»   » ಜಗ್ಗೇಶ್ ಆಕ್ಷನ್ ಕಟ್ ನಲ್ಲಿ 'ಮೇಲುಕೋಟೆ ಮಂಜ'

ಜಗ್ಗೇಶ್ ಆಕ್ಷನ್ ಕಟ್ ನಲ್ಲಿ 'ಮೇಲುಕೋಟೆ ಮಂಜ'

Posted By:
Subscribe to Filmibeat Kannada

ನವರಸನಾಯಕ ಜಗ್ಗೇಶ್ ಅವರು ತಮ್ಮ ಹೊಸ ಚಿತ್ರವನ್ನು ಪ್ರಕಟಿಸಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ಅವರು ಆಕ್ಷನ್ ಕಟ್ ಹೇಳುತ್ತಿರುರುವುದು ವಿಶೇಷ. ಚಿತ್ರದ ಹೆಸರು 'ಮೇಲುಕೋಟೆ ಮಂಜ'.

ಈ ಚಿತ್ರಕ್ಕಾಗಿ ಅವರು ಒಂದು ರೋಮ್ಯಾಂಟಿಕ್ ಹಾಡನ್ನೂ ಬರೆದಿದ್ದಾರೆ. ಅವರೇ ಹೇಳುವಂತೆ ದೆವ್ವ ಓಡಾಡುವ ಟೈಮಲ್ಲಿ ಈ ಹಾಡು ಅವರ ಲೇಖನಿಯಿಂದ ಹೊರಹೊಮ್ಮಿದೆ. ಈ ಚಿತ್ರಕ್ಕೆ ಐಂದ್ರಿತಾ ರೇ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ['ಬಿಗ್ ಬಾಸ್' ಬಗ್ಗೆ ಮೌನ ಮುರಿದ ನವರಸನಾಯಕ]

Actor Jaggesh

ಆಗಸ್ಟ್ 1 ರಿಂದ ಚಿತ್ರೀಕರಣ ಶುರುವಾಗಲಿದ್ದು ಗಿರಿವಿದ್ವಾನ್ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಈಗಾಗಲೆ ಚಿತ್ರದ ಎರಡು ಹಾಡುಗಳನ್ನು ಕಾಂಪೋಸ್ ಮಾಡಲಾಗಿದೆ. ಚಿತ್ರದ ಪಾತ್ರವರ್ಗದಲ್ಲಿ ರಂಗಾಯಣ ರಘು, ಸಾಧುಕೋಕಿಲ, ಕುರಿ ಪ್ರತಾಪ್ ಮುಂತಾದರು ಇದ್ದಾರೆ.

ಈ ವರ್ಷ ತಮ್ಮ ನೆಚ್ಚಿನ ಅಭಿಮಾನಿ ಬಳಗವನ್ನು ನಕ್ಕು ನಲಿಸುವ ಭರವಸೆಯನ್ನು ಕೊಟ್ಟಿದ್ದಾರೆ ನವರಸನಾಯಕ. ಜಗ್ಗೇಶ್ ಅಭಿಮಾನಿಗಳು ಭರ್ಜರಿ ಕಾಮಿಡಿಯನ್ನು ನಿರೀಕ್ಷಿಸಬಹುದು. 'ವಾಸ್ತುಪ್ರಕಾರ' ಚಿತ್ರದಲ್ಲೂ ಜಗ್ಗೇಶ್ ಅವರು ಅಭಿನಯಿಸಿದ್ದು ಚಿತ್ರ ಸಂಪೂರ್ಣ ಮನರಂಜನೆ ನೀಡಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ. (ಒನ್ಇಂಡಿಯಾ ಕನ್ನಡ)

English summary
Navarasa Nayaka Jaggesh next movie titled as 'Melukote Manja'. He is acting and directing the movie. Aindrita Ray play opposite to Jaggesh while Giri Vidwan composing music. The movie is all set to launch on 1st August, 2014.
Please Wait while comments are loading...