For Quick Alerts
  ALLOW NOTIFICATIONS  
  For Daily Alerts

  ಆಷಾಢ ಮುಗಿತು, ಶ್ರಾವಣದಲ್ಲಿ ಶುರುವಾಗುತ್ತೆ ಸಿನಿಮಾ ಸಂಭ್ರಮ

  By Pavithra
  |

  ಆಷಾಢ ಮುಗಿಯುತ್ತಾ ಬರುತ್ತಿದೆ. ಇನ್ನೇನು ಶ್ರಾವಣ ಮಾಸ ಆರಂಭಕ್ಕಾಗಿ ಸಾಮಾನ್ಯ ಜನರು ಮಾತ್ರವಲ್ಲದೆ ಇಡೀ ಸಿನಿಮಾರಂಗವೂ ಕಾದಿದೆ. ಆಷಾಢಕ್ಕೂ ಮುನ್ನವೇ ತರಾತುರಿಯಲ್ಲಿ ಮುಹೂರ್ತಗಳನ್ನ ಮಾಡಿ ಮುಗಿಸಿದ್ದ ಅದೆಷ್ಟೋ ಚಿತ್ರತಂಡಗಳು ಸಿನಿಮಾ ಚಿತ್ರೀಕರಣವನ್ನೂ ಆರಂಭ ಮಾಡದೇ ಸುಮ್ಮನ್ನಿದ್ದರೆ, ಇನ್ನು ಕೆಲವು ತಂಡಗಳು ಸಿನಿಮಾಗಳನ್ನೇ ಬಿಡುಗಡೆ ಮಾಡದೇ ಕಾದು ಕುಳಿತಿದ್ದಾರೆ.

  ಆಷಾಢ ಮಾಸದಲ್ಲಿ ಸಣ್ಣ ಪುಟ್ಟ ಸಿನಿಮಾ ನೋಡಿ ಓಕೆ ಓಕೆ ಅಂದಿದ್ದ ಪ್ರೇಕ್ಷಕರಿಗೆ ಶ್ರಾವಣ ಮಾಸದಲ್ಲಿ ಭರ್ಜರಿ ಬಂಪರ್ ಆಫರ್ ಸಿಕ್ತಿದೆ. ಒಂದಲ್ಲ ಎರಡಲ್ಲ ಸಾಲು ಸಾಲು ಕನ್ನಡದ ಸ್ಟಾರ್ ಸಿನಿಮಾಗಳು ಶ್ರಾವಣ ಮಾಸದಲ್ಲಿ ಬಿಡುಗಡೆಗೆ ಆಗಲಿವೆ.

  ಹಾಗಾದರೆ ಆಗಸ್ಟ್ ನಲ್ಲಿ ಬಿಡುಗಡೆ ಆಗುವ ಸಿನಿಮಾಗಳು ಯಾವುವು, ಯಾವೆಲ್ಲಾ ಸ್ಟಾರ್ ಗಳು ತೆರೆ ಮೇಲೆ ಬಂದು ಅಭಿಮಾನಿಗಳನ್ನು ರಂಜಿಸುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಅನಿಶ್ ವಾಸು ಸಿನಿಮಾ ಬಿಡುಗಡೆ

  ಅನಿಶ್ ವಾಸು ಸಿನಿಮಾ ಬಿಡುಗಡೆ

  'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ಶ್ರಾವಣ ಮಾಸದ ಮೊದಲ ಚಿತ್ರವಾಗಿ ತೆರೆಗೆ ಬರಲಿದೆ. ಆಗಸ್ಟ್ ೩ ರಂದು ಚಿತ್ರ ಬಿಡುಗಡೆ ಆಗಲಿದ್ದು ಈಗಾಗಲೇ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಚಿತ್ರದಲ್ಲಿ ಅನಿಶ್ ಮತ್ತು ನಿಶ್ವಿಕಾ ನಾಯ್ಡು ಅಭಿನಯ ಮಾಡಿದ್ದಾರೆ.

  'ಅಯೋಗ್ಯ'ನಾದ ಸತೀಶ

  'ಅಯೋಗ್ಯ'ನಾದ ಸತೀಶ

  ಎರಡನೇ ವಾರದಲ್ಲಿ ಹಾಡುಗಳಿಂದ ಸುದ್ದಿ ಮಾಡುತ್ತಿರುವ 'ಅಯೋಗ್ಯ' ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಸತೀಶ್ ನಿನಾಸಂ ಜೊತೆ ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ಅಭಿನಯ ಮಾಡಿದ್ದು ಟಿ ಆರ್ ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಮಹೇಶ್ ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  ಶ್ರಾವಣದ ಮೊದಲ ಹಬ್ಬದಲ್ಲಿ ಕಿಚ್ಚನ ಚಿತ್ರ

