»   »  ಅಯ್ಯೋ ನನ್ನ ಹೆಸರು ಅಂದ್ರಿತಾ ರೇ ಅಲ್ಲ ಐಂದ್ರಿತಾ!

ಅಯ್ಯೋ ನನ್ನ ಹೆಸರು ಅಂದ್ರಿತಾ ರೇ ಅಲ್ಲ ಐಂದ್ರಿತಾ!

Subscribe to Filmibeat Kannada

ತನ್ನ ಹೆಸರನ್ನು ಎಲ್ಲರೂ ಅಂದ್ರಿತಾ ರೇ ಎಂದು ತಪ್ಪಾಗಿ ಕರೆಯುತ್ತಿದ್ದಾರೆ ಎಂದು ಚಿಗರೆ ಕಂಗಳ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ನೀವು ತಿಳಿದಿರುವಂತೆ ನನ್ನ ಹೆಸರು ಅಂದ್ರಿತಾ ಅಲ್ಲ ಐಂದ್ರಿತಾ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಈ ವಿಷಯವನ್ನು ಸಾಕಷ್ಟು ಸಲ ಸ್ಪಷ್ಟಪಡಿಸಿದ್ದೇನೆ ಎನ್ನುತ್ತಾರೆ ಐಂದ್ರಿತಾ.

ನಾನು ಅಭಿನಯಿಸಿರುವ ಚಿತ್ರಗಳ ಪ್ರೊಮೋಗಳಲ್ಲೂ ನನ್ನ ಹೆಸರನ್ನು ಅಂದ್ರಿತಾ ಎಂದೇ ಬರೆಯುತ್ತಿದ್ದಾರೆ. ಎಲ್ಲಾ ಮಾಧ್ಯಮಗಳಲ್ಲೂ ಹಾಗೆ ಬರೆಯುತ್ತಿದ್ದಾರೆ. ನಾನು ಅಂದ್ರಿತಾ ಅಲ್ಲ ಐಂದ್ರಿತಾ ಕಣ್ರೀ ಎಂದು ಅವರು ಮತ್ತೊಮ್ಮೆ ತಮ್ಮ ಹೆಸರಿನ ಬಗೆಗಿನ ಗೊಂದಲವನ್ನು ನಿವಾರಿಸಿದ್ದಾರೆ.

ಈ ವಿಷಯವಾಗಿ ಸಿನಿಮಾ ಮಂದಿಗೆ ನಾನು ಈಗಾಗಲೇ ಸಾಕಷ್ಟು ಬಾರಿ ತಿಳಿಸಿದ್ದೇನೆ. ಹಾಗಿದ್ದೂ ಪುನಃ ಅದೇ ತಪ್ಪು ಮಾಡುತ್ತಿದ್ದಾರೆ. ಹಾಗಾಗಿ ನಾನು ಈ ವಿಷಯವನ್ನು ಮರೆತೇ ಬಿಟ್ಟಿದ್ದೇನೆ ಎನ್ನುತ್ತಾರೆ ಮಿಂಚುಳ್ಳಿ ಚೆಲುವೆ ಐಂದ್ರಿತಾ. ಇನ್ನು ಮುಂದಾದರೂ ತನ್ನನ್ನು ಐಂದ್ರಿತಾ ಎಂದು ಕರೆಯಿರಿ. ಖಂಡಿತ ನಾನು ಖುಷಿಪಡುತ್ತೇನೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada