twitter
    For Quick Alerts
    ALLOW NOTIFICATIONS  
    For Daily Alerts

    ನಟ ಭೈರವ ವಜ್ರಮುನಿ ಸವಿನೆನಪು...ಚಿತ್ರ ನಮನ

    By Rajendra
    |

    ನಟ ಭೈರವ, ನಟ ಭಯಂಕರ ಎಂಬ ಮಾತುಗಳು ವಜ್ರಮುನಿ ಅವರಿಗೆ ಬಿಟ್ಟರೆ ಇನ್ಯಾವ ನಟನಿಗೂ ಅಷ್ಟಾಗಿ ಒಪ್ಪಲ್ಲ ಅನ್ನಿಸುತ್ತದೆ. ಕನ್ನಡ ಚಿತ್ರರಂಗದ ಖಳನಟರಲ್ಲೇ ವಿಶಿಷ್ಟ ಛಾಪು ಮೂಡಿಸಿದ ನಟ. ತೆರೆಯ ಮೇಲೆ ಅವರ ರೋಷಾವೇಶ, ತೀಕ್ಷ್ಣ ನೋಟ, ಕಂಚಿನ ಕಂಠ, ಪ್ರಚಂಡ ಅಭಿನಯ, ರಭಸವಾದ ಸಂಭಾಷಣೆಗೆ ತಲೆದೂಗದರುಂಟೆ?

    ಕನ್ನಡ ಕುಲಕೋಟಿಯನ್ನು ವಜ್ರಮುನಿ ಅಗಲಿ ಇದೇ ಜನವರಿ 5, 2013ಕ್ಕೆ ಏಳು ವರ್ಷಗಳು. ವಜ್ರಮುನಿ ಅವರು ಖಳನಟನಾಗ ಬೇಕು ಎಂದು ಬಯಸಿ ಚಿತ್ರರಂಗಕ್ಕೆ ಬಂದವರಲ್ಲ. ತಾನೊಬ್ಬ ಮಹಾನ್ ನಾಯಕ ನಟನಾಗಬೇಕೆಂದು ಬಯಸಿದ್ದರು. ಆದರೆ ಅವರು ಬಯಸಿದಂತೆ ಆಗಲಿಲ್ಲ.

    ನಾಯಕ ನಟನಾಗಲು ಬಂದವ ಖಳನಟನಾದ

    ನಾಯಕ ನಟನಾಗಲು ಬಂದವ ಖಳನಟನಾದ

    ಪ್ರೇಕ್ಷಕರು ನಿಮ್ಮನ್ನು ಖಳನಟನನ್ನಾಗಿ ನೋಡಲು ಇಷ್ಟಪಡುತ್ತಾರೆ. ನಿಮಗೆ ನಾಯಕನ ನಟನ ಪಾತ್ರ ಅಷ್ಟಾಗಿ ಒಪ್ಪಲ್ಲ ಎಂದು ನಿರ್ಮಾಪಕರು, ನಿರ್ದೇಶಕರು ನಿರ್ಧರಿಸಿಬಿಟ್ಟಿದ್ದರು. ವಜ್ರಮುನಿ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಅವರ್ಯಾರು ಇರಲಿಲ್ಲ. ಅನಿವಾರ್ಯವಾಗಿ ಅವರು ಖಳನಟನಾಗಿ ಬೆಳ್ಳಿತೆರೆ ಮೇಲೆ ಅಬ್ಬರಿಸಬೇಕಾಯಿತು.

