»   » ಈ ವರ್ಷ ಮುಗಿಯಿತು, ಮುಂದಿನ ವರ್ಷ ಅಬ್ಬರಿಸಲಿರುವ ಅದ್ಧೂರಿ ಚಿತ್ರಗಳು

ಈ ವರ್ಷ ಮುಗಿಯಿತು, ಮುಂದಿನ ವರ್ಷ ಅಬ್ಬರಿಸಲಿರುವ ಅದ್ಧೂರಿ ಚಿತ್ರಗಳು

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ಡಿಸೆಂಬರ್ 29 ರಂದು ತೆರೆಕಾಣುತ್ತಿದೆ. ಇದು ವರ್ಷದ ಕೊನೆಯ ಸಿನಿಮಾ. ಈ ಮೂಲಕ 2017ನೇ ವರ್ಷಕ್ಕೆ ಸಂಪ್ರದಾಯವಾಗಿ ಗುಡ್ ಬೈ ಹೇಳಲಾಗುತ್ತಿದೆ. ಈ ವರ್ಷವೇ ಬಿಡುಗಡೆಯಾಗುತ್ತೆ ಎಂದು ಹೇಳಲಾಗಿದ್ದ ಹಲವು ಚಿತ್ರಗಳು ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಆಗಿದೆ. ಅದರ ಜೊತೆಗೆ ಮತ್ತಷ್ಟು ದೊಡ್ಡ ಸಿನಿಮಾಗಳು ಪೈಪೋಟಿ ಮಾಡಲಿದೆ.

ಅಂಜನಿಪುತ್ರ ಮುಗಿತು ಪುನೀತ್ ಮುಂದಿನ ಸಿನಿಮಾ ಯಾವುದು? ದರ್ಶನ್ ಕುರುಕ್ಷೇತ್ರ ಯಾವಾಗ? ಶಿವಣ್ಣನ ನೆಕ್ಸ್ಟ್ ಚಿತ್ರ ಯಾವುದು? ಚಮಕ್ ನಂತರ ಗಣೇಶ್ ಯಾವಾಗ ಬರ್ತಾರೆ? ಸುದೀಪ್ ತೆರೆಮೇಲೆ ಕಾಣಿಸ್ತಾರೆ ಎಂಬುದು 2018ರ ಹೈಲೈಟ್.

2018 ರಲ್ಲಿ ಎಷ್ಟೇ ಸಿನಿಮಾ ಬಂದ್ರು, ಈ ಕೆಲವೊಂದು ಚಿತ್ರಗಳ ಅಬ್ಬರ, ಆಡಂಬರ ಮಾತ್ರ ಕಮ್ಮಿಯಾಗಲ್ಲ. ಯಾಕಂದ್ರೆ, ಮುಂದಿನ ವರ್ಷ ಈ ಚಿತ್ರಗಳದ್ದೇ ಹವಾ. ಹಾಗಿದ್ರೆ, ಹೊಸ ವರ್ಷದ ಮೊದಲ ಸಿನಿಮಾ ಯಾವುದು? ಮುಂದಿನ ವರ್ಷ ತೆರೆಮೇಲೆ ಅಬ್ಬರಿಸಲಿರುವ ಸ್ಟಾರ್ ನಟರ ಚಿತ್ರಗಳು ಯಾವುದು? ಎಂಬ ಪ್ರಶ್ನೆಗಳಿಗೆ ಉತ್ತರ ಮುಂದಿದೆ...

'ಬೃಹಸ್ಪತಿ' ಚಿತ್ರದಿಂದ ಆರಂಭ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಅಭಿನಯದ ಬೃಹಸ್ಪತಿ ಚಿತ್ರ ಜನವರಿ 5 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ 2018ನೇ ವರ್ಷದ ಸ್ಯಾಂಡಲ್ ವುಡ್ ಆರಂಭವಾಗುತ್ತಿದೆ. ಇದು ಮುಂದಿನ ವರ್ಷದ ಮೊದಲ ಸಿನಿಮಾ.

