For Quick Alerts
  ALLOW NOTIFICATIONS  
  For Daily Alerts

  ಗುಂಡಿನ ಮತ್ತು ಗಮ್ಮತ್ತಿನಲ್ಲಿ ಕನಸಿನರಾಣಿ ಮಾಲಾಶ್ರೀ

  By Rajendra
  |

  ನಟಿ ಮಾಲಾಶ್ರೀ ಅವರು ಮತ್ತೆ ಗುಂಡಿನ ಮತ್ತಿಗೆ ಶರಣಾಗಿದ್ದಾರೆ. ಇಪ್ಪತ್ತೈದು ವರ್ಷಗಳ ಹಿಂದೆ ಅವರು "ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು" ಎಂದು ತೂರಾಡುತ್ತಾ ಓಲಾಡುತ್ತಾ ಪಡ್ಡೆಹೈಕಳ ನಿದ್ದೆಗೆಡಿಸಿದ್ದರು. ಆಗಲೇ ಅವರು 'ಕನಸಿನರಾಣಿ'ಯಾಗಿ ಚಿತ್ರಪ್ರೇಮಿಗಳ ಹೃದಯ ಸಾಮ್ರಾಜ್ಯ ಅಲಂಕರಿಸಿದ್ದರು.

  'ನಂಜುಂಡಿ ಕಲ್ಯಾಣ' (1989) ಚಿತ್ರದ ಆ ಗುಂಡಿನ ಹಾಡು ಸಖತ್ ಕಿಕ್ ಕೊಟ್ಟಿತ್ತು. ಈಗ ಮತ್ತೊಮ್ಮೆ ಅದೇ ಹಾಡನ್ನು ರಿಮಿಕ್ಸ್ ಆಗಿ 'ಘರ್ಷಣೆ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ದಯಾಳ್ ಪದ್ಮನಾಭನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕಾಗಿ ಮತ್ತೆ "ಒಳಗೆ ಸೇರಿದರೆ ಗಂಡು.." ಹಾಡನ್ನು ಬಳಸಿಕೊಳ್ಳಲಾಗಿದೆ. [ಹೊಸ ದಾಖಲೆ ಬರೆದ ಕನಸಿನ ರಾಣಿ ಮಾಲಾಶ್ರೀ]

  ಈ ಹಾಡನ್ನು ಈಗಾಗಲೆ ಗೋವಾದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಗೋವಾ ಅಂದರೇನೇ ಕಿಕ್ ಇನ್ನು ಗುಂಡಿನ ಕಿಕ್ಕು ಹೇಗಿರುತ್ತದೋ ಏನೋ ಎಂಬ ಕುತೂಹಲವೂ ಚಿತ್ರರಸಿಕರಿಗಿದೆ. ಇದೇ ಡಿಸೆಂಬರ್ 27ಕ್ಕೆ ಚಿತ್ರ ತೆರೆಕಾಣುತ್ತಿದೆ. ಈ ರಿಮಿಕ್ಸ್ ಹಾಡು ಮತ್ತೆ ಮಂಜುಳಾ ಗುರುರಾಜ್ ಕಂಠಸಿರಿಯಲ್ಲಿ ಹೊರಹೊಮ್ಮಿದೆ.

  ಈ ಹಾಡಿನಲ್ಲಿ ಮಾಲಾಶ್ರೀ ಜೊತೆಗೆ ರೂಪಿಕಾ ಸಹ ಅಭಿನಯಿಸಿದ್ದಾರೆ. ಆಕ್ಷನ್ ಕ್ರೈಮ್ ಥ್ರಿಲ್ಲರ್ ಆದ ಈ ಚಿತ್ರದಲ್ಲಿ ಮಾಲಾಶ್ರೀ ಮತ್ತೊಮ್ಮೆ ಖಾಕಿ ಖದರ್ ತೋರಲಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ರಾಜೇಶ್ ಕಟ ಛಾಯಾಗ್ರಹಣವಿದೆ.

  ಚಿತ್ರದ ಪಾತ್ರವರ್ಗದಲ್ಲಿ ಆಶಿಶ್ ವಿದ್ಯಾರ್ಥಿ, ನೈನಾ ಪುಟ್ಟಸ್ವಾಮಿ, ಸಂದೀಪ್, ಮುನಿ, ಕೀರ್ತಿ, ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಕಾಶಿ, ಅಜಯ್ ರಾಜ್, ಗುರುರಾಜ್ ಹೊಸಕೋಟೆ ಮುಂತಾದವರಿದ್ದಾರೆ. (ಏಜೆನ್ಸೀಸ್)

  English summary
  'Olage Seridare Gundu' song from 'Nanjundi Kalyana' (1989) has been remixed it movie 'Gharshane', Malashree as in lead, which is likely to be released on the 27th of December. The song has been sung by Manjula Gururaj again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X