    ಭಕ್ತ ಕುಂಬಾರ ಚಿತ್ರದಲ್ಲಿ ಮನಮಿಡಿಯುವ ಪಾತ್ರ

    ಭಕ್ತ ಕುಂಬಾರ ಚಿತ್ರದಲ್ಲಿ ಮನಮಿಡಿಯುವ ಪಾತ್ರ

    ಅಣ್ಣಾವ್ರ ಜೊತೆಗಿನ 'ಭಕ್ತ ಕುಂಬಾರ' ಚಿತ್ರದಲ್ಲಿ ವಜ್ರಮುನಿ ಅವರ ಅಭಿನಯ ಎಂಥಹ ಕಠಿಣ ಹೃದಯದರ ಕಣ್ಣಲ್ಲೂ ನೀರು ಭರಿಸುತ್ತದೆ. ಇಂದು ತಮ್ಮ ಮನೆಗೆ ಅತಿಥಿಗಳು ಬರುತ್ತಾರೆ. ಮನೆಯಲ್ಲಿ ಏನೇನು ಇಲ್ಲ. ಏನು ಮಾಡುವುದು ಎಂದು ಚಡಪಡಿಸುತ್ತಿದ್ದ ಸಂದರ್ಭದಲ್ಲಿ ವಜ್ರಮುನಿ ಅವರು ಬಂಡಿ ತುಂಬ ಧವಸ ಧಾನ್ಯ, ಹಣ್ಣು ಹಂಪಲು ತುಂಬಿಕೊಂಡು ಬರುವ ಸನ್ನಿವೇಶ ಅದು.

    ಅದೆಷ್ಟು ಲೈಕ್ಸ್, ಇನ್ನೆಷ್ಟು ಟ್ವೀಟ್ಸ್ ಸಿಗುತ್ತಿದ್ದವೋ?

    ಅದೆಷ್ಟು ಲೈಕ್ಸ್, ಇನ್ನೆಷ್ಟು ಟ್ವೀಟ್ಸ್ ಸಿಗುತ್ತಿದ್ದವೋ?

    ಪ್ರೇಕ್ಷಕರು ಖಳನಟ ಆಗಮನವಾಯಿತು. ಇನ್ನೇನು ಕಾದಿದೆಯೋ ಏನೋ ಎಂದುಕೊಳ್ಳುತ್ತಾರೆ. ಆದರೆ ಚಿತ್ರದಲ್ಲಿನ ಅವರ ಪಾಸಿಟೀವ್ ರೋಲ್ ಮನಸ್ಸಿಗೆ ಪ್ರಬಲವಾಗಿ ನಾಟಿಬಿಡುತ್ತದೆ. ಬಹುಶಃ ಆಗೇನಾದರೂ ಫೇಸ್ ಬುಕ್, ಟ್ವಿಟ್ಟರ್ ಇದ್ದಿದ್ದರೆ ವಜ್ರಮುನಿಗೆ ಅದೆಷ್ಟು ಲೈಕ್ಸ್, ಇನ್ನೆಷ್ಟು ಟ್ವೀಟ್ಸ್ ಸಿಗುತ್ತಿದ್ದವೋ?

    ಪಾತ್ರಗಳಿಗೆ ಪರಕಾಯ ಪ್ರವೇಶ

    ಪಾತ್ರಗಳಿಗೆ ಪರಕಾಯ ಪ್ರವೇಶ

    ಆಗಲೇ ನಿರ್ದೇಶಕರು, ನಿರ್ಮಾಪಕರು ಅವರಲ್ಲಿನ ನಾಯಕ ನಟನನ್ನು ಗಮನಿಸಬೇಕಾಗಿತ್ತು. ಆದರೆ ಅವರು ಕಣ್ಣಿಗೆ ವಜ್ರಮುನಿ ಖಳನಟನಾಗಿಯೇ ಕಾಣಿಸುತ್ತಿದ್ದ. ಕಡೆಗೆ ಅವರು ಕೊಟ್ಟಂತಹ ಕ್ರೂರ ಪಾತ್ರಗಳಲ್ಲಿ ಲೀನವಾಗುತ್ತಿದ್ದರು.