ಈ ವರ್ಷ ಅತಿ ಹೆಚ್ಚು ಸೌಂಡ್ ಮಾಡಿದ ಡೈಲಾಗ್ ಯಾವುದು?

ಗುಮ್ಮೋಕೆ ಬರ್ತೈತೆ 'ಟಗರು'

ಹ್ಯಾಟ್ರಿಕ್ ಹೀರೋ ಅಭಿನಯದ 'ಟಗರು' ಈ ವರ್ಷವೇ ರಿಲೀಸ್ ಆಗಬೇಕಿತ್ತು. ಅದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಿಂದ ಜನವರಿ ಅಂತ್ಯದಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಶಿವಣ್ಣನ ಮುಂದಿನ ವರ್ಷದ ಚಿತ್ರಗಳಲ್ಲಿ ಟಗರು ಮೊದಲ ಸಿನಿಮಾವಾಗಲಿದೆ.

ದರ್ಶನ್ ಕುರುಕ್ಷೇತ್ರ

ಮುಂದಿನ ಚಿತ್ರಪ್ರೇಮಿಗಳ ಕಣ್ಣು ದರ್ಶನ್ 'ಕುರುಕ್ಷೇತ್ರ' ಚಿತ್ರದ ಮೇಲೆ ಇದೆ. ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಸೋನು ಸೂದ್, ರವಿಶಂಕರ್ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿರುವ ಚಿತ್ರ 2018ರ ಬೆಸ್ಟ್ ಮೂಮೆಂಟ್ ಆಗಲಿದೆ. ಚಿತ್ರತಂಡ ಹೇಳಿರುವ ಪ್ರಕಾರ ಮಾರ್ಚ್ ತಿಂಗಳಲ್ಲಿ 'ಕುರುಕ್ಷೇತ್ರ' ತೆರೆಗೆ ಬರಲಿದೆ.

ಈ ವರ್ಷದಲ್ಲಿ ನಡೆದ 23 ವಿವಾದಗಳನ್ನ ಯಾರೂ ಮರೆಯಲ್ಲ

ರಾಜ್ ಅಭಿಮಾನಿ 'ಕನಕ'

ದುನಿಯಾ ವಿಜಯ್ ಅಭಿನಯದ ಕನಕ ಸಿನಿಮಾ ಡಿಸೆಂಬರ್ ನಲ್ಲಿ ಬರುತ್ತೆ ಎನ್ನಲಾಗಿತ್ತು. ಆದ್ರೆ, ಚಿತ್ರಕ್ಕೆ ಇನ್ನು ಸೆನ್ಸಾರ್ ಆಗಿಲ್ಲ. ಹೀಗಾಗಿ, ಜನವರಿ ಅಂತಿಮವಾರದಲ್ಲಿ ಬಿಗ್ ಸ್ಕ್ರೀನ್ ಮೇಲೆ ಡಾ ರಾಜ್ ಅಭಿಮಾನಿಯಾಗಿ ವಿಜಿ ಅಬ್ಬರಿಸಲಿದ್ದಾರೆ.

ಸ್ಟಾರ್ ಗಳ 'ದಿ ವಿಲನ್'

ಸಿನಿಮಾ ಸೆಟ್ಟೇರಿದಾಗನಿಂದಲೂ ಕುತೂಹಲ ಮೂಡಿಸಿರುವ ದಿ ವಿಲನ್ ಸಿನಿಮಾ 2018ರಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ನೀಡಲು ತಯಾರಿ ನಡೆಸಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆ.

