For Quick Alerts
  ALLOW NOTIFICATIONS  
  For Daily Alerts

  ಆರ್ಯವರ್ಧನನ ಅನುಗೆ ಖುಲಾಯಿಸಿದ ಅದೃಷ್ಟ, ಕಿರುತೆರೆಯಿಂದ ಬೆಳ್ಳಿತೆರೆಗೆ ಬಡ್ತಿ

  |

  ಜನಪ್ರಿಯ ಧಾರಾವಾಹಿಯ ಜೊತೆ-ಜೊತೆಯಲಿ ನಾಯಕ ನಟಿ ಅನು ಪಾತ್ರಧಾರಿ ಮೇಘಾ ಶೆಟ್ಟಿಗೆ ಅದೃಷ್ಟ ಖುಲಾಯಿಸಿದೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada

  ನಟಿಯಾಗಿ ಗುರುತಿಸಿಕೊಂಡ ಕಡಿಮೆ ಅವಧಿಯಲ್ಲಿಯೇ ಅವರಿಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಬಡ್ತಿ ದೊರೆತಿದೆ. ಸ್ಟಾರ್ ನಟನ ಎದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಮೇಘ ಶೆಟ್ಟಿ.

  'ತ್ರಿಬಲ್ ರೈಡಿಂಗ್' ಆರಂಭಿಸಿದ ಗೋಲ್ಡನ್ ಸ್ಟಾರ್ ಗಣೇಶ್'ತ್ರಿಬಲ್ ರೈಡಿಂಗ್' ಆರಂಭಿಸಿದ ಗೋಲ್ಡನ್ ಸ್ಟಾರ್ ಗಣೇಶ್

  ಗೋಲ್ಡನ್ ಸ್ಟಾರ್ ನಾಯಕನಾಗಿ ನಟಿಸುತ್ತಿರುವ ಮುಂದಿನ ಸಿನಿಮಾ 'ತ್ರಿಬಲ್ ರೈಡ್' ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಮೇಘ ಶೆಟ್ಟಿ ನಟಿಸುತ್ತಿದ್ದಾರೆ. ಸುದ್ದಿಯನ್ನು ಚಿತ್ರತಂಡ ಹಂಚಿಕೊಂಡಿದೆ.

  ಹಿರಿತೆರೆಗೆ ಲಗ್ಗೆ ಇಟ್ಟ ಮೇಘ ಶೆಟ್ಟಿ

  ಹಿರಿತೆರೆಗೆ ಲಗ್ಗೆ ಇಟ್ಟ ಮೇಘ ಶೆಟ್ಟಿ

  'ಜೊತೆ-ಜೊತೆಯಲಿ' ಧಾರಾವಾಹಿಯು ಮೇಘಾ ಶೆಟ್ಟಿ ಅವರ ಮೊದಲ ಧಾರಾವಾಹಿ ಆಗಿದೆ. ಮೊದಲ ಧಾರಾವಾಹಿಯೇ ಮೇಘಾ ಶೆಟ್ಟಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು, ಹಿರಿತೆರೆಗೆ ಲಗ್ಗೆ ಇಡಲಿದ್ದಾರೆ.

  ರಗಡ್ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಗೌಡ

  ರಗಡ್ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಗೌಡ

  ತ್ರಿಬಲ್ ರೈಡ್ ಸಿನಿಮಾವನ್ನು ರಗಡ್ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಗೌಡ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಕೆಲಸ ಪ್ರಾರಂಭವಾಗಿದ್ದು, ಹೈದರಾಬಾದ್‌ನಲ್ಲಿ ಹಾಡುಗಳ ರೆಕಾರ್ಡಿಂಗ್ ಮಾಡಲಾಗುತ್ತಿದೆ.

  ತೆಲುಗು ಬಿಗ್‌ಬಾಸ್: ಸ್ಪರ್ಧಿಯೊಬ್ಬರ ಅಪಹರಣ, ಮನೆಯೊಳಗೆ ಸಖತ್ ಹೈಡ್ರಾಮಾತೆಲುಗು ಬಿಗ್‌ಬಾಸ್: ಸ್ಪರ್ಧಿಯೊಬ್ಬರ ಅಪಹರಣ, ಮನೆಯೊಳಗೆ ಸಖತ್ ಹೈಡ್ರಾಮಾ

  ರಾಮ್ ಗೋಪಾಲ್ ನಿರ್ಮಾಪಕ

  ರಾಮ್ ಗೋಪಾಲ್ ನಿರ್ಮಾಪಕ

  ಲವ್, ಕಾಡಿಮಿ, ಆಕ್ಷನ್ ಮತ್ತು ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಕತೆ ತ್ರಿಬಲ್ ರೈಡ್ ಸಿನಿಮಾದ್ದಾಗಿದೆ. ಈ ಸಿನಿಮಾವನ್ನು ರಾಮ್ ಗೋಪಾಲ್ ನಿರ್ಮಿಸುತ್ತಿದ್ದಾರೆ. ಸಿನಿಮಾಕ್ಕೆ ಕಾರ್ತಿಕ್ ಸಂಗೀತ ನೀಡಲಿದ್ದಾರೆ. ಸಿನಿಮಾದಲ್ಲಿ ರವಿಶಂಕರ್, ಚಿಕ್ಕಣ್ಣ ಸೇರಿ ಇನ್ನೂ ಹಲವು ನಟರಿದ್ದಾರೆ.

  ಧಾರಾವಾಹಿ ಕತೆ ಏನು?

  ಧಾರಾವಾಹಿ ಕತೆ ಏನು?

  ಮೇಘ ಶೆಟ್ಟಿ ಸಿನಿಮಾಕ್ಕೆ ಹೋದರೆ ಧಾರಾವಾಹಿ ಕತೆ ಏನು? ಎಂಬ ಅನುಮಾನ ಪ್ರಾರಂಭವಾಗಿದೆ. ಆದರೆ ಧಾರಾವಾಹಿ ಚಿತ್ರೀಕರಣಕ್ಕೆ ಧಕ್ಕೆ ಆಗದ ರೀತಿಯಲ್ಲಿ ಮೇಘ ಶೆಟ್ಟಿ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. ಅಥವಾ ಕತೆಯಲ್ಲಿ ಕೆಲ ದಿನಗಳ ಕಾಲ ಬದಲಾವಣೆ ತರುವ ಸಾಧ್ಯತೆಯೂ ಇದೆ.

  ವಿಚಾರಣೆ ಎದುರಿಸಿದ ನಟಿ ಗೀತಾ ಭಟ್ ಹೇಳಿದ್ದು ಹೀಗೆವಿಚಾರಣೆ ಎದುರಿಸಿದ ನಟಿ ಗೀತಾ ಭಟ್ ಹೇಳಿದ್ದು ಹೀಗೆ

  English summary
  Jothe Jotheyali serial lead actress Megha Shetty roped in for Ganesh's next movie Triple riding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X