  ಶ್ರಾವಣದ ಮೊದಲ ಹಬ್ಬದಲ್ಲಿ ಕಿಚ್ಚನ ಚಿತ್ರ

  ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯ ಮಾಡಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡಲು ಸಿನಿಮಾತಂಡ ಸಿದ್ದತೆ ಮಾಡಿಕೊಳ್ಳುತ್ತಿದೆ. ಶೀಘ್ರದಲ್ಲೇ ಆಡಿಯೋ ಬಿಡುಗಡೆ ಮಾಡಲಿದ್ದು ಹಬ್ಬದಂದು ಅಭಿಮಾನಿಗಳಿಗೆ ಸಿನಿಮಾ ಬಿಡುಗಡೆ ಮಾಡುವ ಮೂಲಕ ಹಬ್ಬದ ಸಿಹಿ ಹಂಚಲಿದ್ದಾರೆ.

  ಲೈಫ್ ಜೊತೆ ಒಂದ್ ಸೆಲ್ಫಿ

  ಲೈಫ್ ಜೊತೆ ಒಂದ್ ಸೆಲ್ಫಿ

  ಪ್ರಜ್ವಲ್ ದೇವರಾಜ್, ಪ್ರೇಮ್, ಹರಿಪ್ರಿಯಾ ಅಭಿನಯದ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾ ಕೂಡ ಆಗಸ್ಟ್ ನಲ್ಲೇ ರಿಲೀಸ್ ಆಗ್ತಿದೆ, ದಿನಕರ್ ಚಿತ್ರವನ್ನು ನಿರ್ದೇಶನ ಮಾಡಿರುವ ಹಿನ್ನಲೆಯಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

  ಒಂದಲ್ಲಾ ಎರಡಲ್ಲಾ ತೆರೆಗೆ

  ಒಂದಲ್ಲಾ ಎರಡಲ್ಲಾ ತೆರೆಗೆ

  ರಾಮಾ ರಾಮಾ ರೇ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸತ್ಯ ನಿರ್ದೇಶನದ ಒಂದಲ್ಲಾ ಎರಡಲ್ಲಾ ಚಿತ್ರ ಕೂಡ ಆಗಸ್ಟ್ ನಲ್ಲೇ ಬಿಡುಗಡೆ ಆಗಲಿದೆ. ಚಿತ್ರಕ್ಕೆ ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ.

  ಶಾಲೆಯ ಮಕ್ಕಳನ್ನು ಕರೆತಂದ ರಿಷಬ್

  ಶಾಲೆಯ ಮಕ್ಕಳನ್ನು ಕರೆತಂದ ರಿಷಬ್

  ರಿಕ್ಕಿ, ಕಿರಿಕ್ ಪಾರ್ಟಿ ಸಿನಿಮಾಗಳನ್ನು ನಿರ್ದೇಶನ ಮಾಡಿದ ರಿಷಬ್ ಶೆಟ್ಟಿ ಅವರ ಸ, ಹಿ, ಪ್ರಾ, ಪಾಠ ಶಾಲೆ, ಕಾಸರಗೋಡು ಸಿನಿಮಾ ಕೂಡ ಆಗಸ್ಟ್ ಮೂರನೇ ವಾರದಲ್ಲಿ ತೆರೆಗೆ ಬರುತ್ತಿವೆ. ಸ, ಹಿ, ಪ್ರಾ, ಪಾಠ ಶಾಲೆ, ಕಾಸರಗೋಡು ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನಸ್ಸು ಮುಟ್ಟಿವೆ.

  ಪ್ರಣಮ್ ಅಭಿನಯದ ಮೊದಲ ಸಿನಿಮಾ

  ಪ್ರಣಮ್ ಅಭಿನಯದ ಮೊದಲ ಸಿನಿಮಾ

  ದೇವರಾಜ್ ಕಿರಿಯ ಪುತ್ರ ಪ್ರಣಮ್ ದೇವರಾಜ್ ಅಭಿನಯದ ಕುಮಾರಿ21f ಸಿನಿಮಾ ಕೂಡ ಆಗಸ್ಟ್ ನಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿರುವ ಚಿತ್ರತಂಡ ಸಿನಿಮಾ ಪ್ರಚಾರವನ್ನು ಆರಂಭಿಸಿದೆ. ಇವುಗಳ ಜೊತೆಗೆ ಮತ್ತಷ್ಟು ಸಿನಿಮಾ ತೆರೆ ಕಾಣುವ ನಿರೀಕ್ಷೆಗಳಿವೆ.

  English summary
  More than seven kannada films are expected to be released in August. Cinema is releasing in the background of Shravana maasa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X