ಯಶ್ 'ಕೆಜಿಎಫ್'

ಎಲ್ಲ ಅಂದುಕೊಂಡಂತೆ ಆಗಿದ್ದರೇ, ರಾಕಿಂಗ್ ಸ್ಟಾರ್ ಯಶ್ ಅಭಿನಯದಲ್ಲಿ ಮೂಡಿ ಬರ್ತಿರುವ ಕೆಜಿಎಫ್ ಚಿತ್ರ ಡಿಸೆಂಬರ್ ನಲ್ಲಿ ತೆರೆಕಾಣಬೇಕಿತ್ತು. ಆದ್ರೆ, ಶೂಟಿಂಗ್ ಮುಗಿಯದ ಕಾರಣ ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಆಗಿದೆ. 2018ನೇ ವರ್ಷದ ದೊಡ್ಡ ಸಿನಿಮಾಗಳಲ್ಲಿ ಕೆಜಿಎಫ್ ಚಿತ್ರವೂ ಒಂದಾಗಿದ್ದು, ಅಭಿಮಾನಿಗಳು ಕಾಯುತ್ತಿದ್ದಾರೆ.

ಹಂಬಲ್ ಪೊಲಿಟಿಷಿಯನ್ ನೊಗರಾಜ್

ಟಿವಿ ನಿರೂಪಕ ಕಮ್ ನಟ ಡ್ಯಾನಿಶ್ ಅಭಿನಯದ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಸಿನಿಮಾ ಜನವರಿ 12ರಂದು ಬಿಡುಗಡೆಯಾಗುತ್ತಿದೆ. ಟ್ರೈಲರ್ ಮೂಲಕ ಜನರಲ್ಲಿ ವಿಶೇಷವಾದ ಒಲವು ಮೂಡಿಸಿರುವ ಈ ಚಿತ್ರ ಬೆಸ್ಟ್ ಎಂಟರ್ ಟೈನರ್ ಆಗಲಿದೆ ಎಂಬ ಭರವಸೆ ಇದೆ.

ಪ್ರೇಮ ಬರಹ

ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಕನ್ನಡದಲ್ಲಿ ಮೊಟ್ಟ ಮೊದಲ ಭಾರಿಗೆ ಅಭಿನಯಿಸಿರುವ ಪ್ರೇಮ ಬರಹ ಸಿನಿಮಾ ಬಿಡುಗಡೆ ವಿಚಾರದಲ್ಲಿ ಕುತೂಹಲ ಹೆಚ್ಚಿಸುತ್ತಲೇ ಇದೆ. 2017ರಲ್ಲೇ ತೆರೆಕಾಣಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಆಗಲಿಲ್ಲ. ಈಗ ಹೊಸ ವರ್ಷದ ಆರಂಭದಲ್ಲಿ ತೆರೆ ಮೇಲೆ ಬರುವ ಸಾಧ್ಯತೆ ಇದೆ.

ಶಶಾಂಕ್ ಜೊತೆ ಪುನೀತ್ ಸಿನಿಮಾ

'ಅಂಜನಿಪುತ್ರ' ಚಿತ್ರದ ನಂತರ ಪುನೀತ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಹಲವರಿಗೆ ಕುತೂಹಲವಾಗಿದೆ. ನಿರ್ದೇಶಕ ಶಶಾಂಕ್ ಅವರ ಪ್ರಾಜೆಕ್ಟ್ ನಲ್ಲಿ ಸಿನಿಮಾ ಆರಂಭವಾಗಲಿದೆ. ಸದ್ಯಕ್ಕೆ ಸಿನಿಮಾ ಇನ್ನೆ ಸೆಟ್ಟೇರಿಲ್ಲ. ಬಹುಶಃ 2018ರಲ್ಲೇ ಬಿಡುಗಡೆಯಾಗಬಹುದು.

ಈ ವರ್ಷ ಕನ್ನಡದ 'ಸ್ಟಾರ್' ನಟಿಯ ಪಟ್ಟ ಯಾರಿಗೆ?

