»   » ಜುಲೈ 12 ಗೋಲ್ಡನ್ ಸ್ಟಾರ್ ಗಣೇಶ್ ಗೆ ಡಬಲ್ ಧಮಾಕ

ಜುಲೈ 12 ಗೋಲ್ಡನ್ ಸ್ಟಾರ್ ಗಣೇಶ್ ಗೆ ಡಬಲ್ ಧಮಾಕ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ಮುಗುಳುನಗೆ' ಹಲವು ವಿಷಯಗಳಿಗೆ ಕುತೂಹಲ ಹೆಚ್ಚಿಸಿದೆ. ಸಂಪೂರ್ಣ ಶೂಟಿಂಗ್ ಮುಗಿಸಿರುವ 'ಮುಗುಳುನಗೆ' ಈಗ ಆಡಿಯೋ ಬಿಡುಗಡೆಗೆ ಸಜ್ಜಾಗಿದೆ. ಈ ಮೂಲಕ ಜುಲೈ 12 ಗೋಲ್ಡನ್ ಸ್ಟಾರ್ ಗಣೇಶ್ ಗೆ ಡಬಲ್ ಧಮಾಕ ಆಗಲಿದೆ.

ಈಗಾಗಲೇ 'ಮುಗುಳುನಗೆ' ಆಡಿಯೋ ಹಕ್ಕನ್ನ 'ಡಿ ಬೀಟ್ಸ್' ದುಬಾರಿ ಬೆಲೆಗೆ ಖರೀದಿಸಿದ್ದು, ಜುಲೈ 12 ರಂದು ಅದ್ಧೂರಿಯಾಗಿ ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ವಿಶೇಷ ಅಂದ್ರೆ ಅದೇ ದಿನ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರ ಹುಟ್ಟುಹಬ್ಬವೂ ಆಗಿದೆ.

ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ಕಥೆ ಏನು.?

Mugulunage Audio Release July 12

ಇನ್ನು ಆಡಿಯೋ ಬಿಡುಗಡೆಗೂ ಮುಂಚೆ ಯೋಗರಾಜ್ ಭಟ್ ಬರೆದ ಜಿ.ಎಸ್.ಟಿ. ಕುರಿತಾದ 'ಹೊಡಿ 9' ಹಾಡು ಸೂಪರ್ ಹಿಟ್ ಆಗಿದೆ. ಭಟ್ಟರ ಈ ಹಾಡಿಗೆ ವಿ. ಹರಿಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದುನಿಯಾ ವಿಜಯ್ ಧ್ವನಿಯಾಗಿದ್ದರು. 'ಮುಗುಳುನಗೆ' ಚಿತ್ರದ 'ಹೊಡಿ 9' ಹಾಡಿನ ಟ್ಯೂನ್ ಬಳಸಿ ಜಿ.ಎಸ್.ಟಿ ಹಾಡು ಸಂಯೋಜಿಸಲಾಗಿತ್ತು. ಜುಲೈ 10 ರಂದು ಹುಬ್ಬಳ್ಳಿಯಲ್ಲಿ 'ಮುಗುಳುನಗೆ' ಚಿತ್ರದ 'ಹೊಡಿ 9' ಹಾಡಿನ ವಿಡಿಯೋವನ್ನ ಚಿತ್ರತಂಡ ಬಿಡುಗಡೆ ಮಾಡಲಿದೆಯಂತೆ.

ದಾಖಲೆ ಬೆಲೆಗೆ ಮಾರಾಟ ಆಗಿದೆ 'ಮುಗುಳು ನಗೆ' ಆಡಿಯೋ ರೈಟ್ಸ್

Mugulunage Audio Release July 12

ಗಣೇಶ್ ಜೋಡಿಯಾಗಿ ಚಿತ್ರದಲ್ಲಿ ಒಟ್ಟು ನಾಲ್ಕು ನಾಯಕಿಯರಿದ್ದು, 'ಸಿದ್ಧಾರ್ಥ್' ಖ್ಯಾತಿಯ ಅಪೂರ್ವ ಆರೋರ, ಆಶಿಕಾ, ನಿಖಿತಾ ನಾರಾಯಣ್ ಮತ್ತು ವಿಶೇಷ ಪಾತ್ರದಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಜಯಂತ್ ಕಾಯ್ಕಿಣಿ ಹಾಗೂ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಸೈಯದ್ ಸಲಾಂ ನಿರ್ಮಾಣ ಮಾಡಿದ್ದು, ಯೋಗರಾಜ್ ಭಟ್ ಹಾಗೂ ಗಣೇಶ್ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಇನ್ನು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 'ಮುಗುಳುನಗೆ' ಚಿತ್ರವನ್ನ ಆಗಸ್ಟ್ ತಿಂಗಳಲ್ಲಿ ತೆರೆಗೆ ತರುವ ತಯಾರಿ ನಡೆದಿದೆಯಂತೆ.

English summary
Kannada Actor Ganesh Starrer Mugulunage Movie Audio Release on July 12 and Movie Release on August. The Movie Directed bY Yograj Bhat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada