»   » 'ಮಮ್ಮಿ ಸೇವ್ ಮಿ' ಚಿತ್ರತಂಡದ ಕಡೆಯಿಂದ ಬಂದ ಇಂಟ್ರೆಸ್ಟಿಂಗ್ ನ್ಯೂಸ್

'ಮಮ್ಮಿ ಸೇವ್ ಮಿ' ಚಿತ್ರತಂಡದ ಕಡೆಯಿಂದ ಬಂದ ಇಂಟ್ರೆಸ್ಟಿಂಗ್ ನ್ಯೂಸ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಮಮ್ಮಿ ಸೇವ್ ಮಿ' ಚಿತ್ರ ಡಿಸೆಂಬರ್ 2 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

'ಮಮ್ಮಿ ಸೇವ್ ಮಿ' ಬಿಡುಗಡೆ ಆಗುವ ಮುನ್ನವೇ ಚಿತ್ರದ ಸೀಕ್ಷೆಲ್ ಗೆ ಸಿನಿಮಾ ತಂಡ ಪ್ಲಾನ್ ಮಾಡಿದೆ ಎಂಬ ಇಂಟ್ರೆಸ್ಟಿಂಗ್ ನ್ಯೂಸ್ ಸದ್ಯ ರಿವೀಲ್ ಆಗಿದೆ.

ಮೊದಲು ಸ್ಕ್ರಿಪ್ಟ್ ಸಿದ್ಧವಾಗಿದ್ದು 'ಮಮ್ಮಿ-2'

'ಮಮ್ಮಿ ಸೇವ್ ಮಿ' ಚಿತ್ರ ಶುರು ಆಗುವ ಮುನ್ನವೇ 'ಮಮ್ಮಿ-2' ಚಿತ್ರದ ಸ್ಕ್ರಿಪ್ಟ್ ರೆಡಿ ಮಾಡಿಟ್ಟುಕೊಂಡಿದ್ದರಂತೆ ಯುವ ನಿರ್ದೇಶಕ ಲೋಹಿತ್. ಆದ್ರೆ ಬಜೆಟ್ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ 'ಮಮ್ಮಿ-2' ಪ್ರೀಕ್ವೆಲ್ ಕೈಗೆತ್ತುಕೊಂಡರಂತೆ ಡೈರೆಕ್ಟರ್ ಲೋಹಿತ್. ['ಮಮ್ಮಿ-ಸೇವ್ ಮಿ' ಚಿತ್ರದ ರಿಲೀಸ್ ಡೇಟ್ ಕನ್ ಫರ್ಮ್]

'ಮಮ್ಮಿ-2' ಚಿತ್ರಕ್ಕೆ ಬಂಡವಾಳ ಹಾಕಲು ನಿರ್ಮಾಪಕರು ರೆಡಿ

'ಮಮ್ಮಿ ಸೇವ್ ಮಿ' ಚಿತ್ರದ ಫಸ್ಟ್ ಕಾಪಿ ನೋಡಿ ನಿರ್ಮಾಪಕ ಕೆ.ರವಿಕುಮಾರ್ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ 'ಮಮ್ಮಿ-2' ಚಿತ್ರಕ್ಕೂ ಬಂಡವಾಳ ಹಾಕಲು ಕೆ.ರವಿಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. [ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!]

ವಿದೇಶದಲ್ಲಿ ಚಿತ್ರೀಕರಣ

ಬಹುತೇಕ ವಿದೇಶದಲ್ಲಿಯೇ 'ಮಮ್ಮಿ-2' ಚಿತ್ರದ ಚಿತ್ರೀಕರಣ ನಡೆಯಲಿದ್ಯಂತೆ. 'ಮಮ್ಮಿ ಸೇವ್ ಮಿ' ಸಿನಿಮಾದಲ್ಲಿ ನಟಿಸಿರುವ ಯುವಿನಾ ಪಾರ್ಥವಿ 'ಮಮ್ಮಿ-2' ಚಿತ್ರದಲ್ಲಿ ಯುವತಿ ಆಗಿರುತ್ತಾಳೆ. ['ಮಮ್ಮಿ' ಚಿತ್ರತಂಡದಿಂದ ಹೊರ ಬಿದ್ದಿರುವ 'ಸೂಪರ್' ಸುದ್ದಿ ಇದೇ.!]

ನಿರ್ದೇಶಕ ಲೋಹಿತ್ ಏನಂತಾರೆ.?

''ಹತ್ತು ವರ್ಷಗಳ ನಂತರ ನಡೆಯುವ ಕಥೆ ಇದಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ಯುವಿನಾ ವಿದೇಶಕ್ಕೆ ತೆರಳಿದಾಗ ಸಾಗುವ ಕಥೆಯನ್ನ 'ಮಮ್ಮಿ-2' ಹೊಂದಿದೆ'' ಎನ್ನುತ್ತಾರೆ ನಿರ್ದೇಶಕ ಲೋಹಿತ್.

ಹಾರರ್-ಥ್ರಿಲ್ಲರ್ ಸಿನಿಮಾ 'ಮಮ್ಮಿ ಸೇವ್ ಮಿ'

ಹಾರರ್-ಥ್ರಿಲ್ಲಿಂಗ್ ಅಂಶಗಳು ಇರುವ 'ಮಮ್ಮಿ ಸೇವ್ ಮಿ' ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಏಳು ತಿಂಗಳ ಗರ್ಭಿಣಿಯ ಪಾತ್ರ ನಿರ್ವಹಿಸಿದ್ದಾರೆ. ಪ್ರಿಯಾಂಕಾ ಮಗಳ ಪಾತ್ರದಲ್ಲಿ ಪುಟಾಣಿ ಯುವಿನಾ ಪಾರ್ಥವಿ ಅಭಿನಯಿಸಿದ್ದಾರೆ. ವಿದೇಶದಲ್ಲಿ ನಡೆದ ಸತ್ಯ ಘಟನೆಯೊಂದರ ಆಧಾರಿತ ಚಿತ್ರವೇ 'ಮಮ್ಮಿ ಸೇವ್ ಮಿ'. ['ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ ಜೊತೆ ಸಣ್ಣ ಮಾತುಕತೆ]

English summary
Much before the shooting of 'Mummy Save Me', Director Lohith had scripted the sequel 'Mummy-2'. Kannada Actress Priyanka Upendra starrer Kannada Movie 'Mummy Save Me' will release on December 2nd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada