುವ ಅವಕಾಶ ಕಲ್ಪಿಸಲಾಗಿದೆ.

  ಏನಿದು 'ಮೀಡಿಯಾ ಕ್ಲಬ್ ಆಫ್ ಕರ್ನಾಟಕ: ಎಲ್ಲ ಮಾಧ್ಯಮಗಳ ಒಟ್ಟಿಗೆ ಸೇರಿಸಿ ಕಾರ್ಯನಿರ್ವಹಿಸುವ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಳಕಳಿ ಇರುವ ಯೋಜನೆ ಇಟ್ಟುಕೊಂಡಿದ್ದಾರೆ ಈ ಕ್ಲಬ್ ಸ್ಥಾಪಕರು. ಮೀಡಿಯಾ ಕ್ಲಬ್ ಆಫ್ ಕರ್ನಾಟಕ ಸದ್ಯದಲ್ಲೇ ಮೈಸೂರು ಹಾಗೂ ಮಂಗಳೂರಿನಲ್ಲಿ ತಲೆ ಎತ್ತಲಿದೆ.

  ಉದ್ಘಾಟನೆಯ ದಿನ ಪ್ರವಾಹ ನಿಧಿಗಾಗಿ 50001 ರುಪಾಯಿಗಳನ್ನು ನೀಡಿದೆ. ಅದೇ ಅಲ್ಲದೆ ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ, ಅಶಕ್ತ ಮಕ್ಕಳಿಗೆ ವಿದ್ಯಾಭ್ಯಾಸ, ನಾಲ್ಕು ಹಳ್ಳಿಗಳ ಉದ್ಧಾರ ಇನ್ನಿತರ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡಿದೆ.

  ನೂತನವಾಗಿ ಪ್ರಾರಂಭವಾಗಿರುವ ಮೀಡಿಯಾ ಕ್ಲಬ್ ಆಫ್ ಕರ್ನಾಟಕ ಅಧ್ಯಕ್ಷರು ಸಿದ್ದಪ್ಪ ಅರಕೆರೆ, ಬಿ ಎನ್ ಶ್ರೀನಾಥ್ ಉಪಾಧ್ಯಕ್ಷರು, ವಿ ಶ್ರೀ ನಿವಾಸ್ ಪ್ರಧಾನ ಕಾರ್ಯದರ್ಶಿ, ವಿ ಸುಬ್ರಮಣ್ಯನ್ ಕಾರ್ಯದರ್ಶಿ, ಸತೀಶ್ ಬಿ ಎಚ್ ಖಜಾಂಜಿ ಆಗಿ ಆಯ್ಕೆ ಆಗಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Media club of Karnataka inaugurated in Jayanagar 4th block, Bangalore. Gnanapeeta Awardee Dr. Chanrashekhara Kambara, Kannada Sahithya Parishath President Shree Pundaleeka Halambi, Jayanagar MLA Shree Vijay Kumar, Bangalore DD Director Nadoja Mahesh hoshi and other members are presented in occasion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X