ರಕ್ಷಿತ್ ಶೆಟ್ಟಿಯ 'ಶ್ರೀಮನ್ನಾರಾಯಣ'

ಕಳೆದ ವರ್ಷದ ಅಂತ್ಯದಲ್ಲಿ 'ಕಿರಿಕ್ ಪಾರ್ಟಿ' ಮಾಡಿದ್ದ ರಕ್ಷಿತ್ ಶೆಟ್ಟಿ ಈ ವರ್ಷ ತೆರೆ ಮೇಲೆ ಬರಲೇ ಇಲ್ಲ. ಆದ್ರೆ, ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ರಕ್ಷಿತ್, 'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನ ಆರಂಭಿಸಿದ್ದರು. ಈ ಸಿನಿಮಾ 2018ರಲ್ಲಿ ತೆರೆಗೆ ಬರಲಿದೆ.

ಜಗ್ಗೇಶ್-8MM

ನವರಸ ನಾಯಕ ಜಗ್ಗೇಶ್ ಅವರು '8MM' ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿದೆ. ಸದ್ಯ, ಚಿತ್ರೀಕರಣವೂ ಅಂತ್ಯವಾಗಿದ್ದು, ಆದಷ್ಟೂ ಬೇಗ ಬಿಡುಗಡೆಯಾಗಲಿದೆ.

ಲೈಫ್ ಜೊತೆ ಒಂದು ಸೆಲ್ಫಿ

ಚೌಕ ಚಿತ್ರದ ನಂತರ ಪ್ರಜ್ವಲ್ ದೇವರಾಜ್ ಮತ್ತು ನೆನಪಿರಲಿ ಪ್ರೇಮ್ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾದಲ್ಲಿ ತೊಡಗಿಕೊಂಡಿದ್ದು, 2018ರಲ್ಲಿ ತೆರೆಗೆ ಕಾಣಲಿದೆ. ಹರಿಪ್ರಿಯಾ ನಾಯಕಿಯಾಗಿದ್ದು, ದಿನಕರ್ ತೂಗುದೀಪ್ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿದ್ದಾರೆ.

ಗಣೇಶ್ 'ಆರೆಂಜ್'

ಈ ವರ್ಷದ ಕೊನೆಯ ಸಿನಿಮಾ ಗಣೇಶ್ ಅಭಿನಯದ ಚಮಕ್. ಈ ಚಿತ್ರದ ನಂತರ ಗಣೇಶ್ ಆರೆಂಜ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಮುಂದಿನ ವರ್ಷ ಈ ಚಿತ್ರದ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ.

ಧ್ರುವ ಸರ್ಜಾ 'ಪೊಗರು'

ಭರ್ಜರಿ ಚಿತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಧ್ರುವ ಸರ್ಜಾ ಪೊಗರು ಚಿತ್ರವನ್ನ ಆರಂಭಿಸಿದ್ದಾರೆ. ಮುಂದಿನ ವರ್ಷದ ಅಂತ್ಯದಲ್ಲಿ ಪೊಗರು ಬರಬಹುದು. ನಂದ ಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

2017ರಲ್ಲಿ ಹವಾ ಸೃಷ್ಟಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟರು

ಚಿರಂಜೀವಿ ಸರ್ಜಾ 'ಸಂಹಾರ'

ನಟ ಚಿರಂಜೀವಿ ಸರ್ಜಾ ಅಭಿನಯದ ಎರಡು ಚಿತ್ರಗಳು ಈ ಮುಂದಿನ ವರ್ಷದಲ್ಲಿ ತೆರೆಕಾಣುವುದು ಬಹುತೇಕ ಖಚಿತ. ಗುರುದೇಶಪಾಂಡೆ ನಿರ್ದೇಶನದ ಸಂಹಾರ ಮತ್ತು ಕೆ.ಎಂ ಚೈತನ್ಯ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಅಮ್ಮ ಐ ಲವ್ ಯೂ' ಚಿತ್ರವೂ ತೆರೆಗೆ ಬರಲಿದೆ.

English summary
Most Expected movies releasing in kannada next year 2018. Shiva rajkumar's Tagaru, Darshan's Kurukshetra, Sudeep's The villain, Yash's Kgf, Duniya Vijay's kanaka and other movies have been releasing on 2018.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X