    ನಿರ್ಮಾಪಕನಾಗಿ ಕೈಸುಟ್ಟುಕೊಂಡ ವಜ್ರಮುನಿ

    ನಿರ್ಮಾಪಕನಾಗಿ ಕೈಸುಟ್ಟುಕೊಂಡ ವಜ್ರಮುನಿ

    ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ ವಜ್ರಮುನಿ ಅವರು ಕೆಲವು ಚಿತ್ರಗಳನ್ನು ನಿರ್ಮಿಸಲು ಮುಂದಾದರು. ತಾಯಿಗಿಂತ ದೇವರಿಲ್ಲ, ಬ್ರಹ್ಮಾಸ್ತ್ರ, ರಣಭೇರಿ ಹಾಗೂ ಗಂಡಭೇರುಂಡ ಅವರು ನಿರ್ಮಿಸಿದ ಚಿತ್ರಗಳು. ಆದರೆ ಈ ಚಿತ್ರಗಳು ಅವರ ಕನಸನ್ನು ಭಗ್ನ ಮಾಡಿದವು.

    ತಂದೆ ಬಯಸಿದ್ದು ಮಗ ಇಂಜಿನಿಯ ಆಗಬೇಕೆಂದು

    ತಂದೆ ಬಯಸಿದ್ದು ಮಗ ಇಂಜಿನಿಯ ಆಗಬೇಕೆಂದು

    ತನ್ನ ಮಗ ಇಂಜಿನಿಯರ್ ಆಗಬೇಕೆಂದು ವಜ್ರಮುನಿ ಅವರ ತಂದೆ ಬಯಸಿದ್ದರು. ಮನೆಯಲ್ಲಿ ತೀವ್ರ ವಿರೋಧವಿದ್ದರೂ ಅದನ್ನು ಲೆಕ್ಕಿಸದೆ ವಜ್ರಮುನಿ ನಟನಾಗಿ ಪ್ರಚಂಡ ಅಭಿನಯ ನೀಡಿದರು. ಬಹುಶಃ ಅವರು ಇಂಜಿನಿಯರ್ ಆಗಿದ್ದರೆ ಇಷ್ಟೆಲ್ಲರ ಹೃದಯ ಗೆಲ್ಲುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ನಟನಾಗಿ ಕರ್ನಾಟಕದ ಮನೆಮಾತಾಗಿ ಅವರ ಹೃದಯ ಸಿಂಹಾಸನದಲ್ಲಿ ಚಿರಸ್ಥಾಯಿಯಾಗಿ ಉಳಿದರು.

    ರಾಜಕೀಯದಲ್ಲೂ ನಿರೀಕ್ಷೆಗಳು ತಲೆಕೆಳಗಾದವು

    ರಾಜಕೀಯದಲ್ಲೂ ನಿರೀಕ್ಷೆಗಳು ತಲೆಕೆಳಗಾದವು

    ತೊಂಬತ್ತರ ದಶಕದಲ್ಲಿ ರಾಜಕೀಯ ರಂಗದಲ್ಲೂ ವಜ್ರಮನಿ ಒಂದು ಕೈ ನೋಡಿದರು. ಆದರೆ ಅಲ್ಲಿ ಅವರ ನಿರೀಕ್ಷೆಗಳು ತಲೆಕೆಳಗಾದವು. ಬಹುಶಃ ಅವರು ನಟನಾಗಿಯೇ ಕನ್ನಡ ಚಿತ್ರರಸಿಕರ ಮನಗೆಲ್ಲಬೇಕಾಗಿತ್ತು ಎಂದು ಬರೆದಿತ್ತೇನೋ! ಜೀವನದಲ್ಲಿ ಸಾಕಷ್ಟು ನೋವುಗಳನ್ನು ಕಂಡ ವಜ್ರಮುನಿ ಅವರು ನಿಧನರಾದಾಗ ಅವರಿಗೆ ಆಗಿನ್ನೂ 62ರ ಪ್ರಾಯ.

    English summary
    Vajramuni (1944-2006) started his career with Mallammana Pavada playing a villain against Dr. Rajkumar, and this performance was appreciated by many. Born on Thu, married on Thu, died on Thursday, Kannada actor Vajramuni 6th death anniversary Today. He excelled in villain roles.
    Sunday, January 20, 2013, 13:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X