»   » ಚಂದನ್ ಶೆಟ್ಟಿಗೆ ಬಂಪರ್ ಆಫರ್ ಕೊಟ್ಟ ನಿರ್ಮಾಪಕ ಮುನಿರತ್ನ

ಚಂದನ್ ಶೆಟ್ಟಿಗೆ ಬಂಪರ್ ಆಫರ್ ಕೊಟ್ಟ ನಿರ್ಮಾಪಕ ಮುನಿರತ್ನ

Posted By:
Subscribe to Filmibeat Kannada
ಚಂದನ್ ಶೆಟ್ಟಿಗೆ ಸಿಕ್ತು ಬಂಪರ್ ಆಫರ್ | FIlmibeat Kannada

ಕನ್ನಡ ರಾಪರ್ ಚಂದನ್ ಶೆಟ್ಟಿ 'ಬಿಗ್ ಬಾಸ್' ಪಟ್ಟ ಗೆದ್ದ ನಂತರ ಅದೃಷ್ಟ ಖುಲಾಯಿಸಿದೆ. 'ಬಿಗ್ ಬಾಸ್' ವಿನ್ ಆದ ತಕ್ಷಣ ಚಂದನ್ ಡೈರೆಕ್ಟ್ ಆಗಿ ಕಲರ್ಸ್ ಸೂಪರ್ ವಾಹಿನಿಯ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮದ ತೀರ್ಪಗಾರರ ಖುರ್ಚಿ ಮೇಲೆ ಕುಳಿತರು.

ಸದ್ಯ ಚಂದನ್ ಶೆಟ್ಟಿಗೆ ಡಿಮ್ಯಾಂಡ್ ಜೋರಾಗಿದೆ. ಸ್ಟಾರ್ ನಟನ ಮಟ್ಟಕ್ಕೆ ಚಂದನ್ ಶೆಟ್ಟಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನೂ ಚಂದನ್ ಗಾಗಿ ಈಗ ಅನೇಕ ದೊಡ್ಡ ದೊಡ್ಡ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಸ್ಟಾರ್ ನಟ ಸಿನಿಮಾಗೆ ಚಂದನ್ ಮ್ಯೂಸಿಕ್ ನೀಡುವ ಸುದಿ ಇದೆ. ಅದರ ಜೊತೆಗೆ ಈಗ ಕನ್ನಡದ ನಿರ್ಮಾಪಕ ಮುನಿರತ್ನ ಕೂಡ ಚಂದನ್ ಗೆ ಬಂಪರ್ ಆಫರ್ ನೀಡಿದ್ದಾರೆ. ಮುಂದೆ ಓದಿ...

ಮುನಿರತ್ನ ಆಫರ್

ಮುನಿರತ್ನ ಅವರು ತಮ್ಮ ನಿರ್ಮಾಣದಲ್ಲಿ ಮುಂದೆ ಬರುವ ಒಂದು ಸಿನಿಮಾಗೆ ಸಂಗೀತ ನೀಡುವಂತೆ ಚಂದನ್ ಶೆಟ್ಟಿಗೆ ಮುನಿರತ್ನ ಒಂದು ಅವಕಾಶ ನೀಡಿದ್ದಾರೆ.

ಶಿವರಾತ್ರಿಯ ಕಾರ್ಯಕ್ರಮದಲ್ಲಿ

ಮುನಿರತ್ನ ಇತ್ತೀಚಿಗೆ ಶಿವರಾತ್ರಿ ಪ್ರಯುಕ್ತ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಮುನಿರತ್ನ, ಚಂದನ್ ಅವರಿಗೆ ಒಂದು ಸಿನಿಮಾ ನೀಡುವುದಾಗಿ ಹೇಳಿದ್ದಾರೆ.

ಸಂತಸದಲ್ಲಿ ಚಂದನ್

ನಿರ್ಮಾಪಕ ಮುನಿರತ್ನ ಕಡೆಯಿಂದ ಬಂದ ಈ ದೊಡ್ಡ ಆಫರ್ ಅನ್ನು ಚಂದನ್ ಶೆಟ್ಟಿ ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದಾರೆ.

ದರ್ಶನ್ 52ನೇ ಸಿನಿಮಾ

ನಟ ದರ್ಶನ್ ಅವರ 52ನೇ ಚಿತ್ರಕ್ಕೆ ಸಹ ಚಂದನ್ ಶೆಟ್ಟಿ ಮ್ಯೂಸಿಕ್ ಡೈರೆಕ್ಟರ್ ಎನ್ನಲಾಗಿದೆ. ಈ ಸಿನಿಮಾಗೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳ್ತಾರಂತೆ.

ಅವಕಾಶ ಯಶ್ ಸಿನಿಮಾ

ದರ್ಶನ್ ಮಾತ್ರವಲ್ಲದೆ ನಟ ಯಶ್ ಜೊತೆಗೆ ಕೂಡ ಒಂದು ಸಿನಿಮಾವನ್ನು ಚಂದನ್ ಶೆಟ್ಟಿ ಮಾಡುತ್ತಾರೆ ಎಂಬ ಸುದ್ದಿ ಇದೆ. ರಾಕಿಂಗ್ ಸ್ಟಾರ್ ರಾಪರ್ ಸ್ಟಾರ್ ಗೆ ಒಂದು ಅವಕಾಶ ನೀಡಿದ್ದಾರಂತೆ.

English summary
Kannada producer Munirathna offered Bigg Boss kannada season 5 winner Chandan Shetty to compose music to his next movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X